ಜೂ.9, ವೈದ್ಯರಿಂದ ಪರಿಸರ ಗೀತೆಗಳ ಗಾಯನ
ಮೈಸೂರು

ಜೂ.9, ವೈದ್ಯರಿಂದ ಪರಿಸರ ಗೀತೆಗಳ ಗಾಯನ

June 7, 2018

ಮೈಸೂರು: ಮೈಸೂರಿನ ನಿಸರ್ಗ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಜೂ.9ರ ಸಂಜೆ 6 ಗಂಟೆಗೆ ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ‘ನಿಸರ್ಗ ವಂದನ’ ವೈದ್ಯರಿಂದ ಪರಿಸರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಸಂಸ್ಥಾಪಕಿ ಎಚ್.ಆರ್.ಲೀಲಾವತಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಮತ್ತು ಮೈಸೂರಿನ 11 ವೈದ್ಯರು ಪರಿಸರ ಗೀತೆಗಳನ್ನು ಹಾಡಲಿದ್ದಾರೆ. ಆರೋಗ್ಯದ ಮೇಲೆ ಸಂಗೀತ ಪರಿಣಾಮಕಾರಿ ಔಷಧವಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಸ್ತ್ರಚಿಕಿತ್ಸೆ ವೇಳೆ ಸಂಗೀತವನ್ನು ಕೇಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸಂಗೀತದ ಮಹತ್ವ ಹೆಚ್ಚಿನದಾಗಿದೆ ಎಂದರು.

ಅಂದು ಉದ್ಯಮಿ ಕುಸುಮಾ ಶೆಣೈ, ಡಾ.ಜಗನ್ನಾಥ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್‍ನ ಉಪಾಧ್ಯಕ್ಷ ಟಿ.ಆರ್.ಹರೀಶ್ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಎನ್ವಿರೋನ್ಮೆಂಟ್ ಛೇರ್ಮನ್ ಡಾ.ಎ.ಎನ್.ಎಲ್ಲಪ್ಪರೆಡ್ಡಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಪ್ರತಿಭಾ ಗುರುರಾಜ್ ಉಪಸ್ಥಿತರಿದ್ದರು.

Translate »