Tag: T. Narasipura

ನಾಲ್ವರಿಂದ ಲಕ್ಷಾಂತರರೂ. ಕಸಿದ ಭೂಪ
ಮೈಸೂರು

ನಾಲ್ವರಿಂದ ಲಕ್ಷಾಂತರರೂ. ಕಸಿದ ಭೂಪ

July 13, 2018

ಮೈಸೂರು:  ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ಜೊತೆ ಸಂಪರ್ಕ ಮಾಡಿಸಿ ಅವರ ಜೊತೆನೇ ಇರುವ ಹಾಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿದ ಬೆಂಗಳೂರಿನ ವ್ಯಕ್ತಿಯೋರ್ವ ಮೈಸೂರು ಜಿಲ್ಲೆ, ತಿ.ನರಸೀಪುರದ ನಾಲ್ವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಶ್ರೀನಿವಾಸ್‍ಪುರ ನಿವಾಸಿ ರವಿ(28) ಎಂಬಾತನೇ ಅಮಾಯಕ ರನ್ನು ವಂಚಿಸಿ ಪರಾರಿಯಾಗಿರುವ ವ್ಯಕ್ತಿ. ತನ್ನ ತಂಗಿ ಮದುವೆಗೆ ಹಣ ಹೊಂದಿಸುವ ಸಲುವಾಗಿ ಆತ ಅಮಾಯಕರಿಂದ ಹಣ ಕೀಳಲು ಪ್ಲಾನ್ ಮಾಡಿದ್ದನೆಂದು ಹೇಳಲಾಗಿದೆ. ತಾನು ನಟ ಪುನೀತ್ ರಾಜಕುಮಾರ್ ಸಹಾಯಕ…

ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ
ಮೈಸೂರು

ಹಸುಗೂಸನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ

July 9, 2018

ತಿ.ನರಸೀಪುರ: ನಿರ್ದಯಿ ತಾಯಿಯೊಬ್ಬಳು ತನ್ನ ಹೆತ್ತ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ತಲಕಾಡು ಹೋಬಳಿಯ ಮಾರನಪುರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮಹದೇವ ಎಂಬ ವರ ಪತ್ನಿ ಪ್ರಭಾಮಣ (25) ಎಂಬಾಕೆಯೇ ತನ್ನ ಹಸು ಗೂಸನ್ನು ಕೊಲೆ ಮಾಡಿದ ಪಾತಕಿಯಾಗಿದ್ದಾಳೆ. ಈಕೆ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿ ಯಾಗಿ ಕೆಲಸ ಮಾಡುತ್ತಿದ್ದು, ಕಳೆದ 10 ವರ್ಷಗಳ ಹಿಂದೆ ಮಹದೇವನ ಜೊತೆ ವಿವಾಹವಾಗಿ ಈಗಾಗಲೇ 8 ವರ್ಷದ ಗಂಡು…

ತಿ.ನರಸೀಪುರ ಪುರಸಭೆ ವಿಶೇಷ ಸಭೆ ರದ್ದು: ಸದಸ್ಯರ ಅಸಮಾಧಾನ
ಮೈಸೂರು

ತಿ.ನರಸೀಪುರ ಪುರಸಭೆ ವಿಶೇಷ ಸಭೆ ರದ್ದು: ಸದಸ್ಯರ ಅಸಮಾಧಾನ

July 7, 2018

ತಿ.ನರಸೀಪುರ: ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಭೆಗೆ ಪುರಸಭೆ ಅಧ್ಯಕ್ಷರು ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರು ಗೈರು ಹಾಜರಾದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಿ ಮುಂದೂಡಲಾಯಿತು. ಅಧ್ಯಕ್ಷ ಸಿ.ಉಮೇಶ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಗೆ ಪುರಸಭಾ ಸದಸ್ಯರೆಲ್ಲರೂ ಹಾಜರಾಗಿದ್ದರು. ಆದರೆ, ಅಧ್ಯಕ್ಷರು ಹಾಗೂ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ಗೈರು ಹಾಜರಾದಕ್ಕೆ ಸದಸ್ಯರೆಲ್ಲರು ಸೇರಿ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು. ಸಭೆಗೆ ಸದಸ್ಯರೆಲ್ಲರನ್ನು ಆಹ್ವಾನಿಸಿ, ಅಧ್ಯಕ್ಷರೇ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದÀರು. ಈ…

ಎಡದೊರೆಯಲ್ಲಿ ದೇಗುಲದ ಹುಂಡಿ ಕಳವು
ಮೈಸೂರು

ಎಡದೊರೆಯಲ್ಲಿ ದೇಗುಲದ ಹುಂಡಿ ಕಳವು

July 6, 2018

ತಿ.ನರಸೀಪುರ: ತಾಲೂಕಿನ ಎಡದೊರೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿರುವ ಘಟನೆ ತಡರಾತ್ರಿ ನಡೆದಿದೆ. ದೇವಾಲಯ ಹುಂಡಿಯನ್ನು ಕಳೆದ ಒಂದು ವರ್ಷದಿಂದ ತೆರೆದಿರಲಿಲ್ಲ ಎನ್ನ ಲಾಗಿದ್ದು, ಕಳ್ಳರು ತಮ್ಮ ಕೈ ಚಳಕ ತೋರಿ ಹುಂಡಿಯನ್ನು ಒಡೆದು ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಬಳಿಕ ಹುಂಡಿಯನ್ನು ಸುಮಾರು 500 ಮೀಟರ್ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಬ್ಯಾಂಕ್ ನೆರವಿನಿಂದ ದುರ್ಬಲರ ಸಬಲತೆ
ಮೈಸೂರು

ಬ್ಯಾಂಕ್ ನೆರವಿನಿಂದ ದುರ್ಬಲರ ಸಬಲತೆ

July 6, 2018

ತಿ.ನರಸೀಪುರ: ಸಣ್ಣ ಪ್ರಮಾಣದಲ್ಲಿ ದುಡಿಯುವ ರೈತ ವರ್ಗ ಹಾಗೂ ವ್ಯಾಪಾರಗಳಿಗೆ ಉಜ್ಜೀವನ್ ಬ್ಯಾಂಕ್ ಅಗತ್ಯ ಆರ್ಥಿಕ ನೆರವು ದೊರಕಿಸಿ ದರೆ ದುರ್ಬಲ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ನಂಜೇಶ್ ತಿಳಿಸಿದರು. ಪಟ್ಟಣದ ಜೋಡಿ ರಸ್ತೆಯಲ್ಲಿರುವ ಮಹ ದೇಶ್ವರ ಪ್ಲಾಜಾ (ವಜ್ರೇಗೌಡ ಕಾಂಪ್ಲೆಕ್ಸ್) ದಲ್ಲಿ ಪ್ರಾರಂಭಗೊಂಡ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಬ್ಯಾಂಕ್‍ಗಳಲ್ಲಿ ದೊಡ್ಡ ಪ್ರಮಾಣದ ಉದ್ಯಮ ವ್ಯವಹಾರ ನಡೆಸುವ ಜನರಿಗೆ ಸುಲಭವಾಗಿ ಆರ್ಥಿಕ…

ತಿ.ನರಸೀಪುರ ಪುರಸಭೆ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ
ಮೈಸೂರು

ತಿ.ನರಸೀಪುರ ಪುರಸಭೆ ವಾರ್ಡ್‍ಗಳಿಗೆ ಮೀಸಲಾತಿ ನಿಗದಿ

June 15, 2018

ತಿ.ನರಸೀಪುರ:  ಪಟ್ಟಣದ ಪರಿವರ್ತಿತ ಪುರಸಭೆಗೆ ಸೆಪ್ಟೆಂಬರ್‍ನಲ್ಲಿ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ನೂತನ ವಾಗಿ ರಚನೆಯಾಗಿರುವ 23 ವಾರ್ಡು ಗಳಿಗೂ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಭೈರಾಪುರ ಮತ್ತು ಆಲಗೂಡು ಗ್ರಾಮ ಪಂಚಾಯಿತಿ ಗಳನ್ನು ವಿಲೀನಗೊಳಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ ನಂತರ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಯಾವೊಬ್ಬ ಚುನಾಯಿತ ಪ್ರತಿನಿಧಿಯಿಲ್ಲದೆ ಸಾರ್ವಜನಿಕರ ಅಹವಾಲು ಹಾಗೂ ಮೂಲ ಭೂತ ಸಮಸ್ಯೆಗಳನ್ನು ಕೇಳುವವರಿಲ್ಲದಂತಾ ಗಿತ್ತು. ಹಿಂದಿನ ಪಟ್ಟಣ ಪಂಚಾಯಿತಿಯ ಜನಪ್ರತಿನಿಧಿಗಳೇ ಪರಿವರ್ತಿತ ಪುರಸಭೆ ಯಲ್ಲಿ ಮುಂದುವರೆದಿದ್ದರು….

ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲುವಿನ ವಿಶ್ವಾಸ
ಮೈಸೂರು

ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ನಿರಂಜನಮೂರ್ತಿ ಗೆಲುವಿನ ವಿಶ್ವಾಸ

June 8, 2018

ತಿ.ನರಸೀಪುರ:  ಸಮಾನ ವೇತನ ಸೇರಿದಂತೆ ಶಿಕ್ಷಣ ನೀತಿ ಹಾಗೂ ನಿವೃತ್ತಿ ವೇತನದ ತಾರತಮ್ಯದ ಬಗ್ಗೆ ಹೋರಾಟ ಮಾಡುವ ಬದ್ಧತೆ ಯನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಬಿ. ನಿರಂಜನಮೂರ್ತಿ ಗೆಲುವು ಖಚಿತವೆಂದು ಹಿರಿಯ ಮುಖಂಡ, ರಾಜ್ಯ ಸಮಿತಿ ಸದಸ್ಯ ಕರುಹಟ್ಟಿ ಮಹಾದೇವಯ್ಯ ಹೇಳಿದರು. ಪಟ್ಟಣದ ವಿದ್ಯೋದಯ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಸಂಜೆ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಅವರ ಪರ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್…

ಟಿ.ನರಸೀಪುರದಲ್ಲಿ ಬಿಎಸ್ಪಿ ಕಚೇರಿ ಉದ್ಘಾಟನೆ
ಮೈಸೂರು

ಟಿ.ನರಸೀಪುರದಲ್ಲಿ ಬಿಎಸ್ಪಿ ಕಚೇರಿ ಉದ್ಘಾಟನೆ

June 2, 2018

ತಿ.ನರಸೀಪುರ: ಪ್ರಸ್ತುತ ಸಮಾಜವನ್ನು ಚಾರಿತ್ರಿಕ ಜಾಗೃತಿ ಗೊಳಿಸಿ, ಬಹುಜನರನ್ನು ರಾಜಕೀಯ ಎಚ್ಚರಿ ಸುವುದೇ ಬಹುಜನ ಸಮಾಜ ಪಕ್ಷದ ಚಳವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಬಿಎಸ್ಪಿ ಕ್ಷೇತ್ರ ಉಸ್ತುವಾರಿ ಹಾಗೂ ಹಿರಿಯ ಮುಖಂಡ ಬಿ.ಆರ್.ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಕಾಲೇಜು ರಸ್ತೆಯಲ್ಲಿ ಶುಕ್ರವಾರ ನಡೆದ ಬಹುಜನ ಸಮಾಜ ಪಕ್ಷದ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಬುದ್ಧ ರಾಷ್ಟ್ರವಾಗಬೇಕಿದ್ದ ಭಾರತ ದೇಶದ ಹಲವಾರು ಐತಿಹಾಸಿಕ ಘಟನೆಗಳನ್ನು ಮರೆಮಾಚಿರುವ ಮನುವಾದಿ ವ್ಯವಸ್ಥೆ ಬರೀ ಸುಳ್ಳನ್ನೇ ಜನರ ತಲೆಯಲ್ಲಿ ತುಂಬುತ್ತಿದೆ. ಗತಕಾಲದಲ್ಲಿ ಮುಚ್ಚಿ ಹೋಗಿರುವ…

ತಂಬಾಕು ಸೇವನೆ ಅನಾಹುತಗಳ ಅರಿವು
ಮೈಸೂರು

ತಂಬಾಕು ಸೇವನೆ ಅನಾಹುತಗಳ ಅರಿವು

June 1, 2018

ತಿ.ನರಸೀಪುರ:  ವಿದ್ಯಾರ್ಥಿಗಳು ದುಶ್ಚಟಮುಕ್ತರಾಗಿ, ಆರೋಗ್ಯ ದಿಂದ ಬದುಕಲು ಅಗತ್ಯ ಕಾನೂನು ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆ ಪಡೆಯು ವಂತೆ ಹಿರಿಯ ಶ್ರೇಣ ನ್ಯಾಯಾಧೀಶ ಎ. ನಾಗಿರೆಡ್ಡಿ ಕರೆ ನೀಡಿದರು ಪಟ್ಟಣದ ಸರ್ಕಾರಿ ಪಿಯು ಕಾಲೇಜಿ ನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯ ದಲ್ಲಿ ಗುರುವಾರ ನಡೆದ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, 18…

ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಪೊಲೀಸರಿಗೆ ದೂರು
ಮೈಸೂರು

ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಪೊಲೀಸರಿಗೆ ದೂರು

May 28, 2018

ತಿ.ನರಸೀಪುರ:  ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಮತ್ತು ಪೋಸ್ಟ್‍ಗಳನ್ನು ಹರಿಯಬಿಟ್ಟು ತಮ್ಮ ತೇಜೋವಧೆ ಮಾಡಿ, ಸೋಲಿಸಲು ಷಡ್ಯಂತ್ರ ರೂಪಿಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್.ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಮೈಸೂರು ನಗರದಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ತೆರಳಿ ಎಸ್ಪಿ ಅಮಿತ್‍ಸಿಂಗ್ ಅವರಿಗೆ ಲಿಖಿತ ದೂರನ್ನು ನೀಡಿರುವ ಎಸ್.ಶಂಕರ್, ಚುನಾವಣೆಯ ಮತದಾನ ಪೂರ್ವದಲ್ಲಿ ಕೆಲವು ಕಿಡಿಗೇಡಿಗಳು ಸೇರಿದಂತೆ ಮಲ್ಲಿಕಾರ್ಜುನಸ್ವಾಮಿ…

1 5 6 7 8 9
Translate »