Tag: World Environment Day

ವಿಶ್ವ ಪರಿಸರ ದಿನಾಚರಣೆ: ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಅಭಿಯಾನ
ಚಾಮರಾಜನಗರ

ವಿಶ್ವ ಪರಿಸರ ದಿನಾಚರಣೆ: ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಅಭಿಯಾನ

June 10, 2018

ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಕರಿಂದ ಕಸ ಸಂಗ್ರಹ ಪ್ಲಾಸ್ಟಿಕ್ ಬಳಸದಂತೆ ಭಕ್ತರಲ್ಲಿ ಮನವಿ, ವಿದ್ಯಾರ್ಥಿಗಳು- ಅರಣ್ಯ ಇಲಾಖೆಯಿಂದ ಜಾಗೃತಿ ಜಾಥಾ ಮಲೆ ಮಹದೇಶ್ವರ ಬೆಟ್ಟ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ತಾಳುಬೆಟ್ಟದಿಂದ ದೇವಾಲಯದವರೆಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಐದು ಲಾರಿ ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಸಂಗ್ರಹಿಸಿ, ಪರಿಸರವನ್ನು ಸ್ವಚ್ಛ ಗೊಳಿಸಿ ಗಮನ ಸೆಳೆದರು. ಅರಣ್ಯ ಇಲಾಖೆಯ ಮಲೆ ಮಹದೇಶ್ವರ…

ಪರಿಸರ ಉಳಿವಿಗೆ ಗಿಡ, ಮರ ಬೆಳೆಸಿ
ಚಾಮರಾಜನಗರ

ಪರಿಸರ ಉಳಿವಿಗೆ ಗಿಡ, ಮರ ಬೆಳೆಸಿ

June 10, 2018

ಗುಂಡ್ಲುಪೇಟೆ:- ‘ಪ್ರಸ್ತುತ ದಿನಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಪರಿಸರವನ್ನು ಉಳಿಸಬೇಕಾದರೆ ಹೆಚ್ಚು ಗಿಡ-ಮರಗಳನ್ನು ಬೆಳಸಬೇಕು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್ ಹೇಳಿದರು. ತಾಲೂಕಿನ ಶಿವಪುರ ಗ್ರಾಮದ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜೀವನ ಶೈಲಿಯೊಂದಿಗೆ ಪರಿಸರ ಅವನತಿಯ ಅಂಚಿಗೆ ಬಂದಿದೆ. ಇಂದಿನ ಮಕ್ಕಳು ಪರಿಸರವನ್ನು ಉಳಿಸುವುದು ಅನಿವಾರ್ಯವಾಗಿದೆ. ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಡುವುದನ್ನು ಬಿಟ್ಟು, ಸದಾ ಕಾಲ…

ಪರಿಸರ ರಕ್ಷಣೆ ಎಲ್ಲರ ಹೊಣೆ
ಮೈಸೂರು

ಪರಿಸರ ರಕ್ಷಣೆ ಎಲ್ಲರ ಹೊಣೆ

June 8, 2018

ಬೆಟ್ಟದಪುರ:  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಜಯಸ್ವಾಮಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಶಿಡಿಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನ ದೈವಿವನದ ಹೊರಾಂಗಣ ದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಮಾನವನು ಉತ್ತಮವಾದ ಜೀವನ ವನ್ನು ನಡೆಸಬೇಕಾದರೆ ಪ್ರಕೃತಿದತ್ತವಾದ ಸಂಪನ್ಮೂಲಗಳು ಮೂಲಕಾರಣವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಿನನಿತ್ಯದ…

ಪರಿಸರ ಸ್ನೇಹಿ ಕ್ರಮಗಳಿಗೆ ಆಗ್ರಹಿಸಿ ಆರ್‍ಎಲ್‍ಹೆಚ್‍ಪಿ ಜನಜಾಗೃತಿ ಜಾಥಾ
ಮೈಸೂರು

ಪರಿಸರ ಸ್ನೇಹಿ ಕ್ರಮಗಳಿಗೆ ಆಗ್ರಹಿಸಿ ಆರ್‍ಎಲ್‍ಹೆಚ್‍ಪಿ ಜನಜಾಗೃತಿ ಜಾಥಾ

June 8, 2018

ಮೈಸೂರು:  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‍ಎಲ್‍ಹೆಚ್‍ಪಿ)ಯು ಪರಿಸರ ಸಂರಕ್ಷಣೆಗಾಗಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿತು.ಆರ್‍ಎಲ್‍ಹೆಚ್‍ಪಿ ಸಂಸ್ಥೆ ವ್ಯಾಪ್ತಿಯ ಕೊಳಚೆ ಪ್ರದೇಶಗಳ ನೂರಾರು ಮಕ್ಕಳು ಮತ್ತು ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಪರಿಸರ ರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರದ ಬಗ್ಗೆ ಜನಜಾಗೃತಿ ಮೂಡಿಸಿದರು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ…

ಜೂ.9, ವೈದ್ಯರಿಂದ ಪರಿಸರ ಗೀತೆಗಳ ಗಾಯನ
ಮೈಸೂರು

ಜೂ.9, ವೈದ್ಯರಿಂದ ಪರಿಸರ ಗೀತೆಗಳ ಗಾಯನ

June 7, 2018

ಮೈಸೂರು: ಮೈಸೂರಿನ ನಿಸರ್ಗ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಜೂ.9ರ ಸಂಜೆ 6 ಗಂಟೆಗೆ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ‘ನಿಸರ್ಗ ವಂದನ’ ವೈದ್ಯರಿಂದ ಪರಿಸರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಸಂಸ್ಥಾಪಕಿ ಎಚ್.ಆರ್.ಲೀಲಾವತಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಮತ್ತು ಮೈಸೂರಿನ 11 ವೈದ್ಯರು ಪರಿಸರ ಗೀತೆಗಳನ್ನು ಹಾಡಲಿದ್ದಾರೆ. ಆರೋಗ್ಯದ ಮೇಲೆ ಸಂಗೀತ ಪರಿಣಾಮಕಾರಿ ಔಷಧವಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಸ್ತ್ರಚಿಕಿತ್ಸೆ ವೇಳೆ ಸಂಗೀತವನ್ನು ಕೇಳಿಸಲಾಗುತ್ತದೆ. ಈ…

ವಿಶ್ವ ಪರಿಸರ ದಿನಾಚರಣೆ 8 ಮಂದಿ ಪರಿಸರ ಪ್ರೇಮಿ ಪ್ರಶಸ್ತಿ ಪ್ರಧಾನ
ಮೈಸೂರು

ವಿಶ್ವ ಪರಿಸರ ದಿನಾಚರಣೆ 8 ಮಂದಿ ಪರಿಸರ ಪ್ರೇಮಿ ಪ್ರಶಸ್ತಿ ಪ್ರಧಾನ

June 5, 2018

ಮೈಸೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿವರ್ತನಂ ಟ್ರಸ್ಟ್ ವತಿಯಿಂದ 8 ಮಂದಿಗೆ `ಪರಿಸರ ಪ್ರೇಮಿ ಪ್ರಶಸ್ತಿ’ಯನ್ನು ಸೋಮವಾರ ಪ್ರದಾನ ಮಾಡಲಾಯಿತು. ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಹೆಚ್.ಎನ್.ಶ್ರೀಧರಮೂರ್ತಿ, ಸುರೇಶ್, ಕೆ.ಆರ್.ರಾಜೀವ್, ಎಂ.ಬಸವರಾಜು, ಹೆಚ್.ವಿ.ಭಾಸ್ಕರ್, ಎ.ಸಂತೋಷ್, ಪ್ರದೀಪ್‍ಗೌಡ, ರಾಜಶೇಖರ್ ಅವರಿಗೆ ಪರಿಸರ ಪ್ರೇಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತಿಥಿಯಾಗಿ ಪಾಲ್ಗೊಂಡಿದ್ದ ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್ ಮಾತನಾಡಿ, ಪ್ರಸ್ತುತ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ….

ಇಂದು ಸೈಕಲ್ ಜಾಥಾ
ಮೈಸೂರು

ಇಂದು ಸೈಕಲ್ ಜಾಥಾ

June 5, 2018

ಮೈಸೂರು: ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಇನ್ಫೊಪೆಸ್ಟ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ-2018 ಪ್ರಯುಕ್ತ ಸೈಕಲ್ ಜಾಥಾ ಕಾರ್ಯಕ್ರಮ ಜೂ.5ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.

ಶಾಲಾಂಗಳದಲ್ಲಿ ಚಿಗುರಿದ ‘ಹಸಿರು ಸಿರಿ’: ‘ಪರಿಸರ ಮಿತ್ರ’ ಪ್ರಶಸ್ತಿಗೆ ಪಾತ್ರವಾಗಿರುವ ಹಲಗಾಪುರ ಸರ್ಕಾರಿ ಶಾಲೆ
ಚಾಮರಾಜನಗರ

ಶಾಲಾಂಗಳದಲ್ಲಿ ಚಿಗುರಿದ ‘ಹಸಿರು ಸಿರಿ’: ‘ಪರಿಸರ ಮಿತ್ರ’ ಪ್ರಶಸ್ತಿಗೆ ಪಾತ್ರವಾಗಿರುವ ಹಲಗಾಪುರ ಸರ್ಕಾರಿ ಶಾಲೆ

June 5, 2018

ಚಾಮರಾಜನಗರ:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಫಲಕ ನೋಡಿ ಅದರ ಆವರಣದೊಳಗೆ ದೃಷ್ಟಿ ಹಾಯಿಸಿದರೆ ಇದು ಶಾಲೆಯೋ ಅಥವಾ ಕೃಷಿ ಜಮೀನೋ ಅಥವಾ ಉದ್ಯಾನವೋ ಎಂಬ ಅನುಮಾನ ಮೂಡುತ್ತದೆ.ಬಾಳೆ, ತೆಂಗು, ಬೇವಿನ ಮರಗಳ ಜತೆಗೆ, ಹಣ್ಣು-ತರಕಾರಿ ಮತ್ತು ಬಣ್ಣ ಬಣ್ಣದ ಹೂವಿನ ಗಿಡಗಳ ಜಗತ್ತು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುತ್ತದೆ. ಜತೆಗೆ, ಅಲಂಕಾರಿಕ ಗಿಡಗಳು ಉದ್ಯಾನವನ್ನು ನೆನಪಿ ಸುತ್ತದೆ. ಹೀಗೆ ಶಾಲೆಯ ಆವರಣವನ್ನೇ ಪುಟ್ಟ ತೋಟವನ್ನಾಗಿಸಿರುವುದು ಜಿಲ್ಲೆಯ ಹನೂರು ತಾಲೂಕಿನ ಹಲಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ….

ಉಚಿತ ಗಿಡ ವಿತರಣೆ, ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಉಚಿತ ಗಿಡ ವಿತರಣೆ, ಆರೋಗ್ಯ ತಪಾಸಣಾ ಶಿಬಿರ

June 5, 2018

ಮೈಸೂರು: ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ಹೆಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಜೂ. 5 ರಿಂದ 8 ರವರೆಗೆ ಉಚಿತವಾಗಿ ರೋಗ ನಿರೋಧಕ ಸಸ್ಯಗಳಾದ ಅಮೃತಬಳ್ಳಿ, ತುಳಸಿ, ಕರಿಬೇವು, ಇನ್ಸೂಲಿನ್ ಹಾಗೂ ಹೂವಿನ ಗಿಡಗಳ ವಿತರಣೆ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.5ರಂದು ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟದ ಹತ್ತಿರದ ಜೋಡಿ ರಸ್ತೆ, ಜೂ. 6ರಂದು ಚಿನ್ಮಯ ಉದ್ಯಾನವನ ಮತ್ತು ಜಗನ್ಮಯಿ ಉದ್ಯಾನವನದ ಮಧ್ಯಭಾಗದಲ್ಲಿ, ಜೂ.7ರಂದು ಸಮಸೋಪಾನ ಉದ್ಯಾನವನ (ಎ ಟು ಜೆಡ್…

ಮರಗಳ ಹನನದಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ: ಸಿಎಸ್‍ಆರ್‍ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ
ಮೈಸೂರು

ಮರಗಳ ಹನನದಿಂದ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ: ಸಿಎಸ್‍ಆರ್‍ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ

June 4, 2018

ಮೈಸೂರು:  ಪ್ರಪಂಚದಲ್ಲಿ ವರ್ಷಕ್ಕೆ 15 ಬಿಲಿಯನ್ ಮರಗಳ ಹನನ ನಡೆಯುತ್ತಿದ್ದು, ಇದರಿಂದ ಪರಿಸರದಲ್ಲಿ ಅಸಮತೋಲನ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರೆದರೆ ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದು ಕೇಂದ್ರೀಯ ರೇಷ್ಮೆ ಕೃಷಿ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ (ಸಿಎಸ್‍ಆರ್‍ಟಿಐ) ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು. ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ `ಹಸಿರು-ಉಸಿರು’ ಶೀರ್ಷಿಕೆಯಡಿ ಭಾನುವಾರ ಹಮ್ಮಿಕೊಂಡಿದ್ದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ಅವರ ರಚನೆಯ ಪರಿಸರ ಜಾಗೃತಿ ಚಿತ್ರಕಲಾ ಪ್ರದರ್ಶನಕ್ಕೆ…

1 2 3
Translate »