ಹೊರ ರಾಜ್ಯ ಕಾರ್ಮಿಕರ ಗಡೀಪಾರಿಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಹೊರ ರಾಜ್ಯ ಕಾರ್ಮಿಕರ ಗಡೀಪಾರಿಗೆ ಆಗ್ರಹಿಸಿ ಪ್ರತಿಭಟನೆ

February 19, 2019

ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡು ತ್ತಿರುವ ಅಸ್ಸಾಂ, ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಗಡೀಪಾರು ಮಾಡು ವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಓಡಿಪಿ ಮಹಿಳಾ ಸಂಘಟನೆ ಪ್ರತಿಭಟನೆ ನಡೆಸಿತು.

ಹೊರ ರಾಜ್ಯದಿಂದ ಬಂದಿರುವ ಕಾರ್ಮಿ ಕರಿಂದ ಜಿಲ್ಲೆಯಲ್ಲಿ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದೆ. ಸಿದ್ದಾಪುರದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿಯ ಹತ್ಯೆ ಪ್ರಕರಣವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹೊರ ರಾಜ್ಯದಿಂದ ಕೂಲಿ ಕಾರ್ಮಿಕ ರಾಗಿ ಜಿಲ್ಲೆಗೆ ಬಂದಿರುವ ಅಸ್ಸಾಂ, ಪಶ್ಚಿಮ ಬಂಗಾಳ ಮೂಲದವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲೆ ನಿಂತಿದ್ದಾರೆ. ಈ ಕಾರ್ಮಿಕರ ಬಗ್ಗೆ ಎಸ್ಟೇಟ್ ಮಾಲೀಕರಿ ಗಾಗಲಿ, ಪೊಲೀಸ್ ಇಲಾಖೆಗೂ ಕೂಡ ಸೂಕ್ತ ಮಾಹಿತಿಯೇ ಇಲ್ಲದಾಗಿದೆ. ಆದ್ದರಿಂದ ಇವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಪ್ರತಿ ಭಟನಾಕಾರರು ಒತ್ತಾಯಿಸಿದರು.

ಜಿಲ್ಲೆಯ ಎಲ್ಲಾ ಭಾಗದ ಎಸ್ಟೇಟ್‍ಗಳಲ್ಲಿ ಬಂಗಾಳಿ, ಅಸ್ಸಾಮಿಗರ ಕುಟುಂಬ ಹೆಚ್ಚಾಗಿ ವಾಸವಾಗಿದೆ. ಕಡಿಮೆ ಸಂಬಳಕ್ಕಾಗಿ ಇವ ರನ್ನು ಎಸ್ಟೇಟ್ ಮಾಲೀಕರು ಕಾರ್ಮಿಕರ ನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರ್ಮಿಕರಲ್ಲಿ ಹೆಚ್ಚಿನವರು 16 ರಿಂದ 30 ವರ್ಷ ಪ್ರಾಯದ ಯುವಕರಾಗಿದ್ದು, ಇಂತ ಹವರಿಂದಲೇ ಅಪರಾಧ ಕೃತ್ಯಗಳು ನಡೆಯು ತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು. ಹೊರ ರಾಜ್ಯದ ಕಾರ್ಮಿಕರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಹಲವು ವರ್ಷದಿಂದ ಜಿಲ್ಲೆಯಲ್ಲಿ ಇಂತಹ ಘಟನೆಗಳು ಘಟಿಸಿವೆ. ಆದರೂ ಕೂಡ ಜಿಲ್ಲಾಡಳಿತ ಇವರ ಮಾಹಿತಿ ಸಂಗ್ರಹಿ ಸದೆ, ಯಾವ ಕ್ರಮವನ್ನು ಕೈಗೊಳ್ಳದೆ ಮೌನವಹಿಸಿದೆ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದರು. ಜಿಲ್ಲಾ ಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಮುಂದಿನ ದಿನದಲ್ಲಿ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

Translate »