ನಾಲ್ವರಿಂದ ಲಕ್ಷಾಂತರರೂ. ಕಸಿದ ಭೂಪ
ಮೈಸೂರು

ನಾಲ್ವರಿಂದ ಲಕ್ಷಾಂತರರೂ. ಕಸಿದ ಭೂಪ

July 13, 2018

ಮೈಸೂರು:  ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ಜೊತೆ ಸಂಪರ್ಕ ಮಾಡಿಸಿ ಅವರ ಜೊತೆನೇ ಇರುವ ಹಾಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿದ ಬೆಂಗಳೂರಿನ ವ್ಯಕ್ತಿಯೋರ್ವ ಮೈಸೂರು ಜಿಲ್ಲೆ, ತಿ.ನರಸೀಪುರದ ನಾಲ್ವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ಶ್ರೀನಿವಾಸ್‍ಪುರ ನಿವಾಸಿ ರವಿ(28) ಎಂಬಾತನೇ ಅಮಾಯಕ ರನ್ನು ವಂಚಿಸಿ ಪರಾರಿಯಾಗಿರುವ ವ್ಯಕ್ತಿ. ತನ್ನ ತಂಗಿ ಮದುವೆಗೆ ಹಣ ಹೊಂದಿಸುವ ಸಲುವಾಗಿ ಆತ ಅಮಾಯಕರಿಂದ ಹಣ ಕೀಳಲು ಪ್ಲಾನ್ ಮಾಡಿದ್ದನೆಂದು ಹೇಳಲಾಗಿದೆ.

ತಾನು ನಟ ಪುನೀತ್ ರಾಜಕುಮಾರ್ ಸಹಾಯಕ ಎಂದು ನಂಬಿಸಿ ಮೋಸ ಮಾಡಿರುವ ರವಿ ಮೂಲತಃ ಬನ್ನೂರು ಹೋಬಳಿ ಅಂಕನಹಳ್ಳಿ ಗ್ರಾಮದವನಾ ಗಿದ್ದು, ಕೆಲ ವರ್ಷಗಳಿಂದ ಬೆಂಗಳೂರಿನ ತೆರಳಿ ವಾಸ ಮಾಡುತ್ತಿದ್ದ ಎನ್ನಲಾಗಿದೆ.

ಇತ್ತೀಚೆಗೆಷ್ಟೇ ಮೈಸೂರು ತಾಲೂಕು, ಕುಪ್ಯಾ ಗ್ರಾಮಕ್ಕೆ ಬಂದಿದ್ದ ರವಿ, ಮೊದಲು ತನ್ನ ದೂರದ ಸಂಬಂಧಿ ರಮೇಶ್‍ನನ್ನು ಭೇಟಿ ಮಾಡಿ ಗರಿ-ಗರಿ ಬಟ್ಟೆ, ಕೊರಳು ಮತ್ತು ಕೈಗಳಲ್ಲಿ ಚಿನ್ನದ ಆಭರಣಗಳನ್ನು ಧರಿಸಿ ಶೋ ಅಪ್ ಮಾಡಿ, ತಾನು ಆರ್ಥಿಕವಾಗಿ ಸದೃಢವಾಗಿದ್ದೆನೆಂಬುದನ್ನು ತೋರಿಸಿದ. ರವಿಯ ಶ್ರೀಮಂತಿಕೆ ಮಾತುಗಳನ್ನು ನಂಬಿದ ರಮೇಶ್ ಮನೆಗೆ ಕರೆ ತಂದು ಕ್ಲೋಸ್ ಆಗಿ ಮಾತನಾಡ ತೊಡಗಿದಾಗ ತನ್ನ ತಂಗಿ ಶೃತಿ ಮದುವೆ ಫಿಕ್ಸ್ ಆಗಿದೆ ಎಂದು ರವಿ ಪ್ರಸ್ತಾಪಿಸಿದ. ರಮೇಶ್ ಪುತ್ರ ಗಿರೀಶ್‍ಗೆ ಪ್ರಭಾವ ಬೆಳಸಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಹಣ ಕಿತ್ತಿದ್ದ.

ಅದೇ ರೀತಿ ರಮೇಶ್ ಪತ್ನಿ ಉಮಾರಿಂದಲೂ ಚಿನ್ನಾಭರಣ ಪಡೆದುಕೊಂಡು ರವಿ, ನಂತರ ಗುರುಮೂರ್ತಿ ಎಂಬು ವರನ್ನು ಸಂಪರ್ಕಿಸಿ ಪುನೀತ್‍ರಾಜಕುಮಾರ್ ಕಾರಿಗೆ ಡ್ರೈವರ್ ಕೆಲಸ ಕೊಡಿಸುವುದಾಗಿ ಆಮಿಷ ತೋರಿ 50 ಗ್ರಾ ಚಿನ್ನದ ಸರ ಪೀಕಿದ.
ತಂಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪುನೀತ್‍ರಾಜಕುಮಾರ್ ಹೆಸರು ಮುದ್ರಿಸಿದ್ದ ಆತ ಹಣ ಚಿನ್ನ ಪಡೆದು ಬೆಂಗಳೂರಿಗೆ ತೆರಳಿದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎಂದು ರಮೇಶ್, ಉಮಾ, ಗುರು ಮೂರ್ತಿ ಅವರು ತಿ.ನರಸೀಪುರ ಠಾಣೆಗೆ ದೂರು ನೀಡಿದ್ದಾರೆ ಎಂದು ಸರ್ಕಲ್ ಇನ್‍ಸ್ಪೆಕ್ಟರ್ ಮನೋಜ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನಿನ್ನೆಯಷ್ಟೇ ನಾನು ಚಾರ್ಚ್ ತೆಗೆದು ಕೊಂಡಿದ್ದೇನೆ ವಂಚನೆ ಸಂಬಂಧ ದೂರು ನೀಡಿರುವ ವಿಷಯ ತಿಳಿಯಿತು. ಆ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

Translate »