ಪಕ್ಷೇತರ ಅಭ್ಯರ್ಥಿ ಡಾ.ಎಸ್‍ಬಿಎಂ ಪ್ರಸನ್ನ ಮನವಿ : ಶಿಕ್ಷಕರ ಸಮಸ್ಯೆ ಸ್ವತಃ ಅರಿವಿರುವ ನನ್ನನ್ನು ಆಯ್ಕೆ ಮಾಡಿ
ಮೈಸೂರು

ಪಕ್ಷೇತರ ಅಭ್ಯರ್ಥಿ ಡಾ.ಎಸ್‍ಬಿಎಂ ಪ್ರಸನ್ನ ಮನವಿ : ಶಿಕ್ಷಕರ ಸಮಸ್ಯೆ ಸ್ವತಃ ಅರಿವಿರುವ ನನ್ನನ್ನು ಆಯ್ಕೆ ಮಾಡಿ

June 7, 2018

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‍ಗೆ ಪಕ್ಷೇತರ ಅಭ್ಯರ್ಥಿಯಾಗಿರುವ ತಮಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಡಾ.ಎಸ್.ಬಿ.ಎಂ.ಪ್ರಸನ್ನ ಇಂದಿಲ್ಲಿ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಕಳೆದ 20 ವರ್ಷಗಳಿಂದ ಅರೆಕಾಲಿಕ ಹಾಗೂ ಅತಿಥಿ ಶಿಕ್ಷಕನಾಗಿ ಸರ್ಕಾರಿ, ಖಾಸಗಿ, ವಿಶ್ವವಿದ್ಯಾನಿಲಯ ಮಟ್ಟದವರೆಗೆ ಶಿಕ್ಷಕನಾಗಿ ದುಡಿದು ಆ ಎಲ್ಲಾ ಕ್ಷೇತ್ರಗಳಲ್ಲಿ ಶಿಕ್ಷಕರು ಅನುಭವಿಸುತ್ತಿರುವ ನೋವನ್ನು ಸ್ವತಃ ನಾನೂ ಅನುಭವಿಸಿದ್ದೇನೆ. ಶಿಕ್ಷಕರ ಮತ್ತು ಶಿಕ್ಷಣ ಕ್ಷೇತ್ರದ ಘನತೆ-ಗೌರವವನ್ನು ಎತ್ತಿಹಿಡಿಯಲು ಮತ್ತು ಶಿಕ್ಷಕರು ನೆಮ್ಮದಿ ಮತ್ತು ಗೌರವದಿಂದ ಕೆಲಸ ಮಾಡುವ ವಾತಾವರಣವನ್ನು ನಿರ್ಮಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ವಿದಾನಪರಿಷತ್ತಿನಲ್ಲಿ ಬಹು ದೊಡ್ಡ ಧ್ವನಿಯಾಗಲು ನನ್ನನ್ನು ಗೆಲ್ಲಿಸುವಂತೆ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಯಾವುದೇ ಜಾತಿ, ಪಕ್ಷದ ಪ್ರತಿನಿಧಿಯಾಗದೆ ಇಡೀ ಶಿಕ್ಷಕ ಸಮುದಾಯದ ಆತ್ಮಗೌರವದ ಪ್ರತೀಕವಾಗಿ ಸೇವೆ ಮಾಡಲು ಸಿದ್ದವಾಗಿರುವ ನನಗೆ ಶಿಕ್ಷಕರೇ ಹೈಕಮಾಂಡ್. ಶಿಕ್ಷಕರ ಒಲವೇ ನನ್ನ ಬಲ. ಕ್ಷೇತ್ರದ 21 ಸಾವಿರ ಮತದಾರರ ಪೈಕಿ 10 ಸಾವಿರ ಶಿಕ್ಷಕ ಮತದಾರರ ನೇರ ಸಂಪರ್ಕವಿದ್ದು, ಈ ಬಾರಿ ಅಚ್ಚರಿಯ ಫಲಿತಾಂಶ ಹೊರ ಬೀಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್.ಎನ್.ಶಾಂತಕುಮಾರ್, ಡಾ.ಜಯರಾಂ, ಪ್ರಶಾಂತ್, ಚಂದ್ರಶೇಖರ್ ಇದ್ದರು.

Translate »