ತಿ.ನರಸೀಪುರ ಪುರಸಭೆ ವಿಶೇಷ ಸಭೆ ರದ್ದು: ಸದಸ್ಯರ ಅಸಮಾಧಾನ
ಮೈಸೂರು

ತಿ.ನರಸೀಪುರ ಪುರಸಭೆ ವಿಶೇಷ ಸಭೆ ರದ್ದು: ಸದಸ್ಯರ ಅಸಮಾಧಾನ

July 7, 2018

ತಿ.ನರಸೀಪುರ: ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಭೆಗೆ ಪುರಸಭೆ ಅಧ್ಯಕ್ಷರು ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರು ಗೈರು ಹಾಜರಾದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಿ ಮುಂದೂಡಲಾಯಿತು.

ಅಧ್ಯಕ್ಷ ಸಿ.ಉಮೇಶ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಗೆ ಪುರಸಭಾ ಸದಸ್ಯರೆಲ್ಲರೂ ಹಾಜರಾಗಿದ್ದರು. ಆದರೆ, ಅಧ್ಯಕ್ಷರು ಹಾಗೂ ಇಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ಗೈರು ಹಾಜರಾದಕ್ಕೆ ಸದಸ್ಯರೆಲ್ಲರು ಸೇರಿ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು.

ಸಭೆಗೆ ಸದಸ್ಯರೆಲ್ಲರನ್ನು ಆಹ್ವಾನಿಸಿ, ಅಧ್ಯಕ್ಷರೇ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದÀರು. ಈ ವೇಳೆ ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಲು ಚಿಂತಿಸಲಾಯಿತು. ಬಳಿಕ, ಆ ಪ್ರಯತ್ನವು ವಿಫಲವಾಯಿತು.

ನಾಮ ನಿರ್ದೇಶಿತ ಸದಸ್ಯ ಬಿ.ಮರಯ್ಯ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡ ಜನರ ಅಭಿವೃದ್ಧಿಗೆ ಬಳಕೆಯಾಗ ಬೇಕಿದ್ದ 1.25 ಕೋಟಿ ರೂ. ಅನುದಾನ ದುರ್ಬಳಕೆಯಾಗಿದೆ. ಅವ್ಯವಹಾರದಿಂದ ತಪ್ಪಿಸಿಕೊಳ್ಳಲು ವಿಶೇಷ ಸಭೆಯನ್ನು ಮುಂದೂಡಲಾಗುತ್ತಿದೆ ಎಂದು ದೂರಿದರು.

ಎಸ್‍ಸಿ, ಎಸ್‍ಟಿ ಜನರ ಹಣವನ್ನು ಕಬಳಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕ್ರಿಯಾ ಯೋಜನೆ ಅನುಮೋದನೆ ನೀಡದಿ ದ್ದರೂ ಕಾಮಗಾರಿ ನಡೆಸಲಾಗಿದೆ. ಈ ಸಂಬಂಧ ಲೋಕಾಯುಕ್ತರು ಹಾಗೂ ಉನ್ನತ ಅಧಿಕಾರಿಗಳಿಗೆ ದೂರನ್ನು ನೀಡುತ್ತೇನೆ ಎಂದರು. ಪಟ್ಟಣದ ಸಮಗ್ರ ಬೆಳವಣಿಗೆಗೆ ದೂರದೃಷ್ಟಿಯನ್ನಿಟ್ಟುಕೊಂಡು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ರಾಗಿದ್ದ ಮಹದೇವಪ್ಪ ಅವರು ಭೈರಾ ಪುರ ಮತ್ತು ಆಲಗೂಡು ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಯಲ್ಲಿ ವಿಲೀನಗೊಳಿಸಿ ಪುರಸಭೆಯನ್ನಾಗಿ ಮೇಲ್ದರ್ಜೇಗೇರಿ ಸಿದ್ದರು. ಆದರೆ, ಈಗಿನವರು ಪುರಸಭೆ ಬೆಳವಣಿಗೆಗೆ ಸಹಕಾರವನ್ನು ನೀಡುತ್ತಿಲ್ಲ. ಅಧಿಕಾರಿಗಳು ಇತ್ತ ತಿರುಗಿಯೂ ನೋಡು ತ್ತಿಲ್ಲ. ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.

ಸದಸ್ಯ ಮಲ್ಲೇಶ ಮಾತನಾಡಿ, ಅಭಿವೃದ್ಧಿ ವಿಚಾರವಾಗಿ ಕರೆಯಲಾಗಿದ್ದ ವಿಶೇಷ ಸಭೆಯನ್ನು ರದ್ದುಪಡಿಸುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಮುಂಬರುವ ಸಾರ್ವತ್ರಿಕ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಲಿ ಸದಸ್ಯರ ಮೇಲೆ ಪ್ರಭಾವವನ್ನು ಬೀರಲಿದೆ. ಸಭೆಯನ್ನು ರದ್ದುಪಡಿಸುವುದು ಸರಿಯಲ್ಲ. ಮಹಿಳಾ ಸದಸ್ಯರ ಕಾದು ಕುಳಿತಿರುವುದು ಶೋಭೆಯಲ್ಲ ಎಂದು ಅಸಮಧಾನವನ್ನು ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ರಾಜಮ್ಮ, ಶೃತಿ ಮಣಿಕಂಠ, ನೈಸ್ ಮಹದೇವಸ್ವಾಮಿ, ಶಶಿಕಲಾ ಪ್ರಕಾಶ್, ಸುಧಾ ಗುರುಮಲ್ಲಪ್ಪ, ನಾಮ ನಿರ್ದೇಶಿತ ಸದಸ್ಯರಾದ ಆಲಗೂಡು ನಾಗರಾಜು, ಮುದ್ದಬೀರನಹುಂಡಿ ಮಹದೇವ, ಆರೋಗ್ಯ ನಿರೀಕ್ಷಕ ಚೇತನ್‍ಕುಮಾರ್, ಕಿರಿಯ ಎಂಜಿನಿಯರ್ ಕೆ.ಪುರುಷೋತ್ತಮ, ಯೋಜನಾಧಿಕಾರಿ ಕೆಂಪರಾಜು, ಸಮು ದಾಯ ಸಂಘಟಕ ಮಹದೇವ, ಲೆಕ್ಕಾಧಿಕಾರಿ ವಿನಯ್, ರಾಜಸ್ವ ನಿರೀಕ್ಷಕಿ ರಾಣಿ , ಸಹಾ ಯಕ ಆರೋಗ್ಯಾಧಿಕಾರಿ ಎಂ.ಮಹೇಂದ್ರ, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ಹರೀಶ್, ರಾಮಸ್ವಾಮಿ, ರಾಜೇಂದ್ರ ಹಾಜರಿದ್ದರು.

Translate »