ಇಂದು, ನಾಳೆ ಕೆಲವೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು, ನಾಳೆ ಕೆಲವೆಡೆ ವಿದ್ಯುತ್ ನಿಲುಗಡೆ

June 5, 2018

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿ ರುವುದರಿಂದ ಜೂ.5ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮೇಗಳಾಪುರ, ಕೀಳನಪುರ, ಸಿದ್ದರಾಮನಹುಂಡಿ, ಎಂ.ಸಿ.ಹುಂಡಿ, ಇನಾಂ ಉತ್ತನಹಳ್ಳಿ, ಕುಪ್ಪೆಗಾಲ, ಮುದ್ದೇಗೌಡನ ಹುಂಡಿ, ರಂಗನಾಥಪುರ, ಶ್ರೀನಿವಾಸಪುರ, ದೇವೆಗೌಡನಹುಂಡಿ, ಯಡಕೊಳ, ಕಡವೆಕಟ್ಟೆ ಹುಂಡಿ, ಹೊಸಹಳ್ಳಿ, ಗುರುಕಾರಪುರ, ದುದ್ದಗೆರೆ, ಮಹದೇವಿ ಕಾಲೋನಿ, ಲಕ್ಷ್ಮೀಪುರ, ಮಾಧವಗೆರೆ, ವರಕೋಡು ಪೇಪರ್ ಮಿಲ್, ಕುಪ್ಯ, ಬೊಮ್ಮನಾಯಕನ ಹಳ್ಳಿ, ಕೆ.ಪಿ.ಹುಂಡಿ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು. ನಂಜನಗೂಡು ವಿಭಾಗ ವ್ಯಾಪ್ತಿಯ ಕುಪ್ಯ ಗ್ರಾಮ ಪಂಚಾಯಿತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಜೂ.6ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ದೂರ, ತಳೂರು, ಮುರುಡ ಗಳ್ಳಿ, ದೊಡ್ಡ ಕಾಟೂರು, ಚಿಕ್ಕ ಕಾಟೂರು ಹಾಗೂ ಸಿಂಧುವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಚೆಸ್ಕಾಂ ಪ್ರಕಟಣೆ ತಿಳಿಸಿದೆ.

Translate »