ಲಾಕ್‍ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
ಮೈಸೂರು ಗ್ರಾಮಾಂತರ

ಲಾಕ್‍ಡೌನ್ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

April 8, 2020

ನಂಜನಗೂಡು, ಏ.7(ರವಿ)-ಲಾಕ್ ಡೌನ್ ಬಗ್ಗೆ ನಗರದ ಜನತೆ ನಿರ್ಲಕ್ಷ್ಯ ವಹಿಸಿದ್ದು, ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಉಳಿದಿರುವ ಒಂದು ವಾರ ಲಾಕ್‍ಡೌನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿ, ಅಗತ್ಯಬಿದ್ದರೆ ಲಾಠಿ ಬಳಸಿ ನಿಯಮ ಮೀರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಖಡಕ್ ಸೂಚನೆÀ ನೀಡಿದರು.

ಕೊರೊನಾ ಸೋಂಕು ನಿಯಂತ್ರಣ ಹಾಗೂ ಲಾಕ್‍ಡೌನ್ ಕುರಿತು ಕೈಗೊಂಡಿ ರುವ ಕ್ರಮಗಳ ಕುರಿತ ಪರಿಶೀಲನೆ ಹಿನ್ನೆಲೆ ಯಲ್ಲಿ ಮಂಗಳವಾರ ಸಂಜೆ ನಗರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದರು. ನಗರದ ರಾಷ್ಟ್ರಪತಿ ರಸ್ತೆಯಲ್ಲಿ ಜನ ಸಂಚಾರ ಗಮನಿಸಿದ ಜಿಲ್ಲಾಧಿಕಾರಿ ಗಳು, ಕಟ್ಟುನಿಟ್ಟಾಗಿ ಲಾಕ್‍ಡೌನ್ ಜಾರಿಗೆ ತನ್ನಿ. ಅಗತ್ಯ ಬಿದ್ದರೆ ಲಾಠಿ ಬೀಸಿ. ಇಲ್ಲದಿದ್ದರೆ ಜನ ಬಗ್ಗಲಾರರು. ಈ ಕ್ಷಣದಿಂದಲೇ ಕಠಿಣ ಕ್ರಮಕ್ಕೆ ಮುಂದಾಗಿ ಎಂದು ಪಟ್ಟಣ ಠಾಣಾಧಿಕಾರಿ ರವಿಕುಮಾರ್ ಹಾಗೂ ಸಂಚಾರಿ ಠಾಣೆ ಎಸ್‍ಐ ಜಯಲಕ್ಷ್ಮಿ ಅವರಿಗೆ ಸೂಚಿಸಿದರು. ಬಳಿಕ ಸೋಂಕಿತರು ಕ್ವಾರಂಟೈನ್‍ನಲ್ಲಿರುವ ಬಡಾವಣೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮುಂಜಾ ಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು. ನಂತರ ಭಿಕ್ಷುಕರು ಹಾಗೂ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿರುವ ನಗರದ ಸಾಹುಕಾರ ಲಿಂಗಣ್ಣನವರ ಛತ್ರಕ್ಕೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ತಾಲೂಕಿನ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತಕ್ಕೆ ಹಲವು ಸೂಚನೆ ನೀಡಿದರು.

ಹಾಪ್‍ಕಾಮ್ಸ್ ಸಿಬ್ಬಂದಿ ನಂಜನಗೂಡಿ ನಲ್ಲೂ ವ್ಯಾಪಾರಕ್ಕಿಳಿಯುಂತೆ ಅಧಿಕಾರಿ ಗಳಿಗೆ ತಾವು ಆದೇಶಿಸಿದ್ದು, ಬುಧÀವಾರ ದಿಂದ ಅವರೇ ಇಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಹಣಕಾಸಿನ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸರ್ಕಾರ ದಿಂದ ನೀಡಿದ ಹಣ ಖರ್ಚಾಗಿದ್ದರೆ ತಕ್ಷಣ ತಿಳಿಸಿ. ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಿ ಎಂದು ತಾಲೂಕು ತಹಸೀ ಲ್ದಾರ್‍ಗೆ ಸೂಚಿಸಿದರು.

ಸಂಕಷ್ಟದಲ್ಲೂ ಹಣ ಮಾಡುವ ನ್ಯಾಯಬೆಲೆ ಅಂಗಡಿಗಳ ವಿತರಕರ ವಿರುದ್ಧ ಕೇಸು ದಾಖಲಿಸುವಂತೆ ಆಹಾರ ನಿರೀಕ್ಷಕ ರಿಗೆ ನಿರ್ದೇಶನ ನೀಡಿದರು. ಈ ಸಂದರ್ಭ ದಲ್ಲಿ ತಹಸೀಲ್ದಾರ್ ಮಹೇಶ್‍ಕುಮಾರ್, ನಗರಸಭಾ ಆಯುಕ್ತ ಕರಿಸವಯ್ಯ, ತೋಟ ಗಾರಿಕಾ ಅಧಿಕಾರಿ ಗುರುಸ್ವಾಮಿ, ಕಂದಾಯ ನಿರೀಕಕ್ಷ ಪ್ರಕಾಶ್, ಆಹಾರ ನಿರೀಕ್ಷ ಅರವಿಂದ್ ಸೇರಿದಂತೆ ಇತರರಿದ್ದರು.

Translate »