ನಂ.ಗೂಡು ಗ್ರಾಮಾಂತರ ಪೊಲೀಸರಿಂದ ಕುಖ್ಯಾತ ಖದೀಮರ ಬಂಧನ
ಮೈಸೂರು

ನಂ.ಗೂಡು ಗ್ರಾಮಾಂತರ ಪೊಲೀಸರಿಂದ ಕುಖ್ಯಾತ ಖದೀಮರ ಬಂಧನ

January 20, 2022

ಮೈಸೂರು, ಜ. 19(ಆರ್‍ಕೆ)- ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು 7.85 ಲಕ್ಷ ರೂ. ಮೌಲ್ಯದ 13 ಹಸುಗಳು ಹಾಗೂ 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕು ಕೆ. ಬೆಳ ತ್ತೂರು ಗ್ರಾಮದ ಕುಮಾರನ ಮಗ ಬಿ.ಕೆ.ವಿವೇಕ್ ಅಲಿಯಾಸ್ ಪಮ್ಮಿ(33) ಹಾಗೂ ಮೈಸೂರಿನ ರಾಘವೇಂದ್ರ ನಗರ 1ನೇ ಕ್ರಾಸ್ ನಿವಾಸಿ ವೆಂಕಟೇಶ್ ಮಗ ರಾಜೇಶ್(31) ಬಂಧಿತ ಹಸು ಕಳ್ಳರು. ಈ ಕುರಿತಂತೆ ಮೈಸೂರು ಎಸ್ಪಿ ಆರ್. ಚೇತನ್ ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಪ್ರಕರಣದ ಮಾಹಿತಿ ನೀಡಿದರು. ಜನವರಿ 14ರಂದು ಬೆಳಗ್ಗೆ 10 ಗಂಟೆಯ ವೇಳೆಗೆ ನಂಜನಗೂಡು ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಕೆ.ಎ.ಚಂದ್ರು, ಸಿಬ್ಬಂದಿಗಳಾದ ಕೃಷ್ಣ, ಹರೀಶ್ ಹಾಗೂ ಮಹೇಶ್ ಅವರು ಕಳುವಾಗಿರುವ ಹಸುಗಳ ಪತ್ತೆ ಸಂಬಂಧ ಗಸ್ತು ಕಾರ್ಯಾಚರಣೆಯಲ್ಲಿ ದ್ದಾಗ ಹೆಗ್ಗಡಹಳ್ಳಿ ಸ್ಕೂಲ್ ಮುಂಭಾಗ ಇಬ್ಬರು ಯುವಕರು ಪೊಲೀಸರನ್ನು ನೋಡಿ ಮೋಟಾರ್ ಬೈಕ್‍ನಿಂದ ಇಳಿದು ರಿಪೇರಿ ಮಾಡುವರಂತೆ ನಟಿಸುತ್ತಿದ್ದರಿಂದ ಅನು ಮಾನದ ಮೇಲೆ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಹಸುಗಳನ್ನು ಕಳ್ಳತನ ಮಾಡುತ್ತಿದ್ದುದು ತಿಳಿದು ಬಂತು ಎಂದರು.

ಜನವರಿ 7ರಂದು ಮುಂಜಾನೆ ಸುಮಾರು 2 ಗಂಟೆಯ ವೇಳೆ ಹದಿನಾರು ಗ್ರಾಮದಲ್ಲಿ 4 ಹಸುಗಳು ಮತ್ತು 1 ಕರು, ಬಸವನಪುರ, ಹೆಬ್ಯ, ಅಡಕನಹಳ್ಳಿ ಹುಂಡಿ ಗ್ರಾಮಗಳು ಹಾಗೂ ಮೈಸೂರು ತಾಲೂಕು ಕೂಡನಹಳ್ಳಿ, ಬಸಹಳ್ಳಿ ಹುಂಡಿ ಗ್ರಾಮ ಗಳಲ್ಲಿಯೂ ಸಹ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಕಳ್ಳತನ ಮಾಡಿ ಬನ್ನೂರು ಹಾಗೂ ಇತರೆಡೆ ಸಂತೆಗಳಲ್ಲಿ ಮಾರಾಟ ಮಾಡಿದ್ದರು ಎಂಬ ವಿಷಯ ತಿಳಿಯಿತು. ನಂತರ ಆರೋಪಿಗಳು ನೀಡಿದ ಸುಳಿವಿನ ಆಧಾರದ ಮೇಲೆ 10 ಹೆಚ್‍ಎಫ್ ತಳಿಯ ಹಸುಗಳು, 2 ನಾಡ ಹಸುಗಳು, 1 ಕರು, 1 ಮೋಟಾರ್ ಬೈಕ್ ಹಾಗೂ 1 ಟಾಟಾ ಏಸ್ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಬಂಧಿತ ಆರೋಪಿಗಳು ಹಗಲಲ್ಲಿ ಬೈಕಿನಲ್ಲಿ ಸುತ್ತಾಡಿ, ಹಸು ಕಟ್ಟಿ ಹಾಕಿರುವ ಜಾಗಗಳನ್ನು ನೋಡಿಕೊಂಡು ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿ ಕೊಟ್ಟಿಗೆ ಗಳಿಂದ ಹಸುಗಳನ್ನು ಕಳವು ಮಾಡಿ ಟಾಟಾ ಏಸ್ ವಾಹನದಲ್ಲಿ ತುಂಬಿ ಕೊಂಡು ಅವು ನಮ್ಮ ಹಸುಗಳೆಂದು ಹೇಳಿ ರೈತರಿಗೆ ಮಾರಾಟ ಮಾಡುತ್ತಿದ್ದರು. ಕಳೆದ ಹಲವು ತಿಂಗಳಿಂದ ನಂಜನ ಗೂಡು, ಹುಣಸೂರು ನಗರದಲ್ಲಿ ಹಸು ಗಳ ಕಳ್ಳತನ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪತ್ತೆಗಾಗಿ ಕ್ರಮ ವಹಿಸ ಲಾಗಿತ್ತು. ಈ ಪ್ರಕರಣದಿಂದಾಗಿ ಒಟ್ಟು ಆರು ಕಳ್ಳತನ ಪ್ರಕರಣಗಳು ಪತ್ತೆ ಯಾಗಿದ್ದು, ಒಟ್ಟು 7.85 ಲಕ್ಷ ರೂ. ಮೌಲ್ಯದ ಹಸುಗಳನ್ನು ಆರೋಪಿ ಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಡಿಷನಲ್ ಎಸ್ಪಿ ಆರ್. ಶಿವಕುಮಾರ್, ಡಿವೈಎಸ್ಪಿ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ನಂಜನ ಗೂಡು ಗ್ರಾಮಾಂತರ ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಸಿ.ಶಿವನಂಜ ಶೆಟ್ಟಿ, ಸಬ್ ಇನ್‍ಸ್ಪೆಕ್ಟರ್ ಕೆ.ಎ.ಚಂದ್ರು, ಸಿಬ್ಬಂದಿಗಳಾದ ಹೆಚ್.ಸಿ.ಕೃಷ್ಣ, ಹರೀಶ್, ಮಹೇಶ್, ಚೇತನ್ ಹಾಗೂ ವಾಹನ ಚಾಲಕ ಕೃಷ್ಣ ಪಾಲ್ಗೊಂಡಿದ್ದರು. ಪತ್ತೆ ಕಾರ್ಯವನ್ನು ಎಸ್ಪಿ ಆರ್.ಚೇತನ್ ಶ್ಲಾಘಿಸಿದ್ದಾರೆ.

Translate »