ಮೂಗುಮಾರಮ್ಮನ ಹೆಬ್ಬಾಗಿಲು, ದೇವರ ಕೊಳ ಲೋಕಾರ್ಪಣೆ
ಮಂಡ್ಯ

ಮೂಗುಮಾರಮ್ಮನ ಹೆಬ್ಬಾಗಿಲು, ದೇವರ ಕೊಳ ಲೋಕಾರ್ಪಣೆ

July 18, 2018

ಪಾಂಡವಪುರ: ತಾಲೂಕಿನ ಶಿಂಡಬೋಗನಹಳ್ಳಿ ಗ್ರಾಮದೇವತೆ ಮೂಗುಮಾರಮ್ಮನ ಹೆಬ್ಬಾಗಿಲು ಮತ್ತು ಗ್ರಾಮದ ಹೊರವಲಯದಲ್ಲಿ ಜೀರ್ಣೋದ್ಧಾರಗೊಂಡಿರುವ ದೇವರ ಕೊಳವನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು, ಗ್ರಾಮ ದೇವತೆ ಮೂಗುಮಾರಮ್ಮನ ಹಬ್ಬದ ಅಂಗವಾಗಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಮೂಗುಮಾರಮ್ಮನ ಹೆಬ್ಬಾಗಿಲು ಉದ್ಘಾಟಿಸಿ, ಗ್ರಾಮದ ಹೊರವಲಯದಲ್ಲಿ ಶಿಥಿಲ ಗೊಂಡಿದ್ದ ದೇವರಕೊಳ (ಮಗುಕೊಳ) ವನ್ನು ದುರಸ್ಥಿಗೊಳಿಸಿ ಜೀರ್ಣೋದ್ಧಾರ ಗೊಳಿಸಿದ್ದೇವೆ ಎಂದರು.

ಗ್ರಾಮದೇವತೆ ಹಬ್ಬ ಆಚರಣೆಯಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದ್ದು, ಗ್ರಾಮದ ಜನತೆ ಸಹಬಾಳ್ವೆಯಿಂದ ಬದುಕು ನಡೆಸಲು ಸಹಕಾರಿಯಾಗಲಿದೆ. ಅದೇ ರೀತಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವತೆ ಮೂಗುಮಾರಮ್ಮನ ಹಬ್ಬ ಆಚರಿಸುತ್ತಿರು ವುದು ಒಳ್ಳೇಯ ಬೆಳವಣಿಗೆ ಎಂದರು. ಈ ವೇಳೆ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಗ್ರಾಮಸ್ಥರು ಅಭಿನಂದಿಸಿದರು.

ಇದಕ್ಕೂ ಮುನ್ನ ಸಚಿವ ಸಿ.ಎಸ್.ಪುಟ್ಟ ರಾಜು ಬೇಬಿ ಗ್ರಾಮಕ್ಕೆ ತೆರಳಿ ಗ್ರಾಮದ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ತ್ರಿನೇತ್ರಶ್ರೀಗಳ ಆಶೀರ್ವಾದ ಪಡೆದು ಲಿಂಗೈಕ್ಯ ಶ್ರೀ ಮರೀದೇವರು ಸ್ವಾಮೀಜಿ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು.

ಈ ವೇಳೆ ಜಿಪಂ ಸದಸ್ಯರಾದ ಸಿ. ಅಶೋಕ್, ಶಾಂತಲ, ತಾಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯೆ ಗೀತಾ, ಗ್ರಾಪಂ ಅಧ್ಯಕ್ಷೆ ಪ್ರಭಾಮಣಿ, ಮಾಜಿ ಅಧ್ಯಕ್ಷ ನಾಗಣ್ಣ, ಗ್ರಾಪಂ ಸದಸ್ಯ ಎಚ್.ಎಲ್. ಸ್ವಾಮೀಗೌಡ, ಲಾರಿ ಮಾಲೀಕ ಸಂಘದ ಅಧ್ಯಕ್ಷ ಸಿ.ಶಿವಕುಮಾರ್, ಟಿಎಪಿ ಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇ ಗೌಡ, ಉದ್ಯಮಿ ನಾಗೇಶ್, ಗ್ರಾಮದ ಯಜಮಾನರು ಸೇರಿದಂತೆ ಗ್ರಾಮದ ಯುವಕರು, ಮಹಿಳೆಯರು ಹಾಜರಿದ್ದರು.

Translate »