ಉಚಿತ ಗಿಡ ವಿತರಣೆ, ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಉಚಿತ ಗಿಡ ವಿತರಣೆ, ಆರೋಗ್ಯ ತಪಾಸಣಾ ಶಿಬಿರ

June 5, 2018

ಮೈಸೂರು: ವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ಹೆಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಜೂ. 5 ರಿಂದ 8 ರವರೆಗೆ ಉಚಿತವಾಗಿ ರೋಗ ನಿರೋಧಕ ಸಸ್ಯಗಳಾದ ಅಮೃತಬಳ್ಳಿ, ತುಳಸಿ, ಕರಿಬೇವು, ಇನ್ಸೂಲಿನ್ ಹಾಗೂ ಹೂವಿನ ಗಿಡಗಳ ವಿತರಣೆ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.5ರಂದು ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟದ ಹತ್ತಿರದ ಜೋಡಿ ರಸ್ತೆ, ಜೂ. 6ರಂದು ಚಿನ್ಮಯ ಉದ್ಯಾನವನ ಮತ್ತು ಜಗನ್ಮಯಿ ಉದ್ಯಾನವನದ ಮಧ್ಯಭಾಗದಲ್ಲಿ, ಜೂ.7ರಂದು ಸಮಸೋಪಾನ ಉದ್ಯಾನವನ (ಎ ಟು ಜೆಡ್ ಎದುರು, ಕುವೆಂಪುನಗರ) ಮತ್ತು ಜೂ.8ರಂದು ತಪೋನಂದನ ಉದ್ಯಾನವನ (ಅಕ್ಷಯ ಭಂಡಾರ್, ಲಾ ಕಾಲೇಜು ಹಿಂಭಾಗ) ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 6.30ರಿಂದ 9 ಗಂಟೆಯವರೆಗೆ ಗಿಡಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »