ಪುಲ್ವಾಮಾ ಉಗ್ರರ ದಾಳಿ ಪ್ರಕರಣ ಮಾಸ್ಟರ್ ಮೈಂಡ್ ಸಂಹಾರ
ಮೈಸೂರು

ಪುಲ್ವಾಮಾ ಉಗ್ರರ ದಾಳಿ ಪ್ರಕರಣ ಮಾಸ್ಟರ್ ಮೈಂಡ್ ಸಂಹಾರ

February 19, 2019

ಶ್ರೀನಗರ: ಪುಲ್ವಾಮಾ ಬಳಿ ಸಿಆರ್‍ಪಿಎಫ್ ಯೋಧರಿದ್ದ ಬಸ್ ಮೇಲೆ ಸ್ಫೋಟಕ ತುಂಬಿದ ವಾಹನ ಡಿಕ್ಕಿ ಹೊಡೆಸಿ, 40ಕ್ಕೂ ಅಧಿಕ ಯೋಧರು ಹುತಾತ್ಮರಾಗಲು ಕಾರಣರಾದ ಉಗ್ರರ ವಿರುದ್ಧ ಕೆಂಡಾ ಮಂಡಲವಾಗಿದ್ದ ಭಾರತೀಯ ಸೇನೆ ಕೊನೆಗೂ ಇದರ ಮಾಸ್ಟರ್ ಮೈಂಡ್ ಸಂಹರಿಸುವಲ್ಲಿ ಯಶಸ್ವಿಯಾಗಿದೆ.

ಸತತ 18 ಗಂಟೆಗಳ ಕಾರ್ಯಾಚರ ಣೆಯ ನಂತರ ಭಾರತೀಯ ಭದ್ರತಾ ಪಡೆ ಗಳು, ಪುಲ್ವಾಮಾ ಸಮೀಪದಲ್ಲಿ ಜೈಷ್ ಇ ಮೊಹಮದ್, ಪ್ರಮುಖ ಉಗ್ರ ಹಾಗೂ ಪುಲ್ವಾಮಾ ಬಳಿಯ ದಾಳಿ ರೂವಾರಿ ಅಬ್ದುಲ್ ರಷೀದ್ ಘಾಜಿ ಸೇರಿದಂತೆ ಮೂವರನ್ನು ಹೊಡೆದುರುಳಿಸಿದೆ.

ಈ ಕಾರ್ಯಾಚರಣೆ ವೇಳೆ ಸೇನೆ ಮೇಜರ್ ಒಬ್ಬರು ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ ಓರ್ವ ಬ್ರಿಗೇಡಿಯರ್, ಕ್ಯಾಪ್ಟನ್ ಹಾಗೂ ಡಿಐಜಿ ದರ್ಜೆಯ ಅಧಿಕಾರಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಮಧ್ಯರಾತ್ರಿ ಪುಲ್ವಾಮದ ಪಿಂಗ್ಲಾನ್ ಪ್ರಾಂತ್ಯದಲ್ಲಿ ಉಗ್ರರು ಅಡಗಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಗಿಳಿದ ಸೇನೆಗೆ ಉಗ್ರರ ಪ್ರತಿರೋಧ ಸವಾ ಲಾಗಿ ಪರಿಣಮಿಸಿತು. ಆದರೆ ಪುಲ್ವಾಮಾ ದಾಳಿಯಿಂದ ಸಮರ ಸಿಂಹಗಳಾಗಿರುವ ಭಾರತೀಯ ಯೋಧರು, ತಮ್ಮದೇ ತಂತ್ರ ಗಾರಿಕೆ ಮೇಲೆ ಕಾರ್ಯಾಚರಣೆಗಿಳಿದರು.

ಉಗ್ರರು ತಮ್ಮ ಬಳಿಯಿದ್ದ ಭಾರೀ ಶಸ್ತ್ರಾಸ್ತ್ರ ಸಹಾಯದಿಂದ ಸೇನೆಗೆ ಭಾರೀ ಸವಾಲಾಗಿ ಪರಿಣಮಿಸಿದರು. ಆದರೆ ಸೇನೆ ತಂತ್ರಗಾರಿಕೆಯಲ್ಲಿ ಮಾರ್ಪಾಡು ಮಾಡಿಕೊಂಡು ಉಗ್ರರು ಅಡಗಿದ್ದ ಕಟ್ಟಡ ವನ್ನೇ ಸ್ಫೋಟಿಸಿತು. ಈ ವೇಳೆ ಅಬ್ದುಲ್ ರಷೀದ್ ಘಾಜಿ ಜತೆಗೇ ಜೆಇಎಂನ ಇನ್ನೊಬ್ಬ ಕಮಾಂಡರ್ ಹಿಲಾಲ್ ಸೇರಿ ಮೂವರು ಹತರಾಗಿದ್ದಾರೆ.

ಅಬ್ದುಲ್ ರಷೀದ್ ಘಾಜಿ ಜೆಇಎಂ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದು, ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುವ ಮತ್ತು ಅವರಿಗೆ ತರಬೇತಿ ನೀಡುವ ಮೇಲುಸ್ತು ವಾರಿ ನೋಡಿಕೊಳ್ಳುತ್ತಿದ್ದ. ಕಳೆದ ಫೆ.14 ರಂದು ಪುಲ್ವಾಮಾ ಹೊರವಲಯದಲ್ಲಿ ಸೇನಾ ವಾಹನಗಳ ಮೇಲಿನ ಆತ್ಮಹತ್ಯಾ ಬಾಂಬ್ ದಾಳಿ ನೇತೃತ್ವವನ್ನೂ ಇದೇ ಘಾಜಿ ವಹಿಸಿಕೊಂಡಿದ್ದ.

ಇನ್ನು ಇಂದು ಬೆಳಿಗ್ಗೆ ಕಾರ್ಯಾಚರಣೆ ವೇಳೆ ಸೇನೆಯ ಮೇಜರ್ ಹಾಗೂ ಓರ್ವ ನಾಗರಿಕ ಸೇರಿದಂತೆ ಒಟ್ಟು 5 ಮಂದಿ ಸಾವನಪ್ಪಿದ್ದಾರೆ. ಹುತಾತ್ಮ ಯೋಧರನ್ನು ಮೇಜರ್ ವಿ ಎಸ್ ಧೌಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಅಜಯ್ ಕುಮಾರ್ ಮತ್ತು ಸಿಪಾಯಿ ಹರಿಸಿಂಗ್ ಎಂದು ಗುರುತಿಸಲಾಗಿದೆ.

ಪುಲ್ವಾಮಾ ದಲ್ಲಿ ಸಿಆರ್‍ಪಿಎಫ್ ವಾಹನಕ್ಕೆ ಸ್ಫೋಟಕ ತುಂಬಿದ್ದ ವಾಹನ ಡಿಕ್ಕಿ ಹೊಡೆಸಿದ ಉಗ್ರ ಅದಿಲ್ ದಾರ್‍ಗೆ ಘಾಜಿಯೇ ತರಬೇತಿ ನೀಡಿದ್ದ. ಪಾಕಿಸ್ತಾನಿ ಪ್ರಜೆಯಾದ ಘಾಜಿ, ಅದು ಹೇಗೋ ಪಾಕ್‍ನಿಂದ ಬಂದು ಕಾಶ್ಮೀರದ ಕಣಿವೆ ಸೇರಿಕೊಂಡಿದ್ದ. ಕಾಶ್ಮೀರದ ಯುವಕ ಅದಿಲ್ ದಾರ್‍ನನ್ನು ಜೈಶ್ ಎ ಮೊಹಮ್ಮದ್‍ಗೆ ಸೇರಿಸಿಕೊಂಡು ಸ್ಫೋಟ ನಡೆಸುವ ಬಗ್ಗೆ ತರಬೇತಿ ನೀಡಿದ್ದ. ಆ ಮೂಲಕ ಪುಲ್ವಾಮಾದಲ್ಲಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರ ಮೇಲೆ ಆತ್ಮಹತ್ಯಾ ದಾಳಿ ನಡೆಯಲು ಸಂಚು ರೂಪಿಸಿದ. ಕಳೆದ ಗುರುವಾರ (ಫೆ.14) ಸಿಆರ್‍ಪಿಎಫ್ ಯೋಧರಿದ್ದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಯುವ ಕೆಲವೇ ದಿನಗಳ ಮುನ್ನ ನಡೆದಿದ್ದ ಎನ್‍ಕೌಂಟರ್‍ನಲ್ಲಿ ಅಬ್ದುಲ್ ರಶೀದ್ ಘಾಜಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ಅಂದು ನಡೆದಿದ್ದ ಎನ್‍ಕೌಂಟರ್‍ನಲ್ಲಿ ಸ್ಥಳೀಯ ಉಗ್ರಗಾಮಿಯೊಬ್ಬ ಮೃತಪಟ್ಟಿದ್ದು, ಒಬ್ಬರು ಸೈನಿಕರು ಹುತಾತ್ಮರಾಗಿದ್ದರು.

ಅಫ್ಘಾನಿಸ್ತಾನದ ಯುದ್ಧ ಸೇನಾನಿಯಾದ ಅಬ್ದುಲ್ ರಶೀದ್, ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ತಜ್ಞನಾಗಿದ್ದಾನೆ. ಸ್ಫೋಟಕ ತುಂಬಿದ ವಾಹವನನ್ನು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಸಿ ಸ್ಫೋಟಿಸುವ ಬಗ್ಗೆ ತರಬೇತಿ ನೀಡಿದ್ದೇ ಈ ಪಾಪಿ.

Translate »