ವಿವಾಹಿತ ಮಹಿಳೆ ಆತ್ಮಹತ್ಯೆ
ಕೊಡಗು

ವಿವಾಹಿತ ಮಹಿಳೆ ಆತ್ಮಹತ್ಯೆ

February 19, 2019

ಸೋಮವಾರಪೇಟೆ: ವಿವಾಹಿತ ಮಹಿಳೆಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮ ನಿವಾಸಿ ನೋಣು-ಕೊರಪಲಮ್ಮ ಅವರ ಪುತ್ರಿ ಹೆಚ್.ಎನ್. ರತ್ನ(36) ಎಂಬುವರು ಸೋಮ ವಾರ ರಾತ್ರಿ ಮನೆ ಸಮೀಪದ ಮಾವಿನ ಮರಕ್ಕೆ ವೇಲಿ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 4 ತಿಂಗಳ ಹಿಂದೆ ಶನಿವಾರಸಂತೆಯ ಮಹೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದ ರತ್ನ ಅವರು, ನಿನ್ನೆ ದಿನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಆದರೆ ಡೆತ್‍ನೋಟ್ ವಿವರಣೆ ಲಭ್ಯವಾಗಿಲ್ಲ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »