ಸೇತುವೆಯಿಂದ ಕೆಳಗೆ ಬಿದ್ದ ಕಾರು
ಕೊಡಗು

ಸೇತುವೆಯಿಂದ ಕೆಳಗೆ ಬಿದ್ದ ಕಾರು

February 19, 2019

ಸೋಮವಾರಪೇಟೆ: ಪಟ್ಟಣದಿಂದ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ, ಐಗೂರು-ಕಬ್ಬಿಣ ಸೇತುವೆ ಬಳಿ ಚಾಲ ಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆ ಯಿಂದ ಕೆಳ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯಗಳು ಸಂಭವಿಸಿಲ್ಲ.

ಪಟ್ಟಣ ಸಮೀಪದ ಆಲೇಕಟ್ಟೆ ನಿವಾಸಿ ಪ್ರೇಮಾ ಎಂಬವರು ಚಾಲಿಸುತ್ತಿದ್ದ ಕಾರು ಕಬ್ಬಿಣ ಸೇತುವೆ ಬಳಿಯಲ್ಲಿ ತೆರಳುವ ಸಂದರ್ಭ, ಎದು ರಿನಿಂದ ಪಿಕ್‍ಅಪ್ ವಾಹನ ಆಗಮಿಸಿತೆನ್ನ ಲಾಗಿದೆ. ಆ ವಾಹನಕ್ಕೆ ಜಾಗ ಕಲ್ಪಿಸಲು ಮುಂದಾದ ಸಂದರ್ಭ ಕಾರು ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದಿದೆ. ಕೆಳಭಾಗದ ಕಲ್ಲು ಬಂಡೆಯ ಮೇಲೆ ಕಾರು ನಿಂತಿದ್ದು, ಚಾಲಕಿ ಸೇರಿದಂತೆ ಕಾರಿನೊಳಗಿದ್ದ ಇತರ ಈರ್ವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Translate »