ಶಾಲಾ ಬಸ್ ಬೈಕ್‍ಗೆ ಡಿಕ್ಕಿ: ಸವಾರ ಸಾವು
ಮಂಡ್ಯ

ಶಾಲಾ ಬಸ್ ಬೈಕ್‍ಗೆ ಡಿಕ್ಕಿ: ಸವಾರ ಸಾವು

June 8, 2018

ಪಾಂಡವಪುರ: ಶಾಲಾ ವಾಹನ ಹಾಗೂ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿ ರುವ ಘಟನೆ ತಾಲೂಕಿನ ಕಾಮನಾಯಕನಹಳ್ಳಿ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.ತಾಲೂಕಿನ ಸಣಬ ಗ್ರಾಮದ ನಿವಾಸಿ ಹಾಗೂ ಗ್ರಾಪಂ ಸದಸ್ಯ ಶಿವಣ್ಣ(43) ಅಪ ಘಾತದಲ್ಲಿ ಮೃತಪಟ್ಟವರು.

ಘಟನೆ ಹಿನ್ನೆಲೆ: ಚಿನಕುರುಳಿಯ ಎಸ್‍ಟಿಜಿ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಗುರುವಾರ ಬೆಳಿಗ್ಗೆ ಕಾಮನಾಯಕನ ಹಳ್ಳಿಯಿಂದ ಶಾಲಾ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ವೇಳೆ ಗ್ರಾಮದ ತಿರುವಿನಲ್ಲಿ ಶಿವಣ್ಣ ಅವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡಿದ್ದ ಶಿವಣ್ಣ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಶಾಲಾ ಆಡಳಿತ ಮಂಡಳಿ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿ ಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಶಾಲಾ ಮಕ್ಕಳಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಶಾಲಾ ಬಸ್ ಚಾಲಕ ಮೃತ ಶಿವಣ್ಣ ಅವರ ಸಂಬಂಧಿ ಎನ್ನಲಾಗಿದೆ. ಮೃತ ಶಿವಣ್ಣ ಲಕ್ಷ್ಮೀಸಾಗರ ಗ್ರಾಪಂ ಸದಸ್ಯರಾಗಿ ದ್ದರು. ಜೊತೆಗೆ ಆ ಭಾಗದ ಪ್ರಭಾವಿ ಜೆಡಿಎಸ್ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡ ರಾಗಿದ್ದರು. ಘಟನೆಯಿಂದಾಗಿ ಜೆಡಿಎಸ್ ಮುಖಂಡರು ಹಾಗೂ ದಸಂಸ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂತ್ವನ: ವಿಷಯ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಎಸ್‍ಟಿಜಿ ಪಬ್ಲಿಕ್ ಶಾಲೆ ಸಿಇಓ ಸಿ.ಪಿ.ಶಿವರಾಜು ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಭಾವುಕರಾಗಿ ಮಾತನಾಡಿದ ಅವರು, ಈ ಘಟನೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಮೃತ ಶಿವಣ್ಣ ಅವರ ಮಕ್ಕಳಿಗೆ ತಮ್ಮ ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದು. ಅಲ್ಲದೇ ಅವರು ಎಲ್ಲಿಯವರೆಗೂ ಓದುತ್ತಾರೋ ಅಲ್ಲಿಯವರೆಗೆ ಉಚಿತವಾಗಿ ಶಿಕ್ಷಣ ಕೊಡಿಸ ಲಾಗುವುದು ಎಂದು ಭರವಸೆ ನೀಡಿದರು.

ಸಚಿವರಿಂದ ಸಂತಾಪ: ನೂತನ ಸಚಿವ ಸಿ.ಎಸ್.ಪುಟ್ಟರಾಜು ಅವರು ಮುಖ್ಯಮಂತ್ರಿ ಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಬೇಕಾಗಿರುವುದರಿಂದ ಘಟನಾ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಮೃತ ಶಿವಣ್ಣ ನಮ್ಮ ಪಕ್ಷದ ನಿಷ್ಠಾವಂತ ಮುಖಂಡ. ಮೃತರ ನಿಧನ ನಮಗೆ ವೈಯುಕ್ತಿಕವಾಗಿ ತೀವ್ರ ನೋವುಂಟು ಮಾಡಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ದೂರವಾಣ ಮೂಲಕ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಜಿಪಂ ಸದಸ್ಯರಾದ ಸಿ.ಅಶೋಕ್, ಶಾಂತಲಾ ರಾಮಕೃಷ್ಣ, ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ.ಶಿವಕುಮಾರ್, ಮಾಜಿ ಜಿಪಂ ಸದಸ್ಯೆ ನಾಗಮ್ಮ ಪುಟ್ಟ ರಾಜು, ದಸಂಸ ಮುಖಂಡ ಎಂ.ಬಿ. ಶ್ರೀನಿವಾಸ್ ಮೃತರ ಶವ ಸಂಸ್ಕಾರದಲ್ಲಿ ಪಾಲ್ಗೊಂಡು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Translate »