‘ಭ್ರಷ್ಟಾಚಾರದಿಂದ ಬೋಧನಾ ಕ್ಷೇತ್ರ ದೂರ’
ಮೈಸೂರು

‘ಭ್ರಷ್ಟಾಚಾರದಿಂದ ಬೋಧನಾ ಕ್ಷೇತ್ರ ದೂರ’

April 8, 2021

ಮೈಸೂರು,ಏ.7(ಎಸ್‍ಪಿಎನ್)- ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ. ಆದರೆ, ಬೋಧನಾ ಕ್ಷೇತ್ರ ಭ್ರಷ್ಟಾಚಾರ ವ್ಯಾಪ್ತಿ ಯಿಂದ ದೂರವಿದೆ ಎಂದು ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ ಅಭಿಪ್ರಾಯಪಟ್ಟರು.
ಮೈಸೂರಿನ ಜೆಎಲ್‍ಬಿ ರಸ್ತೆಯ ಜ್ಞಾನ ಬುತ್ತಿ ಸಂಸ್ಥೆಯಲ್ಲಿ ನಡೆದ ಯುಜಿಸಿ-ಎನ್‍ಇಟಿ ಮತ್ತು ಕೆ.ಸೆಟ್ ಪರೀಕ್ಷೆಯ ತರ ಬೇತಿ ಸಮಾರೋಪದಲ್ಲಿ ಅವರು ಮಾತ ನಾಡಿ, ಬೋಧನಾ ಕ್ಷೇತ್ರ ಇಂದಿಗೂ ಸಮಾಜ ಮುಖಿಯಾಗಿಯೇ ಉಳಿದಿದೆ ಎಂದರು.
ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಮಾತನಾಡಿ, ನಾವು ಎಷ್ಟು ಸಮಯ ಓದುತ್ತೇವೆ ಎನ್ನುವುದು ಮುಖ್ಯ ವಲ್ಲ, ಬದಲಾಗಿ ಹೇಗೆ ಓದುತ್ತೇವೆ ಎಂಬುದು ಮುಖ್ಯ. ಬೋಧನಾ ವೃತ್ತಿಯನ್ನು ಹಲವು ವಿಷಯ ತಜ್ಞರು ‘ನೋಬಲ್ ಜಾಬ್’ ಎಂದು ಕರೆಯುತ್ತಾರೆ ಎಂದರು.
ಈ ವೇಳೆ ಅವರು ಸಂಪನ್ಮೂಲ ಪುಸ್ತಕ `ಜ್ಞಾನಭಂಡಾರ’ವನ್ನು ಬಿಡುಗಡೆಗೊಳಿಸಿ ದರು. ಶಿಬಿರಾರ್ಥಿಗಳು ಅನಿಸಿಕೆ ಹಂಚಿ ಕೊಂಡರು. ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಎನ್.ಎನ್.ಪ್ರಹ್ಲಾದ್, ಪ್ರೊ. ಎಚ್. ಎಸ್.ಮಲ್ಲಿಕಾರ್ಜುನಶಾಸ್ತ್ರಿ, ಪ್ರೊ.ವಿ. ಜಯಪ್ರಕಾಶ್, ಪ್ರೊ.ಕೃ.ಪ.ಗಣೇಶ್, ಈ. ಶಿವಪ್ರಸಾದ್, ಕೆ.ಆರ್.ವಿಭಾವಸು, ರೋಹನ್ ರವಿಕುಮಾರ್, ಎಸ್.ಬಿ.ಎಂ. ಪ್ರಸನ್ನ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಪ್ರೊ.ಕಿರಣ್ ಕೌಶಿಕ್ ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *