ಕೊಡಗು ಪುನರ್ ನಿರ್ಮಾಣಕ್ಕೆ ಕೈಜೋಡಿಸಲು ಮನವಿ
ಮೈಸೂರು

ಕೊಡಗು ಪುನರ್ ನಿರ್ಮಾಣಕ್ಕೆ ಕೈಜೋಡಿಸಲು ಮನವಿ

February 19, 2019

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಯಿತು. ಆದ್ದರಿಂದ ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ ಬೇಕಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇ ಜಿನಲ್ಲಿ ಮಂಗಳವಾರ ‘ಪ್ರಕೃತಿ ವಿಕೋಪ ನಿರ್ವಹಣೆ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಹೆಚ್ಚಿನ ಅನಾಹುತ ಸಂಭವಿಸ ದಂತೆ ಜಾಗೃತಿ ವಹಿಸುವುದು ಅಗತ್ಯ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅತಿವೃಷ್ಟಿ ಮತ್ತು ಅನಾವೃಷ್ಟಿ ಬಗ್ಗೆ ಮೊದಲೇ ಮುನ್ಸೂಚನೆ ಇದ್ದಲ್ಲಿ ಹೆಚ್ಚಿನ ಜಾಗೃತಿ ವಹಿಸಲು ಸಾಧ್ಯ ಎಂದು ಶಾಸ ಕರು ತಿಳಿಸಿದರು. ಕೊಡಗಿನಲ್ಲಿ ಸಂಭವಿ ಸಿದ ಅತಿವೃಷ್ಟಿ ಸಂದರ್ಭದಲ್ಲಿ ಕರ್ನಾಟ ಕದ ಜನತೆ ಉದಾರ ಸಹಾಯ ನೀಡಿದ್ದು, ಕೊಡಗಿನ ಜನತೆಯ ನೋವಿಗೆ ಸ್ಪಂದಿಸಿ ದ್ದಾರೆ. ಈ ಕಾರ್ಯವನ್ನು ಎಂದೂ ಮರೆ ಯಲಾಗದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನುಡಿದರು.

ವಿಜ್ಞಾನಿಗಳು ಅತಿವೃಷ್ಟಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡುತ್ತಾರೆ ಮತ್ತು ಇಂತಹ ಅನಾ ಹುತಗಳನ್ನು ಯಾವ ರೀತಿ ತಡೆಯಬ ಹುದು. ಜೊತೆಗೆ ಮುನ್ನೆಚ್ಚರಿಕೆ ವಹಿಸಬ ಹುದು ಎಂಬುದರ ಬಗ್ಗೆ ಸ್ಪಷ್ಟ ತಿಳುವಳಿ ಕೆಯನ್ನು ಅವಲೋಕನ ಮಾಡಿ ಜನರಿಗೆ ತಲುಪಿಸುವಂತಾಗಬೇಕು ಎಂದು ಶಾಸ ಕರು ಸಲಹೆ ಮಾಡಿದರು.
ತಿರುವನಂತಪುರ ಕೇಂದ್ರೀಯ ಭೂ ವಿಜ್ಞಾನ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಡಾ.ಶ್ರೀಕುಮಾರ್ ಚಟ್ಟೋ ಪಾಧ್ಯಾಯ ಮಾತನಾಡಿ, ಭೂಮಿಯ ರಚನೆ ಹಾಗೂ ಭೂಗರ್ಭದಲ್ಲಿ ಆಗುವಂತಹ ಬದಲಾವಣೆಗಳಿಂದ ಸಂಭವಿಸುವಂತಹ ಭೂಕುಸಿತ, ಭೂಕಂಪನ ಇವುಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಭೂಕುಸಿತ, ಅತಿವೃಷ್ಟಿ ಉಂಟಾದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಭವಿಷ್ಯದಲ್ಲಿ ಇಂತಹ ಅನಾಹುತ ಗಳು ಸಂಭವಿಸದಂತೆ ತೆಗೆದುಕೊಳ್ಳಬೇ ಕಾದ ಕ್ರಮಗಳ ಕುರಿತು ಚರ್ಚೆ ನಡೆಸಿ ದರು. ವಿವಿಧೆಡೆಗಳಿಂದ ಆಗಮಿಸಿದ ವಿಜ್ಞಾನಿ ಗಳು ಭೂವಿಜ್ಞಾನ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ವಿಚಾರ ಮಂಡಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ರಾದ ಲೋಕೇಶ್ವರಿ ಗೋಪಾಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರೊ.ಚಿತ್ರಾ, ರಾಜ್ಯ ನ್ಯಾಕ್ ಸಂಯೋಜಕ ಡಾ.ಸಿದ್ದಲಿಂಗಸ್ವಾಮಿ, ವಿಜ್ಞಾನಿ ಸಿ.ಎಸ್. ಪಾಟೀಲ್, ನಿವೃತ್ತ ಐಎಎಸ್ ಅಧಿಕಾರಿ ಎ.ಕೆ.ಮೊಣ್ಣಪ್ಪ, ಪೊನ್ನಂಪೇಟೆ ಅರಣ್ಯ ಸಂಶೋಧನಾ ಕಾಲೇಜಿನ ನಿವೃತ್ತ ಡೀನ್ ಕುಶಾಲಪ್ಪ, ವಿವಿಧ ಕಾಲೇಜಿನ ಉಪನ್ಯಾ ಸಕರು ಇತರರು ಇದ್ದರು.
ಉಪನ್ಯಾಸಕಿ ಅನುಪಮ ಸ್ವಾಗತಿಸಿದರು, ಪ್ರಥಮ ಬಿ.ಎ ವಿದ್ಯಾರ್ಥಿ ದೀಕ್ಷಿತ್ ಗೌಡ ಅತಿವೃಷ್ಟಿಯಿಂದ ಹಾನಿಗೊಳಗಾದ ಸ್ಥಳಗಳ ಕುರಿತು ಪಿಪಿಟಿ ಪ್ರದರ್ಶನ ನೀಡಿದರು.

Translate »