ಹೃದಯಾಘಾತದಿಂದ ಎಎಸ್‍ಐ ಸಾವು
ಹಾಸನ

ಹೃದಯಾಘಾತದಿಂದ ಎಎಸ್‍ಐ ಸಾವು

June 5, 2018

ಹೊಳೆನರಸೀಪುರ: ಕರ್ತವ್ಯ ನಿರತ ಎಎಸ್‍ಐ ಹೃದಯಾಘಾತ ದಿಂದ ಸಾವನ್ನ ಪ್ಪಿರುವ ಘಟನೆ ತಾಲೂಕಿನ ಹಳ್ಳಿಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಸಂಭವಿಸಿದೆ. ಆಲೂರು ತಾಲೂಕು ಮಗ್ಗೆ ಹೋಬಳಿ ವೈ.ಎನ್‍ಪುರ ನಿವಾಸಿ ಸುರೇಶ್ ಮೃತರು. ಎಂದಿನಂತೆ ಇಂದು ಠಾಣೆ ಯಲ್ಲಿ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ ಹೃದಯಾಘಾತ ಸಂಭವಿಸಿದೆ. ಕೂಡಲೇ ಸಿಬ್ಬಂದಿ ಠಾಣೆಯ ಎದುರೇ ಇದ್ದ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿ ದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು. ವೈದ್ಯರು ಪರೀಕ್ಷಿಸಿ ದೃಢಪಡಿಸಿದರು. ಮೃತರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರಿ, ಸೇವೆ ಸಲ್ಲಿಸುತ್ತಿದ್ದರು.

ವಿಷಯ ತಿಳಿದು ಅರಕಲ ಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಡಿವೈ ಎಸ್ಪಿ ರಾಮಲಿಂಗೇಗೌಡ ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ವಸಂತ್ ಕುಮಾರ್ ಧಾವಿಸಿ ಅಂತಿಮ ನಮನ ಸಲ್ಲಿಸಿದ ಬಳಿಕ ಮೃತರ ಸ್ವಗ್ರಾಮ ವೈ.ಎನ್.ಪುರಕ್ಕೆ ಪಾರ್ಥೀವ ಶರೀರವನ್ನು ತಲುಪಿಸಲು ವ್ಯವಸ್ಥೆ ಮಾಡಲಾಯಿತು.

Translate »