ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಪ್ರತಿಭಟನೆ
ಮಂಡ್ಯ

ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಪ್ರತಿಭಟನೆ

June 8, 2018

ಮಂಡ್ಯ: ಜಿಲ್ಲೆಯ ವಿವಿಧೆಡೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಮಂಡ್ಯದಲ್ಲಿ ಕಾಲಾ ಚಿತ್ರದ ವಿರುದ್ಧ ಕನ್ನಡ ಸೇನೆ, ಕದಂಬ ಸೈನ್ಯ, ಅಕ್ರಮ ಖಾತೆ ವಿರುದ್ಧ ಬೂದನೂರು ಗ್ರಾಪಂ ಎದುರು ಗ್ರಾಮಸ್ಥರು, ಮದ್ದೂರಲ್ಲಿ ನೀರು ಘಂಟಿ ಗಳು, ಕೆ.ಆರ್.ಪೇಟೆಯಲ್ಲಿ ಸಚಿವ ಸ್ಥಾನ ನೀಡದಿರುವ ಕ್ರಮ ಖಂಡಿಸಿ ಮಾದಿಗ ಸಮುದಾಯ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ: ಬಹುಭಾಷಾ ನಟ ರಜನಿ ಕಾಂತ್ ಅಭಿಯನದ ‘ಕಾಲಾ’ ಚಿತ್ರ ಬಿಡು ಗಡೆ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಂಡ್ಯದ ಕಾವೇರಿ ಉದ್ಯಾನ ಬಳಿ ಕನ್ನಡ ಸೇನೆ ಮತ್ತು ಕದಂಬ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು. ‘ಕಾಲಾ’ ಚಿತ್ರ ಬಿಡುಗಡೆ ಮಾಡ ದಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಕನ್ನಡಿಗರು ಚಿತ್ರ ಬಹಿಷ್ಕರಿಸುವಂತೆ ಮನವಿ ಮಾಡಿದರು.

ಬೂದನೂರು: ಗ್ರಾಪಂ ಆಡಳಿತ ಮಂಡಳಿ ಅನುಮತಿ ಪಡೆಯದೇ ಪಿಡಿಓ ಹಾಗೂ ಕಾರ್ಯದರ್ಶಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಹಳೇ ಬೂದನೂರು ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಪ್ರತಿಭಟನೆ ನಡೆಸಿದರು.ಬೂದನೂರು ಗ್ರಾಪಂ ವ್ಯಾಪ್ತಿಯ ವಿವಾದಾತ್ಮಕ ಜಾಗವನ್ನು ಗ್ರಾಮದ ದಿನೇಶ್ ಹಾಗೂ ಪ್ರಭಾವತಿ ಎಂಬುವರಿಗೆ ಖಾತೆ ಮಾಡಿಕೊಟ್ಟಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಡಿಓ ಹಾಗೂ ಕಾರ್ಯದರ್ಶಿಗಳು ಜನಪ್ರತಿನಿಧಿಗಳನ್ನಾಗಲೀ, ಸಾರ್ವಜನಿಕ ರನ್ನಾಗಲೀ ಲೆಕ್ಕಕ್ಕೆ ತೆಗೆದುಕೊಳ್ಳದೇ ಏಕಾ ಏಕಿ ನಿರ್ಧಾರ ಕೈಗೊಳ್ಳುತ್ತಾರೆ. ಕೂಡಲೇ ಇವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ತಾಪಂ ಇಓ ನಾಗರಾಜು ಭೇಟಿ ನೀಡಿ ಅಹವಾಲು ಸ್ವೀಕರಿಸಿ ಮೇಲಾಧಿ ಕಾರಿಗಳಿಗೆ ಈ ಕುರಿತು ವರದಿ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಬಿಗಿ ಬಂದೋಬಸ್ತ್: ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆ ಯದಂತೆ ಪೆÇಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.ಗ್ರಾಪಂ ಅಧ್ಯಕ್ಷ ಬಿ.ಶೋಭಾ, ಗ್ರಾಪಂ ಸದಸ್ಯರಾದ ಬಿ.ಎಸ್.ಮಧು, ಶಿವಲಿಂಗ, ಆಶಾ, ವೀಣಾ, ಶೋಭಾ, ಬಿ.ಕೆ.ಸತೀಶ್, ಮುಖಂಡರಾದ ಬೂದನೂರುಸ್ವಾಮಿ, ರವಿ, ಜಗದೀಶ್, ರಾಮು, ಸಿದ್ದು, ರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮದ್ದೂರು: ನೀರು ಗಂಟಿಗಳಿಗೆ ವೇತನ ನೀಡದ ಕಾವೇರಿ ನೀರಾವರಿ ಇಲಾಖೆ ಕ್ರಮ ಖಂಡಿಸಿ, ಕಚೇರಿ ಆವರಣದಲ್ಲಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಜನವರಿ ತಿಂಗಳಿಂದ ಸಂಬಳ ನೀಡದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಕಾರ್ಯದರ್ಶಿ ಸುರೇಶ್ ಮಾತ ನಾಡಿ, 6 ತಿಂಗಳಿಂದ ನಮಗೆ ವೇತನ ನೀಡಿದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳನ್ನು ಶಾಲೆ, ಕಾಲೇಜಿಗೆ ಸೇರಿಸಲು ಹಣ ಇಲ್ಲದಂತಾಗಿದೆ. ನಮ್ಮ ಕಷ್ಟಗಳನ್ನು ಅರಿತು ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಸೋಮವಾರದೊಳಗೆ ವೇತನ ಬಿಡು ಗಡೆ ಮಾಡದಿದ್ದರೆ ಸೋಮವಾರದಿಂದ ಕಚೇರಿ ಆವರಣದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಾವೇರಿ ನೀರಾವರಿ ಇಲಾಖೆಯ ಎಇಇ ತಮ್ಮಣ್ಣ ಮಾತನಾಡಿ, ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ವೇತನ ನೀಡಿಲ್ಲ. ಶೀಘ್ರ ಸಂಬಳ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಮಾಯಣ್ಣ, ಉಪಾಧ್ಯಕ್ಷ ಜಗದೀಶ್, ಖಜಾಂಚಿ ಬಸವರಾಜು, ಮುಖಂಡ ರಾದ ನರಸಿಂಹ, ಶಂಕರ್‍ರಾವ್, ಪುಟ್ಟೇಗೌಡ, ರಘು, ಅಲಮೇಲಮ್ಮ, ಭಾರತಿ ಸೇರಿದಂತೆ ಇನ್ನಿತರರಿದ್ದರು.

Translate »