ಫೆಬ್ರವರಿ 14ರಂದು ಪುಲ್ವಾಮ ಉಗ್ರ ದಾಳಿಗೆ ಉಗ್ರರು ಬಳಕೆ ಮಾಡಿದ್ದ ಕಾರಿನ ಮಾಲೀಕ ಇದೀಗ ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರ್ಪಡೆ ಯಾಗಿದ್ದಾನೆ ಎಂದು ತಿಳಿದುಬಂದಿದೆ. ಅನಂತ್‍ನಾಗ್ ಜಿಲ್ಲೆಯ ಬಿಜ್ಬೆರಾ ನಿವಾಸಿ ಸಜ್ಜದ್ ಭಟ್ ಎಂಬಾತ ಇದೀಗ ಜೈಷ್ ಇ ಉಗ್ರ ಸಂಘಟನೆ ಸೇರ್ಪಡೆಯಾಗಿದ್ದು, ಈತನೇ ಪುಲ್ವಾಮ ಉಗ್ರ ದಾಳಿಗೆ ಬಳಕೆಯಾದ ಮಾರುತಿ ಈಕೋ ವಾಹನ ಮಾಲೀಕ ಎಂದು ತಿಳಿದುಬಂದಿದೆ. ಪ್ರಸ್ತುತ ಪುಲ್ವಾಮ ಉಗ್ರ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಡೆಸುತ್ತಿದ್ದು,…
ಪುಲ್ವಾಮಾ ಉಗ್ರರ ದಾಳಿ ಪ್ರಕರಣ ಮಾಸ್ಟರ್ ಮೈಂಡ್ ಸಂಹಾರ
February 19, 2019ಶ್ರೀನಗರ: ಪುಲ್ವಾಮಾ ಬಳಿ ಸಿಆರ್‍ಪಿಎಫ್ ಯೋಧರಿದ್ದ ಬಸ್ ಮೇಲೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ ಹೊಡೆಸಿ, 40ಕ್ಕೂ ಅಧಿಕ ಯೋಧರು ಹುತಾತ್ಮರಾಗಲು ಕಾರಣರಾದ ಉಗ್ರರ ವಿರುದ್ಧ ಕೆಂಡಾ ಮಂಡಲವಾಗಿದ್ದ ಭಾರತೀಯ ಸೇನೆ ಕೊನೆಗೂ ಇದರ ಮಾಸ್ಟರ್ ಮೈಂಡ್ ಸಂಹರಿಸುವಲ್ಲಿ ಯಶಸ್ವಿಯಾಗಿದೆ. ಸತತ 18 ಗಂಟೆಗಳ ಕಾರ್ಯಾಚರ ಣೆಯ ನಂತರ ಭಾರತೀಯ ಭದ್ರತಾ ಪಡೆ ಗಳು, ಪುಲ್ವಾಮಾ ಸಮೀಪದಲ್ಲಿ ಜೈಷ್ ಇ ಮೊಹಮದ್, ಪ್ರಮುಖ ಉಗ್ರ ಹಾಗೂ ಪುಲ್ವಾಮಾ ಬಳಿಯ ದಾಳಿ ರೂವಾರಿ ಅಬ್ದುಲ್ ರಷೀದ್ ಘಾಜಿ ಸೇರಿದಂತೆ…
ಮಂಡ್ಯ ವೀರ ಯೋಧನಿಗೆ ಭಾವಪೂರ್ಣ ವಿದಾಯ
February 17, 2019ಹುಟೂರಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಗುರು ಚಿತೆಗೆ ಸಹೋದರನಿಂದ ಅಗ್ನಿಸ್ಪರ್ಶ ಭಾರತೀನಗರ: ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಿಂದ ಹುತಾತ್ಮನಾದ ಮಂಡ್ಯದ ವೀರ ಯೋಧ ಎಚ್. ಗುರು ಅವರಿಗೆ ಸ್ವಗ್ರಾಮವಾದ ತಾಲೂಕಿನ ಗುಡಿಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ‘ ಬೋಲೋ ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’, ‘ವೀರ ಯೋಧ ಗುರು ಅಮರ್ ರಹೇ’ ಮುಗಿಲು ಮುಟ್ಟುವ ಘೋಷಣೆಗಳ ನಡುವೆ ಭಾವಪೂರ್ಣ ವಿದಾಯ ಹೇಳಲಾಯಿತು. ಸಂಜೆ 7.45ರ ಸುಮಾರಿನಲ್ಲಿ…
ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಿದ ಸುಮಲತಾ
February 17, 2019ಮಂಡ್ಯ: ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮ ನಾದ ಮಂಡ್ಯ ಯೋಧ ಗುರು ಅವರ ಕುಟುಂಬಕ್ಕೆ ನಟ, ರಾಜಕಾರಣಿ ಅಂಬರೀಶ್ ಪತ್ನಿ ಸುಮಲತಾ ಅರ್ಧ ಎಕರೆ ಭೂಮಿ ಯನ್ನು ನೀಡಲು ನಿರ್ಧರಿಸಿದ್ದಾರೆ. ಮಂಡ್ಯದಲ್ಲಿರುವ ತಮ್ಮ ಒಡೆತನದ ಜಮೀನಿನಲ್ಲಿ ಅರ್ಧ ಎಕರೆ ಭೂಮಿ ಯನ್ನು ಯೋಧನ ಕುಟುಂಬಕ್ಕೆ ಹಸ್ತಾಂತರಿಸಲು ತೀರ್ಮಾನಿಸಿದ್ದಾರೆ. ಮಂಡ್ಯದ ಸೊಸೆಯಾಗಿರುವ ನನ್ನದು ದೇಶ ಕಾಯುವ ಯೋಧರಿಗಾಗಿ ಅಳಿಲು ಸೇವೆ ಎಂದಿರುವ ಸುಮಲತಾ ತಾವು ನೀಡಿದ ಭೂಮಿಯನ್ನು ಯೋಧ ಗುರುವಿನ ಕುಟುಂಬ ತಮ್ಮ ಜೀವನ ನಿರ್ವಹಣೆಗೆ ಬಳಸಿಕೊಳ್ಳಲಿ ಎಂದು…
ಹುತಾತ್ಮರಾದ ಭಾರತದ 44 ವೀರ ಯೋಧರು
February 15, 2019ಶ್ರೀನಗರ: ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯಲ್ಲಿ 44 ಭಾರತೀಯ ವೀರ ಯೋಧರು ಹುತಾತ್ಮರಾಗಿದ್ದಾರೆ. 30ಕ್ಕೂ ಹೆಚ್ಚು ಯೋಧರು ತೀವ್ರವಾಗಿ ಗಾಯಗೊಂಡಿದ್ದು, ಅವರಲ್ಲಿ 18 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಇಂದು ಬೆಳಿಗ್ಗೆ 3.30ರ ಸುಮಾರಿನಲ್ಲಿ ರಜೆ ಮುಗಿಸಿ ಕೊಂಡು ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ ಕೇವಲ 20 ಕಿ.ಮೀ. ಅಂತರವಿದ್ದಾಗ ಹೆದ್ದಾರಿ ಯಲ್ಲಿ ವಿರುದ್ಧ ದಿಕ್ಕಿನಿಂದ ವೇಗವಾಗಿ 350 ಕೆ.ಜಿ. ಸುಧಾ ರಿತ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರಿನಲ್ಲಿ…
ಮಂಡ್ಯ ಯೋಧ ಹುತಾತ್ಮ
February 15, 2019ಭಾರತೀನಗರ: ಜಮ್ಮು-ಕಾಶ್ಮೀರದಲ್ಲಿ ಇಂದು ಮಧ್ಯಾಹ್ನ ನಡೆದ ಉಗ್ರರ ದಾಳಿಗೆ ಮಂಡ್ಯ ಜಿಲ್ಲೆಯ ಯೋಧ ನೋರ್ವ ಹುತಾತ್ಮನಾಗಿದ್ದಾನೆ ಎಂದು ವರದಿಯಾಗಿದೆ. ಮದ್ದೂರು ತಾಲೂಕು ಭಾರತೀ ನಗರ ಸಮೀಪದ ಗುಡಿಗೆರೆ ಗ್ರಾಮದ ಪೊನ್ನಯ್ಯ ಮತ್ತು ಚಿಕ್ಕೋಳಮ್ಮ ದಂಪತಿ ಪುತ್ರ ಹೆಚ್. ಗುರು (33) ಹುತಾತ್ಮರಾದ ಯೋಧರಾಗಿದ್ದು, ಇವರು ರಜೆಗಾಗಿ ಗ್ರಾಮಕ್ಕೆ ಬಂದಿದ್ದು, ಕಳೆದ ವಾರವಷ್ಟೇ ಕರ್ತವ್ಯಕ್ಕೆ ಹಿಂತಿರುಗಿದ್ದರು ಎಂದು ಹೇಳಲಾಗಿದೆ. ಹುತಾತ್ಮ ಗುರು ಕಳೆದ ಆರು ತಿಂಗಳ ಹಿಂದೆಯಷ್ಟೇ ಸಾತನೂರು ಬಳಿಯ ಸಾಸಲಪುರ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು. ಮಂಡ್ಯ ಜಿಲ್ಲೆಯ…
ಉಗ್ರರ ದಂಡಿಸುವ ಅಧಿಕಾರ ಭಾರತಕ್ಕಿದೆ: ಪಾಕ್‍ಗೆ ಕಟು ಎಚ್ಚರಿಕೆ
February 15, 2019ಹೊಸದಿಲ್ಲಿ: ಪುಲ್ವಾಮಾದಲ್ಲಿ ಇಂದು 44ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಪ್ರಾಯೋಜಿತ ಭಯೋತ್ಪಾದಕ ದಾಳಿಯನ್ನು ಕಟು ಶಬ್ದಗಳಿಂದ ಖಂಡಿಸಿ ಭಾರತ ಸರಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ವಿವರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆ ಯಲ್ಲಿ ಇಂದು ನಮ್ಮ ಭದ್ರತಾ ಪಡೆಯ ಶೂರ ಯೋಧರ ಮೇಲೆ ನಡೆದ ಹೇಡಿತನದ ಉಗ್ರರ ದಾಳಿಯನ್ನು ಸಾಧ್ಯ ವಿರುವ ಎಲ್ಲ ಕಠಿಣ ಪದಗಳಿಂದ ಭಾರತ ಸರಕಾರ ಖಂಡಿಸುತ್ತದೆ. ಇದೊಂದು ಹೀನಾತಿಹೀನ ಕೃತ್ಯವಾಗಿದ್ದು ಪಾಕಿಸ್ತಾನ ಮೂಲದ ಜೈಷ್ ಇ…
ಇಂದು ಮಹತ್ವದ ಭದ್ರತಾ ಸಂಪುಟ ಸಮಿತಿ ಸಭೆ
February 15, 2019ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಹಿನ್ನೆಲೆ ಯಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಚರ್ಚಿಸಲು ಭದ್ರತೆ ಕುರಿತ ಸಂಪುಟ ಸಮಿತಿ ನಾಳೆ ಮಹತ್ವದ ಸಭೆ ನಡೆಸಲಿದೆ. ಗುರುವಾರ ಮಧ್ಯಾಹ್ನ ಪುಲ್ವಾಮಾ ಜಿಲ್ಲೆಯಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‍ಪಿಎಫ್ ಯೋಧರ ಬೆಂಗಾವಲು ವಾಹನಗಳ ಮೇಲೆ ನಡೆದ ಉಗ್ರರ ದಾಳಿಯಲ್ಲಿ 44ಕ್ಕೂ ಹೆಚ್ಚು ಯೋಧರು ಬಲಿದಾನ ಮಾಡಿ ದ್ದಾರೆ. ಪಾಕ್ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಜೈಷ್ ಇ ಮೊಹಮ್ಮದ್ ಈ…