ಮಾಸ್ಕ್ ಧರಿಸದೆ ಹೊರ ಬಂದ ತಹಸೀಲ್ದಾರ್‍ಗೆ ದಂಡ!
ಮೈಸೂರು

ಮಾಸ್ಕ್ ಧರಿಸದೆ ಹೊರ ಬಂದ ತಹಸೀಲ್ದಾರ್‍ಗೆ ದಂಡ!

May 25, 2020

ಶಿವಮೊಗ್ಗ, ಮೇ 24- ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದ ಕಾರಣಕ್ಕೆ ಹೊಸನಗರ ತಹಸೀ ಲ್ದಾರ್ ಹಾಗೂ ಎಫ್‍ಡಿಎಗೆ ಮಹಾ ನಗರ ಪಾಲಿಕೆ ಅಧಿಕಾರಿಗಳು ಭಾನು ವಾರ ತಲಾ 200 ರೂ. ದಂಡ ವಿಧಿಸಿ ದ್ದಾರೆ. ತಹಸೀಲ್ದಾರ್ ರಾಜೀವ್ ಹಾಗೂ ಬೈಕ್ ಚಾಲನೆ ಮಾಡುತ್ತಿದ್ದ ಎಫ್‍ಡಿಎ ಪ್ರದಿಪ್ ಎಂಬುವವರು ದಂಡ ಕಟ್ಟಿದ್ದಾರೆ. ನಗರದ ಆಲ್ಕೊಳ ವೃತ್ತದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣ ಮೂರ್ತಿ ನೇತೃತ್ವದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿ ಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ತಹಸೀಲ್ದಾರ್ ರಾಜೀವ್ ನಿವಾಸ ಆಲ್ಕೊಳ ಸಮೀಪವೇ ಇದ್ದು ಪ್ರದಿಪ್ ಜತೆ ಮಾಸ್ಕ್ ಧರಿಸದೆ ಆಲ್ಕೊಳ ವೃತ್ತ ದಲ್ಲಿ ತೆರಳುತ್ತಿದ್ದಾಗ ತಡೆದ ಅಧಿಕಾರಿ ಗಳು ದಂಡ ಹಾಕಿದ್ದಾರೆ. ನಂತರ ರಾಜೀವ್ ಅವರು ತಹಸೀಲ್ದಾರ್ ಎಂಬುದು ಅಧಿಕಾರಿಗಳಿಗೆ ಅರಿವಾ ಗಿದೆ. ಇತ್ತೀಚೆಗಷ್ಟೇ ಹೊಸನಗರ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿ ಸಿದ್ದ ಅವರು ವೈಯಕ್ತಿಕ ಕೆಲಸದ ನಿಮಿತ್ತ ಪ್ರದಿಪ್ ಜತೆ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಇಬ್ಬರೂ ಮಾಸ್ಕ್ ಧರಿಸಿರಲಿಲ್ಲ ಎನ್ನಲಾಗಿದೆ.

Translate »