ಲೋಕಸಭಾ ಚುನಾವಣೆ; ಸೆಕ್ಟರ್ ಅಧಿಕಾರಿಗಳಿಗೆ ಕಾರ್ಯಾಗಾರ
ಕೊಡಗು

ಲೋಕಸಭಾ ಚುನಾವಣೆ; ಸೆಕ್ಟರ್ ಅಧಿಕಾರಿಗಳಿಗೆ ಕಾರ್ಯಾಗಾರ

February 19, 2019

ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವವಾಗಿದ್ದು, ಅತ್ಯಂತ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಸೋಮವಾರ ಚುನಾವಣಾ ಸೆಕ್ಟರ್ ಅಧಿಕಾರಿಗಳಿಗೆ ಎಎಂಎಫ್, ವಲ್ನರಬಲ್ ಪ್ರದೇಶ ಮತ್ತು ಇವಿಎಂಗಳ ಬಳಕೆ ಬಗ್ಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸೆಕ್ಟರ್ ಅಧಿಕಾರಿಗಳು ಇವಿಎಂ ಮತಯಂತ್ರಗಳ ಬಳಕೆ ಕುರಿತು ಸಂಪೂರ್ಣ ಜ್ಞಾನ ಹೊಂದಿರಬೇಕು. ಇವಿಎಂಗಳ ಬಳ ಕೆಗೂ ಮುನ್ನ ಎವಿಎಂಗಳ ತಪಾಸಣೆ ಮಾಡಿ ನಂತರ ಚುನಾವಣಾ ಕಾರ್ಯ ಗಳಿಗೆ ಬಳಸಿಕೊಳ್ಳಬೇಕು. ಹಾಗೂ ಇವಿಎಂಗಳು ಅತ್ಯಂತ ಸುರಕ್ಷಿತವಾಗಿದ್ದು, ಇದರ ಬಗ್ಗೆ ಜನರಿಗೆ ಅರಿವು ಮೂಡಿಸ ಬೇಕು. ಪ್ರತಿಯೊಬ್ಬ ಸೆಕ್ಟರ್ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಬಿಎಲ್‍ಒಗಳ ಕಾರ್ಯಗಳ ಮೇಲೆ ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.

ತಹಶೀಲ್ದಾರ್‍ಗಳು ಹಾಗೂ ಎಆರ್‍ಒ ಗಳು ಸೆಕ್ಟರ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಚುನಾವಣಾ ಕಾರ್ಯ ದಲ್ಲಿ ಯಾವುದೇ ಲೋಪದೋಷ ಆಗ ದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕು ಎಂದು ಸೂಚನೆ ನೀಡಿದರು.

ಇವಿಎಂ ಚುನಾವಣಾ ಮತ ಯಂತ್ರದ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸು ವುದು ಅಗತ್ಯ. ಚುನಾವಣಾ ಸಂದರ್ಭ ದಲ್ಲಿ ನೀತಿ ಸಂಹಿತೆಗಳು ಉಲ್ಲಂಘನೆ ಯಾಗದಂತೆ ಅಧಿಕಾರಿಗಳು ಕಾರ್ಯಪ್ರವೃ ತರಾಗಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಮಾತನಾಡಿ, ಇವಿಎಂ ಬಳಕೆಗೆ ಚುನಾ ವಣಾ ಆಯೋಗ ನಿಗಧಿಪಡಿಸಿದ ಮಾನ ದಂಡಗಳ ಅನ್ವಯ ಕಾರ್ಯನಿರ್ವಹಿಸ ಬೇಕು ಎಂದು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಇವಿಎಂ ಕುರಿತ ಸುರ ಕ್ಷತಾ ಮಾನದಂಡಗಳ ಬಗ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮ ಪಂಚಾ ಯಿತಿ ಮಟ್ಟದಲ್ಲಿ ಅಣಕು ಮತದಾನ ಪ್ರಾತ್ಯ ಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಮತದಾರರಲ್ಲಿ ಇವಿಎಂ ಕುರಿತು ಜಾಗೃತಿ ಮೂಡಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಇವಿಎಂ ಮತ ಯಂತ್ರ ಬಳಕೆಯ ತರಬೇತಿ ಅಧಿಕಾರಿ ಹಾಗೂ ಡಯಟ್ ಪ್ರಾಂಶುಪಾಲರಾದ ವಾಲ್ಟರ್ ಡಿ ಮೆಲ್ಲೊ ಅವರು ಇವಿಎಂ ಮತ ಯಂತ್ರದ ಬಳ ಕೆಯ ವಿಧಾನ ಹಾಗೂ ನಿರ್ವಹಣೆ ಕುರಿತು ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಉಪವಿಭಾಗಾ ಧಿಕಾರಿ ಟಿ.ಜವರೇಗೌಡ, ಇವಿಎಂ ತರ ಬೇತಿದಾರರು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಶಂಷು ದ್ದೀನ್ ಹಾಗೂ ತಹಶಿಲ್ದಾರರು ಮತ್ತು ಸೆಕ್ಟರ್ ಅಧಿಕಾರಿಗಳು ಇದ್ದರು.

Translate »