ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ
ಮಂಡ್ಯ

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ

June 12, 2018

ಮಂಡ್ಯ: ಬಹುಭಾಷಾ ನಟ ಪ್ರಕಾಶ್ ರೈ ಅವರು ಸೋಮವಾರ ಜಿಲ್ಲೆ ಯಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಕೆ.ಆರ್.ಪೇಟೆಯ ಸರ್ಕಾರಿ ಶತ ಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ ಶಾಲೆ ಹಾಗೂ ಭಾರತೀನಗರದ ಮೆಣಸ ಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು.

ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳದ್ದಲ್ಲಿ ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮವಾಗ ಲಿದೆ ಎಂದು ಖ್ಯಾತ ಬಹುಭಾಷಾ ನಟ ಹಾಗೂ ಪ್ರಗತಿಪರ ಚಿಂತಕ ಪ್ರಕಾಶ್ ರೈ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಶತಮಾನದ ಶಾಲೆಗೆ ಭೇಟಿ ನೀಡಿದ ಅವರು, ಕೆÉೀವಲ 4 ವರ್ಷ ಗಳಲ್ಲಿ ಶಾಲೆಗೆ ಅಧಿಕ ಮಕ್ಕಳನ್ನು ಸೇರಿಸಿಕೊಳ್ಳುವ ಮೂಲಕ ಶಾಲೆಯ ಅಭಿವೃದ್ಧಿಗೆ ಕೈಜೋಡಿ ಸಿರುವ ಎಸಿ ಡಾ.ಹೆಚ್‍ಎಲ್.ನಾಗರಾಜು ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ, ಹಾಗೂ ಶಿಕ್ಷಕರ ಕಾರ್ಯ ದಕ್ಷತೆ ಬಗ್ಗೆ ಪ್ರಶಂಸಿದರು.

ರಾಜ್ಯ ಸರ್ಕಾರ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಕ್ಷರ ದಾಸೋಹ, ಶಾಲಾ ಸಮವಸ್ತ್ರ, ನೋಟ್‍ಬುಕ್, ಶಾಲಾ ಬ್ಯಾಗ್, ಶೂ, ವಿದ್ಯಾರ್ಥಿ ವೇತನ, ಹಾಲು ಸೇರಿದಂತೆ ಉಚಿತ ಕಡ್ಡಾಯ ಶಿಕ್ಷಣ ಅನು ಷ್ಠಾನಕ್ಕಾಗಿ ಕೋಟ್ಯಾಂತರ ರೂ. ವೆಚ್ಚ ಮಾಡು ತ್ತಿದ್ದರೂ, ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬರದೇ ಶಾಲೆ ಬಾಗಿಲನ್ನು ಮುಚ್ಚಬೇಕಾ ದಂತಹ ಪರಿಸ್ಥಿತಿ ಎದುರಾಗಿದ್ದು, ಬಡವರ ಮಕ್ಕಳು ಶಿಕ್ಷಣ ಪಡೆಯಲು ಮುಂದಿನ ದಿನ ಗಳಲ್ಲಿ ಭಾರೀ ಹೋರಾಟ ನಡೆಸಬೇಕಾದ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಪೋಷಕರು ಕಾನ್ವೆಂಟ್ ವ್ಯಾಮೋಹಕ್ಕೆ ಬಲಿಯಾಗದೇ ತಮ್ಮ ಮಕ್ಕಳನ್ನು ಸರ್ಕಾರ ಶಾಲೆಗಳಿಗೆ ಸೇರಿಸಬೇಕು ಎಂದು ಆಗ್ರಹಿಸಿ ದರು. ಕಳೆದ 4 ವರ್ಷಗಳ ಹಿಂದೆ ಕೇವಲ 132 ಮಕ್ಕಳನ್ನು ಹೊಂದಿದ್ದ ಸರ್ಕಾರಿ ಶತಮಾನದ ಶಾಲೆಯು ಶಿಕ್ಷಕರು, ಸಮುದಾಯ, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲಾ ಅಭಿ ವೃದ್ಧಿ ಸಮಿತಿ ಹೋರಾಟ ಹಾಗೂ ಶ್ರಮದ ಫಲವಾಗಿ ಇಂದು 600 ಮಕ್ಕಳ ಗಡಿ ದಾಟಿ ಮುನ್ನಡೆದಿರುವುದು ರಾಜ್ಯಕ್ಕೆ ಮಾದರಿ ಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಪಂ ಸದಸ್ಯ ರಾಮ ದಾಸ್, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಬಿ.ಎ. ಸುರೇಶ್, ರೋಬೋ ತಜ್ಞ ಮಂಜೇಗೌಡ, ಸಹಕಾರಿ ಧುರೀಣ ಎಸ್.ಎಲ್.ಮೋಹನ್, ಬಿಇಓ ಬೆಟ್ಟನಾಯಕ್, ಕ್ಷೇತ್ರ ಸಮನ್ವಯಾ ಧಿಕಾರಿ ಲಿಂಗರಾಜು, ಶಿಕ್ಷಣ ಸಂಯೋಜಕ ಧರ್ಮರಾಜ್, ಎಸ್‍ಡಿಎಂಸಿ ಸಮಿತಿ ವಾಸು, ಎನ್.ಜೆ.ಮಂಜು, ಮಂಡ್ಯ ಜನಶಕ್ತಿ ಸಂಘಟನೆ ಮಲ್ಲಿಗೆ, ರೈತ ಮುಖಂಡರಾದ ರಾಜೇಗೌಡ, ನಂದಿನಿ ಜಯರಾಂ, ಶಂಕರ್, ನಾಗರಾಜು, ರಘು, ಕೆ.ಎಸ್.ಸೋಮಶೇಖರ್, ಕೆ.ಆರ್. ಪುಟ್ಟಸ್ವಾಮಿ, ಮಂಜುನಾಥ, ಸಾಹಿತಿ ಬಲ್ಲೇನ ಹಳ್ಳಿ ಮಂಜುನಾಥ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಮಂಜು ನಾಥ್, ಮಕ್ಕಳ ಪೋಷಕರು, ವಿವಿಧ ಸಂಘ ಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಭಾರತೀನಗರ: ಸರ್ಕಾರಿ ಶಾಲೆಗಳ ದುರ್ಗತಿಗೆ ನಾವೇ ಕಾರಣ. ಖಾಸಗಿ ಶಾಲೆಗೆ ಸೇರಿದಾಕ್ಷಣ ಮಕ್ಕಳು ವಿದ್ಯಾವಂತರಾಗು ತ್ತಾರೆಂಬ ಮೂಢನಂಬಿಕೆ ಬಿಡಬೇಕೆಂದು ನಟ ಪ್ರಕಾಶ್ ರೈ ತಿಳಿಸಿದರು.

ಇಲ್ಲಿಗೆ ಸಮೀಪದ ಮೆಣಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಅಧೋಗತಿಗೆ ನಾವೇ ಕಾರಣ. ಏಕೆಂದರೆ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಲಿಯಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಂತಕ್ಕೆ ತಂದಿ ದ್ದೇವೆಂದು ವಿಷಾದ ವ್ಯಕ್ತಪಡಿಸಿದರು.

ಖಾಸಗಿ ಶಾಲಾ-ಕಾಲೇಜುಗಳ ಬಗ್ಗೆ ನಾನು ಆರೋಪಿಸುತ್ತಿಲ್ಲ. ಸರ್ಕಾರಿ ಶಾಲೆ ಗಳನ್ನು ಮಾದರಿ ಶಾಲೆಯನ್ನಾಗಿ ಮಾಡಲು ಎಲ್ಲರೂ ಪಣ ತೊಡಬೇಕು. ಹಾಗೆಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಲ್ಲ, ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬಿಟ್ಟು ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಲು ಪಣ ತೊಡಬೇಕು. ಎಲ್ಲಾ ಮೂಲ ಸೌಕರ್ಯಗಳು ದೊರೆತಾಗ ದೇಶಾದ್ಯಂತ ಇರುವ ಸರ್ಕಾರಿ ಶಾಲೆಗಳಿಗೆ ಬೆಲೆ ಸಿಕ್ಕಂತಾಗುತ್ತದೆ ಎಂದರು.

ನಾನು ರಾಜಕಾರಣಿ ಅಲ್ಲ, ಓಟು ಕೇಳಲು ಬಂದಿಲ್ಲ. ಸರ್ಕಾರವನ್ನು ಟೀಕಿಸುವುದು ಇಲ್ಲ, ನಾನು ಸಮಾಜ ಸೇವೆ ಮಾಡಲು ಬಂದಿದ್ದೇನೆ. ಜನರಿಗೆ ಅರಿವು ಮೂಡಿಸುವುದು ನನ್ನ ಆದ್ಯ ಕರ್ತವ್ಯ. ದೇಶದ ಭವಿಷ್ಯ ಮಕ್ಕಳ ಮೇಲೆ ನಿಂತಿದೆ. ಆ ಭವಿಷ್ಯ ಉಜ್ವಲಗೊಳಿ ಸಬೇಕಾದರೆ ಶಾಲೆಗಳು ಅಭಿವೃದ್ಧಿಗೊಳ್ಳ ಬೇಕು. ಪ್ರತಿಯೊಬ್ಬ ಬಡವರಿಗೂ ಉತ್ತಮ ಶಿಕ್ಷಣ ದೊರಬೇಕು ಎಂಬ ಉದ್ದೇಶ ನನ್ನದು ಎಂದರು. ಈ ವೇಳೆ ಹಿರಿಯ ಮುಖಂಡ ರಾಜಣ್ಣ, ಮಹೇಶ್, ಪಟೇಲ್ ಉಮೇಶ್ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು ಇನ್ನಿತರರಿದ್ದರು.

ಸರ್ಕಾರಿ ಶಾಲೆ ಶಿಕ್ಷಣ ಎಂದರೆ ಕಳಪೆ ಎಂಬ ಭಯ

ಪಾಂಡವಪುರ:  ಸರ್ಕಾರಿ ಶಾಲೆ ಶಿಕ್ಷಣ ಎಂದರೆ ಕಳಪೆ ದರ್ಜೆಯದು ಎಂಬ ಭಯವನ್ನು ಖಾಸಗಿ ಶಾಲೆಗಳು ಸೃಷ್ಟಿಸುವ ಮೂಲಕ ಶಿಕ್ಷಣವನ್ನು ಶ್ರೀಮಂತರ ಸ್ವತ್ತಾಗಿಸಿವೆ ಎಂದು ನಟ ಪ್ರಕಾಶ್ ರೈ ಆರೋಪಿಸಿದರು.

ಪಟ್ಟಣದ ಫ್ರೆಂಚ್‍ರಾಕ್ಸ್ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಖಾಸಗಿ ಶಾಲೆಗಳಿಗೆ ಬಡವರು ಹೆಚ್ಚು ಡೊನೇಶನ್ ನೀಡಿ ತಮ್ಮ ಮಕ್ಕಳನ್ನು ಓದಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಈಗಿರುವ ವ್ಯವಸ್ಥೆಯಲ್ಲಿ ಮಕ್ಕಳು ಉತ್ತಮವಾಗಿ ಕಲಿಯಲೂ ಆಗುತ್ತಿಲ್ಲ. ಈ ಕಾರಣದಿಂದ ಗ್ರಾಮೀಣ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರಿ ಶಾಲೆಗಳನ್ನು ಬೇರು ಮಟ್ಟದಿಂದ ಅಭಿವೃದ್ಧಿಪಡಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ. ಜೊತೆಗೆ ಈಗಿರುವ ಫ್ರೆಂಚ್‍ರಾಕ್ಸ್ ಶಾಲಾಭಿವೃದ್ಧಿ ಸಮಿತಿ ಈ ಶಾಲೆಯನ್ನು ಖಾಸಗಿ ಶಾಲೆಗಳ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದೆ. ಇದು ನನಗೆ ಉತ್ತೇಜನ ನೀಡಿದೆ. ರಾಜ್ಯದ ಸಾವಿರಾರು ಶಾಲೆಗಳ ಅಭಿವೃದ್ಧಿಗೆ ಇದು ಮಾರ್ಗದರ್ಶನ ನೀಡಲಿದೆ ಎಂದರು.

ಈ ವೇಳೆ ಎಸ್‍ಡಿಎಂಸಿ ಸಮಿತಿಯ ಎಚ್.ಆರ್.ಧನ್ಯಕುಮಾರ್, ಎಂ.ರಾಜೀವ್, ಮುಖ್ಯೋಪಾಧ್ಯಾಯ ಡಿ.ಸಿ.ಯೋಗಣ್ಣ ಶಾಲೆಗೆ ಅಗತ್ಯವಿರುವ ಇಂಗ್ಲೀಷ್ ಶಿಕ್ಷಕರು ಸೇರಿದಂತೆ ಇನ್ನಿತರ ವಿಷಯವನ್ನೊಳಗೊಂಡ ಮನವಿ ಪತ್ರವನ್ನು ಪ್ರಕಾಶ್ ರೈಗೆ ನೀಡಿದರು. ನಂತರ ಪ್ರಕಾಶ್ ರೈ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಬಿಸಿಯೂಟ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಜನಶಕ್ತಿ ಸಂಸ್ಥೆಯ ಮಲ್ಲಿಗೆ, ಸಮಾಜಕ್ಕಾಗಿ ಜನಾಂದೋಲನ ಸಂಸ್ಥೆಯ ಮುತ್ತುರಾಜ್, ಎಂ.ಎಚ್.ನಂದೀಶ್, ರಾಮಚಂದ್ರಪ್ಪ, ಡೈರಿ ಹುಚ್ಚೇಗೌಡ ಮತ್ತು ಶಾಲಾ ಶಿಕ್ಷಕರು ಸೇರಿದಂತೆ ಇತರರಿದ್ದರ

Translate »