ಈಜಲು ಹೋಗಿದ್ದ ಬಾಲಕರಿಬ್ಬರು ನೀರುಪಾಲು
ಮೈಸೂರು ಗ್ರಾಮಾಂತರ

ಈಜಲು ಹೋಗಿದ್ದ ಬಾಲಕರಿಬ್ಬರು ನೀರುಪಾಲು

April 20, 2020

ಹೆಚ್.ಡಿ.ಕೋಟೆ, ಏ.19-ಕಬಿನಿ ಹಿನ್ನೀರಿ ನಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲಾಗಿರುವ ಘಟನೆ ತಾಲೂಕಿನ ಮಳಲಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ನಿವಾಸಿ ವೆಂಕಟೇಶ್ ಪುತ್ರ ಚಂದು(17), ನಾಗಯ್ಯ ಪುತ್ರ ಸಿದ್ದರಾಜು (15) ಮೃತಪಟ್ಟ ಬಾಲಕರು. ಇವರು ಶನಿ ವಾರ ಮಧ್ಯಾಹ್ನ ಸಹಪಾಠಿಗಳೊಂದಿಗೆ ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಚಂದು ಹಾಗೂ ಸಿದ್ದರಾಜು ಸುಳಿಯಲ್ಲಿ ಸಿಲುಕಿ ಅಸುನೀಗಿದ್ದಾರೆ. ಇದ ರಿಂದ ಗಾಬರಿಗೊಂಡ ಮತ್ತಿಬ್ಬರು ಬಾಲಕರು ಪೆÇೀಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೆÇೀಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದು ಭಾನುವಾರ ಬೆಳಿಗ್ಗೆ ಸ್ಥಳಕ್ಕಾಗಮಿಸಿದ ಬೀಚನ ಹಳ್ಳಿ ಠಾಣೆ ಎಸ್‍ಐ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ ದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಮೀನು ಗಾರರ ಸಹಾಯದಿಂದ ಕಾರ್ಯಾಚರಣೆ ನಡೆಸಿ ದೇಹಗಳನ್ನು ಮೇಲಿತ್ತಿ, ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆ ನಂತರ ದೇಹಗಳನ್ನು ಪೆÇೀಷಕರಿಗೆ ಹಸ್ತಾಂತರಿಸಲಾಯಿತು. ಮಾಜಿ ಸಂಸದ ಧ್ರುವನಾರಾಯಣ್, ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಕುಟುಂಬ ಗಳಿಗೆ ಸಾಂತ್ವನ ಹೇಳಿದರು. ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »