ಮಡಿಕೇರಿ: ರೋಟರಿ ಸೇರಿ ದಂತೆ ಸಾಮಾಜಿಕ ಸೇವಾ ಸಂಘಟನೆಗಳ ನೆರವು ಸಮಾಜದ ನೈಜ ಫಲಾನುಭವಿ ಗಳಿಗೆ ದೊರಕುವ ನಿಟ್ಟಿನಲ್ಲಿ ಸಂಘಟನೆ ಗಳು ಗಮನ ಹರಿಸಬೇಕಾಗಿದೆ ಎಂದು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಪಿ.ರೋಹಿನಾಥ್ ಕರೆ ನೀಡಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತ ನಾಡಿದ ಪಿ.ರೋಹಿನಾಥ್, ಯಾವುದೇ ವ್ಯಕ್ತಿ ಜೀವನದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳನ್ನು ಹೊಂದದೆ ಸಾಧನೆಯ ಗುರಿ ತಲುಪಲು ಅಸಾಧ್ಯ. ಆದರೆ ಯಾರೂ ಜೀವನದಲ್ಲಿ ಶಾಶ್ವತವಾಗಿ ಕಹಿ ನೆನಪಾಗಿ ಉಳಿಯುವಂಥ ಗುರುತರ ತಪ್ಪು ಮಾಡ ಬಾರದೆಂದು ಕಿವಿಮಾತು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿ ಜಾರಿಗೊಳಿಸಲಾದ ಕೊಡಗಿನ 15 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾದ ವಿಜ್ಞಾನ ಪ್ರಯೋಗಾಲಯ ಅತ್ಯುತ್ತಮ ಯೋಜನೆಯಾಗಿದೆ ಎಂದು ಶ್ಲಾಘಿಸಿದ ರೋಹಿನಾಥ್, ಕಾಲೂರಿನಲ್ಲಿ ಪ್ರಕೃತಿ ವಿಕೋ ಪದಿಂದ ಸಂತ್ರಸ್ತರಾದ ಮಹಿಳೆಯರಿಗೆ ಮಿಸ್ಟಿ ಹಿಲ್ಸ್ ಮೂಲಕ ನೀಡಲಾದ ನೆರವು ಪ್ರಶಂಸನೀಯ ಎಂದು ಹೇಳಿದರು.
ರೋಟರಿ ಜಿಲ್ಲೆಯ ಸಹಾಯಕ ಗವ ರ್ನರ್ ಧರ್ಮಾಪುರ ನಾರಾಯಣ್ ಮಾತ ನಾಡಿ, ರೋಟರಿಯಿಂದ ಈಗಾಗಲೇ ಕೊಡ ಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಪತ್ರಕರ್ತರಿಗೆ 5 ಸೇರಿದಂತೆ ಮನೆ ಕಳೆದು ಕೊಂಡ ಸಂತ್ರಸ್ತರಿಗೆ 50 ಮನೆಗಳನ್ನು ವರ್ಷಾಂತ್ಯದಲ್ಲಿ ನಿರ್ಮಿಸಿ ಕೊಡಲಾಗು ತ್ತದೆ. ಮೊದಲ ಹಂತದ 25 ಮನೆಗಳನ್ನು ಮಳೆ ಪ್ರಾರಂಭವಾಗುವ ಮುನ್ನವೇ ಫಲಾ ನುಭವಿಗಳಿಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ರೋಟರಿ ಜೋನಲ್ ಲೆಫ್ಟಿನೆಂಟ್ ಚೀಯಣ್ಣ ಮಾತನಾಡಿ, ರೋಟರಿಯಿಂದ ಅಂಗನ ವಾಡಿಗಳಿಗೆ ಕಾಯಕಲ್ಪ ನೀಡುವ ಯೋಜನೆ ಪ್ರಗತಿಯಲ್ಲಿದ್ದು, 10 ಅಂಗನವಾಡಿಗಳನ್ನಾ ದರೂ ಪ್ರತೀ ರೋಟರಿ ಕ್ಲಬ್‍ಗಳು ನಿರ್ವ ಹಣೆಗೆ ಪಡೆದುಕೊಳ್ಳುವಂತೆ ಸಲಹೆ ನೀಡಿ ದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ಕಾರ್ಯದರ್ಶಿ ಯು.ಎಂ. ಮಹೇಶ್, ಮುಂದಿನ ಸಾಲಿನ ಅಧ್ಯಕ್ಷ ಎಂ.ಆರ್.ಜಗದೀಶ್ ಹಾಜರಿದ್ದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಿಸ್ಟಿ ಹಿಲ್ಸ್‍ನ ವಿದ್ಯಾ ರ್ಥಿಗಳಾದ ಎನ್.ಎನ್.ನಿರುತ್, ಆರ್ಯ ರಾಜೇಶ್, ಶಮಿಕ್ ರೈ, ಅಕ್ಷಯ್ ಜಗ ದೀಶ್, ವಿಜಯ್ ಜಗದೀಶ್, ಆದ್ಯು ಸುಲೋಚನ, ಯಶ್ ಕಾರ್ಯಪ್ಪ, ಎನ್‍ಸಿಸಿಯಲ್ಲಿ ಸಾಧನೆ ಮಾಡಿದ ಎನ್.ಎನ್. ಪೊನ್ನಣ್ಣ, ಬಿ.ಎಸ್.ತೇಜಸ್, ದೇಬಿ ಯಾನ ಭೌಮಿಕ್ ಅವರನ್ನು ಗೌರವಿಸಲಾಯಿತು. ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಹೆಬ್ಬಟ್ಟಗೇರಿಯ ಬಿ.ವೈ. ಪೂವಪ್ಪ, ಮುಕ್ಕೋಡ್ಲು ಗ್ರಾಮದ ಟಿ.ಕೆ.ಕುಶಾಲಪ್ಪ, ಮಕ್ಕಂದೂರಿನ ಸಿ.ಸಿ. ರತನ್, ನಿಡುವಟ್ಟು ಗ್ರಾಮದ ಎ.ಟಿ.ಮಾದಪ್ಪ, ಮಂಗಳಾದೇವಿ ನಗರದ ಎಚ್.ಆರ್. ಸುಂದರ್ ರಾಜ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಸಭೆಯ ಪ್ರಾರಂಭಕ್ಕೂ ಮುನ್ನ ಪುಲ್ವಾ ಮದಲ್ಲಿ ಉಗ್ರವಾದಿಗಳ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ರೋಟರಿ ಸದಸ್ಯರು ಮೌನಾಚರಣೆ ಮೂಲಕ ಸಂತಾಪ ಸೂಚಿಸಿದರು.