ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ: ಸಣ್ಣ ನೀರಾವರಿ ಸಚಿವ ಪುಟ್ಟರಾಜು ಘೋಷಣೆ
ಮಂಡ್ಯ

ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ: ಸಣ್ಣ ನೀರಾವರಿ ಸಚಿವ ಪುಟ್ಟರಾಜು ಘೋಷಣೆ

June 26, 2018

ಪಾಂಡವಪುರ: ತಾಲೂಕಿನ ಮೇಲುಕೋಟೆ ಹೋಬಳಿ ಬಳಘಟ್ಟ ಗ್ರಾಮದ ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಳಘಟ್ಟ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳು ನೀರಾ ವರಿಯಿಂದ ವಂಚಿತವಾಗಿವೆ.

ಇಲ್ಲಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ದೊರಕುತ್ತಿಲ್ಲ. ಜನ ಜಾನುವಾರು ಗಳಿಗೂ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ 25 ಕೋಟಿ ಹಣ ನಿಗದಿಪಡಿಸಿ ಅತೀ ಶೀಘ್ರ ದಲ್ಲೇ ಬಳಘಟ್ಟ ಏತ ನೀರಾ ವರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕ್ಷೇತ್ರದಲ್ಲಿ ಕಂದಾಯ, ಕೃಷಿ, ನೀರಾವರಿ, ವಿದ್ಯುತ್, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲಾ ಇಲಾಖೆಗಳು ಜನ ಸ್ನೇಹಿಯಾಗಿ ಅತ್ಯಂತ ಜವಾಬ್ದಾರಿಯಿಂದ ಜನಪರ ಕೆಲಸ ಗಳನ್ನು ಮಾಡಬೇಕು. ವೃಥ ರೈತರನ್ನು ಮತ್ತು ಜನರನ್ನು ಅಲೆಸಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾ ಗುವುದು ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವ ಹೊಣೆ ನನ್ನ ಮೇಲಿದೆ. ನನ್ನ ಇಲಾಖೆಯ ಕೆಲಸಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸುವುದಾಗಿ ಅವರು ಹೇಳಿದರು.
ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆಯವರು ಎಲ್ಲೆಲ್ಲ್ಲಿ ವೈದ್ಯರ ಕೊರತೆ ಇದೆಯೋ ಅಲ್ಲಿಗೆ ಕೂಡಲೇ ವೈದ್ಯರನ್ನು ನಿಯುಕ್ತಿ ಮಾಡುವುದರ ಬಗ್ಗೆ ನನಗೆ ಮಾಹಿತಿ ನೀಡಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಗತಿ ಪರಿಶೀಲನಾ ಸಭೆಗೂ ಮುನ್ನಾ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ತಾಪಂ ವತಿಯಿಂದ ಆತ್ಮೀಯವಾಗಿ ಸನ್ಮಾನಿ ಸಲಾಯಿತು. ಇದೇ ವೇಳೆ ತಾಲೂಕಿನ ಎಲ್ಲಾ ಪಿಡಿಓಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಚಿವ ಪುಟ್ಟರಾಜು ಅವರನ್ನು ಸನ್ಮಾನಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಪೂರ್ಣಿಮಾ , ಎಸಿ ಆರ್.ಯಶೋದ, ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಮಂಡ್ಯ ತಾಪಂ ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ಮಂಜುಳಾ, ಜಿಪಂ ಸದಸ್ಯರಾದ ತಿಮ್ಮೇಗೌಡ, ಸಿ. ಅಶೋಕ್, ಅನುಸೂಯ, ಶಾಂತಲಾ, ತ್ಯಾಗರಾಜು ತಾಪಂ ಇಓ ದರ್ಶನ್ ಸೇರಿ ದಂತೆ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು, ತಾಪಂ ಸದಸ್ಯರು, ಪಿಡಿಓ ಗಳು ಭಾಗವಹಿಸಿದ್ದರು.

Translate »