ಮೈಸೂರು, ಮೇ2 (ಆರ್‍ಕೆಬಿ)- ಮೇಯರ್, ಉಪ ಮೇಯರ್, ಪಾಲಿಕೆಯ ವಿಪಕ್ಷ ನಾಯಕರು ಮತ್ತು ಸದಸ್ಯರು ಎಲ್ಲ ರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಾಲಿಕೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸು ವಂತೆ ಆಯುಕ್ತರು, ಪಾಲಿಕೆಯ ಇತರೆ ಅಧಿಕಾರಿ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೂಚನೆ ನೀಡಿದ್ದಾರೆ.
ಸರ್ಕಾರದ ಯಾವುದೇ ಕಾರ್ಯಕ್ರಮ ಗಳ ಬಗ್ಗೆ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡುವಂತೆಯೇ ಮೇಯರ್, ಉಪ ಮೇಯರ್‍ಗೂ ಮಾಹಿತಿ ನೀಡಿ ಆಹ್ವಾನಿಸ ಬೇಕು ಎಂದೂ ಆಯುಕ್ತರಿಗೆ ಆದೇಶಿಸಿದ್ದಾರೆ.
ಇಂದಿಲ್ಲ ಸುದ್ದಿಗಾರರ ಜತೆ ಮಾತನಾ ಡಿದ ಸಚಿವ ಸೋಮಶೇಖರ್ ಅವರು, ಸರ್ಕಾರದ ಯಾವುದೇ ಕಾರ್ಯಕ್ರಮಗಳ ಬಗ್ಗೆ ತಮಗೆ ಮಾಹಿತಿ ನೀಡುತ್ತಿಲ್ಲ ಎಂಬ ಕಾರಣಕ್ಕೆ ಮೇಯರ್, ಉಪ ಮೇಯರ್ ಹಾಗೂ ಆಯುಕ್ತರ ಮಧ್ಯೆ ಮನಸ್ತಾಪ ವಾಗಿದೆ. ಈ ಬಗ್ಗೆ ಮೇಯರ್, ಉಪ ಮೇಯರ್ ಅವರನ್ನು ಒಳಗೊಂಡ ಪಾಲಿಕೆ ಸದಸ್ಯರ ನಿಯೋಗ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಮೇಯರ್, ಉಪ ಮೇಯರ್, ಸದಸ್ಯರು ಮತ್ತು ಆಯುಕ್ತರು, ಅಧಿಕಾರಿ ಗಳನ್ನು ಒಳಗೊಂಡ ಸಭೆ ನಡೆಸಲಾಗಿದ್ದು, ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.
ತಮ್ಮ ಭಾಗದಲ್ಲಿ ದಿನಸಿ ಕಿಟ್, ಔಷಧ ವಿತರಣೆ ಮೊದಲಾದ ಸಮಸ್ಯೆಗಳಿದ್ದರೆ ಸರಿ ಪಡಿಸುವಂತೆ 65 ವಾರ್ಡ್‍ಗಳ ಸದಸ್ಯರ ಗಮನಕ್ಕೆ ತಂದಿದ್ದೇನೆ. ಆಹಾರ ಸಚಿವರ ಗಮ ನಕ್ಕೂ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮೇ 7ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರ ಜೊತೆ ಸಭೆ ನಡೆಸಿ ಪ್ರತಿ ವಾರ್ಡ್‍ಗೆ ಕಾರ್ಪೊರೇಟರ್‍ಗಳ ನಿಧಿ ಯಿಂದ ಅನುದಾನ ನೀಡುವ ಬಗ್ಗೆ ಅಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೋಮಶೇಖರ್ ತಿಳಿಸಿದರು.
ಎಪಿಎಲ್, ಬಿಪಿಎಲ್ ಕಾರ್ಡ್‍ದಾರ ರಿಗೆ 2 ತಿಂಗಳಿಗಾಗುವಷ್ಟು ಆಹಾರ ಪದಾರ್ಥ ಕೊಡಬೇಕು. ಬಿಪಿಎಲ್ ಕಾರ್ಡ್‍ಗೆ ಅರ್ಜಿ ಹಾಕಿದವರಿಗೂ ಒದಗಿಸಬೇಕು. ಪಡಿತರ ವಿಚಾರದಲ್ಲಿ ಸಮಸ್ಯೆ ಇದ್ದರೆ ಗಮನಕ್ಕೆ ತಂದರೆ ಪರಿಹರಿಸುತ್ತೇವೆ ಎಂದು ಸಚಿವರು ಭರ ವಸೆ ನೀಡಿದರು. ಸಾಮಾಜಿಕ ಅಂತರ ಕಾಯ್ದುಕೊಂಡೇ ಮೈಸೂರು ಪಾಲಿಕೆ ಬಜೆಟ್ ಮಂಡಿಸಬೇಕು. ಬೆಂಗಳೂರಿನಲ್ಲಿ ಬಿಬಿಎಂಪಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಿದ ಮಾದರಿಯನ್ನೂ ಅನುಸರಿಸಬಹುದು ಎಂದರು.