ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ: ತಾಪಂ ಅಧ್ಯಕ್ಷೆ
ಮಂಡ್ಯ

ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಮುಖ್ಯ: ತಾಪಂ ಅಧ್ಯಕ್ಷೆ

August 7, 2018

ಪಾಂಡವಪುರ:  ಮಕ್ಕಳಿಗೆ ಶಿಕ್ಷಣ ದಷ್ಟೇ ಕ್ರೀಡೆಯೂ ಮುಖ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು ಎಂದು ತಾಪಂ ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು.

ತಾಲೂಕಿನ ಚಿಕ್ಕಾಯರಹಳ್ಳಿಯಲ್ಲಿ ಸೋಮವಾರ 2018-19ನೇ ಸಾಲಿನ ಅರಳಕುಪ್ಪೆ ಮತ್ತು ಬನ್ನಂಗಾಡಿ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯಕ. ಕ್ರೀಡಾ ಕೂಟಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನು ಸ್ಫೂರ್ತಿಯಾಗಿ ತೆಗೆದು ಕೊಂಡು ಕ್ರೀಡಾಕೂಟದಲ್ಲಿ ಭಾಗವಹಿ ಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಗ್ರಾಮೀಣ ವಿದ್ಯಾರ್ಥಿಗಳು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ತಮ್ಮೊಳಗಿನ ಪ್ರತಿಭೆ ಹೊರ ಹಾಕಿ, ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆಯಬೇಕು ಎಂದರು.

ಬಿಇಓ ಮಲ್ಲೇಶ್ವರಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಒಂದಲ್ಲಾ ಒಂದು ಪ್ರತಿಭೆಗಳು ಇರುತ್ತಿವೆ. ಅವ ಗಳನ್ನು ಹೊರಹಾಕಲು ಗ್ರಾಮೀಣ ಮಟ್ಟದ ಇಂತಹ ಕ್ರೀಡಾಕೂಟಗಳಿಂದ ಮಾತ್ರ ಸಾಧ್ಯ ಎಂದರು. ಜಿಪಂ ಸದಸ್ಯೆ ಅನು ಸೂಯ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ತಾಪಂ ಸದಸ್ಯ ಅಲ್ಪಳ್ಳಿಗೋವಿಂದಯ್ಯ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ತಾಪಂ ಸದಸ್ಯ ನವೀನ್, ಗ್ರಾಪಂ ಸದಸ್ಯ ನಿರಂಜನ್‍ಬಾಬು, ಎಸ್‍ಡಿಎಂಸಿ ಅಧ್ಯಕ್ಷ ಶಂಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘ ಟನಾ ಕಾರ್ಯದರ್ಶಿ ಕೆ.ಯುವರಾಜು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ವಿಎಸ್‍ಎಸ್‍ಎನ್‍ಬಿ ಅಧ್ಯಕ್ಷ ಧನಂಜಯ್, ಕ್ಷೇತ್ರ ಸಮನ್ವಯ ಅಧಿಕಾರಿ ತಿಮ್ಮರಾಯಿ ಗೌಡ, ದೈಹಿಕ ಶಿಕ್ಷಣಾಧಿಕಾರಿ ರಾಜು, ಮುಖ್ಯಶಿಕ್ಷಕಿ ಮಹಾಸುಲೋಚನ, ಶಿಕ್ಷಕ ಎಸ್.ಜೆ.ಕುಮಾರ್, ದೈಹಿಕ ಶಿಕ್ಷಕರಾದ ಮಹೇಶ್, ಮಂಜುನಾಥ್, ಪಾರ್ಥೇ ಗೌಡ, ಹಿರಿಯ ವಿದ್ಯಾರ್ಥಿ ಜಗದೀಶ್, ಮುಖಂಡರಾದ ರಾಜೇಂದ್ರ, ಜಗದೀಶ್ ಸೇರಿದಂತೆ ಹಲವರಿದ್ದರು.

Translate »