Tag: Pandavapura

ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ: ಸಣ್ಣ ನೀರಾವರಿ ಸಚಿವ ಪುಟ್ಟರಾಜು ಘೋಷಣೆ
ಮಂಡ್ಯ

ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ: ಸಣ್ಣ ನೀರಾವರಿ ಸಚಿವ ಪುಟ್ಟರಾಜು ಘೋಷಣೆ

June 26, 2018

ಪಾಂಡವಪುರ: ತಾಲೂಕಿನ ಮೇಲುಕೋಟೆ ಹೋಬಳಿ ಬಳಘಟ್ಟ ಗ್ರಾಮದ ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಳಘಟ್ಟ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳು ನೀರಾ ವರಿಯಿಂದ ವಂಚಿತವಾಗಿವೆ. ಇಲ್ಲಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ದೊರಕುತ್ತಿಲ್ಲ. ಜನ ಜಾನುವಾರು ಗಳಿಗೂ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು,…

ಬಜೆಟ್‍ನಲ್ಲಿ ಸಾಲಮನ್ನಾ ಘೋಷಣೆ ಸಾಧ್ಯತೆ: ಸಿಎಸ್‍ಪಿ
ಮಂಡ್ಯ

ಬಜೆಟ್‍ನಲ್ಲಿ ಸಾಲಮನ್ನಾ ಘೋಷಣೆ ಸಾಧ್ಯತೆ: ಸಿಎಸ್‍ಪಿ

June 26, 2018

ಪಾಂಡವಪುರ: ಚುನಾವಣೆಗೂ ಮುನ್ನಾ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಭರ ವಸೆಯಂತೆ ರೈತರ ಸಾಲಮನ್ನಾ ಮಾಡುವ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಸಣ್ಣ ನೀರಾ ವರಿ ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ ವ್ಯಕ್ತ ಪಡಿಸಿದರು. ಪಟ್ಟಣದ ಕೃಷ್ಣಾ ನಗರದ ತಮ್ಮ ನಿವಾಸದ ಎದುರು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ನಂತರ ಮಾತನಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದು, ರೈತರಿಗೆ ಅನುಕೂಲವಾಗುವ ಹೊಸ…

ಠಾಣೆಯಲ್ಲೇ ಮಹಿಳಾ ಎಸ್‍ಐಗೆ ಸೀಮಂತ ಸಂಭ್ರಮ!
ಮಂಡ್ಯ

ಠಾಣೆಯಲ್ಲೇ ಮಹಿಳಾ ಎಸ್‍ಐಗೆ ಸೀಮಂತ ಸಂಭ್ರಮ!

June 24, 2018

ಮಂಡ್ಯ: ಗರ್ಭಿಣಿಯರಿಗೆ ಅವರ ಕುಟುಂಬ ವರ್ಗ, ಬಂಧು ಬಳಗ ದವರು ಸೀಮಂತ ಮಾಡುವುದು ಸರ್ವೇ ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಪಾಂಡವಪುರ ಪೊಲೀಸ್ ಠಾಣೆ ಸಿಬ್ಬಂದಿಯೇ ಸೀಮಂತ ಮಾಡಿರುವÀ ವಿಶಿಷ್ಠ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿ ರುವ ಸುಮಾರಾಣ ಅವರ ಸೀಮಂತ ಕಾರ್ಯಕ್ರಮವನ್ನು ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಠಾಣೆಯಲ್ಲಿ ಹಿಂದೂ ಸಂಪ್ರಾದಯದಂತೆ ಸೀಮಂರ ಕಾರ್ಯವನ್ನು ನೆರವೇರಿಸಲಾಯಿತು. ಸಬ್…

ಗಣ್ಯ ವ್ಯಕ್ತಿಗಳ ಜಯಂತಿಗೆ ಗೈರಾಗುವ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ
ಮಂಡ್ಯ

ಗಣ್ಯ ವ್ಯಕ್ತಿಗಳ ಜಯಂತಿಗೆ ಗೈರಾಗುವ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ

June 24, 2018

ಪಾಂಡವಪುರ:  ತಾಲೂಕು ಆಡಳಿತದ ವತಿಯಿಂದ ಆಚರಿಸುವ ಗಣ್ಯರ ಜಯಂತಿ ಹಾಗೂ ಪೂರ್ವಭಾವಿ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷೆ ಪೂರ್ಣಿಮಾ ಸೂಚಿಸಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದ ಅವರು, ಮಹಾನ್ ನಾಯಕರ ಜಯಂತಿಗಳಿಗೆ ತಾಲೂಕು ಮಟ್ಟದ ಅಧಿ ಕಾರಿಗಳು ಬಹುತೇಕ ಗೈರಾಗುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ತಹಶೀ ಲ್ದಾರ್ ಅವರು ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ತಹಶೀಲ್ದಾರ್ ಡಿ.ಹನುಮಂತ…

ತಾಪಂ ಆವರಣದಲ್ಲಿ ಪರಿಸರ ದಿನಾಚರಣೆ
ಮಂಡ್ಯ

ತಾಪಂ ಆವರಣದಲ್ಲಿ ಪರಿಸರ ದಿನಾಚರಣೆ

June 23, 2018

ಪಾಂಡವಪುರ: ಪಟ್ಟಣದ ತಾಪಂ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಅಧ್ಯಕ್ಷೆ ಪೂರ್ಣಿಮಾ, ಮನುಷ್ಯರು ತಮ್ಮ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುತ್ತಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಯಾಗದೇ ಹಲವು ಪ್ರಾಕೃತಿಕ ವಿಕೋಪ ಗಳು ಸಂಭವಿಸುತ್ತಿವೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಇಡೀ ಸಮಾಜವೇ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪರಿಸರ ಸಂರಕ್ಷಣೆ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಆದ್ದರಿಂದ…

ದಲಿತ ಮುಖಂಡ ಶಿವಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ
ಮಂಡ್ಯ

ದಲಿತ ಮುಖಂಡ ಶಿವಣ್ಣಗೆ ಭಾವಪೂರ್ಣ ಶ್ರದ್ಧಾಂಜಲಿ

June 17, 2018

ಪಾಂಡವಪುರ: ನಮ್ಮ ಕುಟುಂಬದೊಂದಿಗೆ ದಲಿತ ಮುಖಂಡ ದಿವಂಗತ ಶಿವಣ್ಣ ಅವರು ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದರು ಎಂದು ಜಿಪಂ ಸದಸ್ಯ ಸಿ.ಅಶೋಕ್ ತಿಳಿಸಿದರು. ಪಟ್ಟಣದ ಕಸಾಪ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಮುಖಂಡ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಸಣಬ ಶಿವಣ್ಣ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಶಿವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಶಿವಣ್ಣ ಅವರ ಅಕಾಲಿಕ ನಿಧನ ನಮ್ಮ ಇಡೀ ಕುಟುಂಬಕ್ಕೆ ಅತೀವ ನೋವುಂಟು ಮಾಡಿದೆ. ಶಿವಣ್ಣ ಅವರ ಕುಟುಂಬಕ್ಕೆ ನಮ್ಮ…

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ
ಮಂಡ್ಯ

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ

June 12, 2018

ಮಂಡ್ಯ: ಬಹುಭಾಷಾ ನಟ ಪ್ರಕಾಶ್ ರೈ ಅವರು ಸೋಮವಾರ ಜಿಲ್ಲೆ ಯಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಕೆ.ಆರ್.ಪೇಟೆಯ ಸರ್ಕಾರಿ ಶತ ಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ ಶಾಲೆ ಹಾಗೂ ಭಾರತೀನಗರದ ಮೆಣಸ ಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು. ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳದ್ದಲ್ಲಿ ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮವಾಗ…

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ
ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ

June 9, 2018

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರ ದಿಂದ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 83.92ರಷ್ಟು ಮತದಾನವಾಗಿದೆ.ಮಂಡ್ಯ ನಗರದಲ್ಲಿ 3 ಮತಗಟ್ಟೆ ಕೇಂದ್ರ ಗಳನ್ನು ಸ್ಥಾಪಿಸಲಾಗಿತ್ತು. ಮಳವಳ್ಳಿ, ಮದ್ದೂರು, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಶಾಂತಿ ಯುತವಾಗಿ ನಡೆಯಿತು. ಪಾಂಡವಪುರ ಅತೀ ಹೆಚ್ಚು ಶೇ.92. 19ರಷ್ಟು ಮತಚಲಾವಣೆ ಯಾದರೆ, ಶ್ರೀರಂಗ ಪಟ್ಟಣದಲ್ಲಿ ಅತೀ ಕಡಿಮೆ ಶೇ.71.60ರಷ್ಟು ಮತದಾನವಾಗಿದೆ. ಇನ್ನುಳಿದಂತೆ…

ಶಾಲಾ ಬಸ್ ಬೈಕ್‍ಗೆ ಡಿಕ್ಕಿ: ಸವಾರ ಸಾವು
ಮಂಡ್ಯ

ಶಾಲಾ ಬಸ್ ಬೈಕ್‍ಗೆ ಡಿಕ್ಕಿ: ಸವಾರ ಸಾವು

June 8, 2018

ಪಾಂಡವಪುರ: ಶಾಲಾ ವಾಹನ ಹಾಗೂ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿ ರುವ ಘಟನೆ ತಾಲೂಕಿನ ಕಾಮನಾಯಕನಹಳ್ಳಿ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಸಣಬ ಗ್ರಾಮದ ನಿವಾಸಿ ಹಾಗೂ ಗ್ರಾಪಂ ಸದಸ್ಯ ಶಿವಣ್ಣ(43) ಅಪ ಘಾತದಲ್ಲಿ ಮೃತಪಟ್ಟವರು. ಘಟನೆ ಹಿನ್ನೆಲೆ: ಚಿನಕುರುಳಿಯ ಎಸ್‍ಟಿಜಿ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಗುರುವಾರ ಬೆಳಿಗ್ಗೆ ಕಾಮನಾಯಕನ ಹಳ್ಳಿಯಿಂದ ಶಾಲಾ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ವೇಳೆ ಗ್ರಾಮದ ತಿರುವಿನಲ್ಲಿ ಶಿವಣ್ಣ ಅವರ ಬೈಕ್‍ಗೆ ಡಿಕ್ಕಿ…

ಜಿಲ್ಲಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ವಿಫಲ
ಮಂಡ್ಯ

ಜಿಲ್ಲಾದ್ಯಂತ ಕರ್ನಾಟಕ ಬಂದ್ ಸಂಪೂರ್ಣ ವಿಫಲ

May 29, 2018

ಮಂಡ್ಯ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಕರ್ನಾಟಕ ಬಂದ್ ಮಂಡ್ಯ ಜಿಲ್ಲಾದ್ಯಂತ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿ ಸಿದ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಬಗ್ಗೆ ದ್ವಂದ್ವ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಬಂದ್‍ಗೆ ಕರೆ ನೀಡಿದ್ದರು. ಹೀಗಾಗಿ ಸೋಮ ವಾರ ನಡೆದ ರಾಜ್ಯ ಬಂದ್‍ಗೆ ಯಾವುದೇ ಸಂಘಟನೆ ಬೆಂಬಲ ಸೂಚಿಸದ ಹಿನ್ನೆಲೆ ಯಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿ,…

1 2 3 4
Translate »