ಮೈಸೂರಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ
ಮೈಸೂರು

ಮೈಸೂರಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ

May 18, 2022

ತುಂಬಿ ಹರಿದ ಬೋಗಾದಿ ಕೆರೆ; ಸಿಎಫ್‌ಟಿಆರ್‌ಐ, ಆನಂದನಗರದ ಆಶ್ರಯ ಬಡಾವಣೆಗೆ ನುಗ್ಗಿದ ನೀರು ಮೈಸೂರಲ್ಲಿ ಎಲ್ಲಿ ನೋಡಿದರೂ ನೀರೇ ನೀರು; ರಸ್ತೆಗಳೆಲ್ಲಾ ಹೊಂಡಮಯ
ಮೈಸೂರು, ಮೇ ೧೭ (ಆರ್‌ಕೆ)- ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬೋಗಾದಿ ಕೆರೆ ತುಂಬಿ ಹರಿದ ಪರಿಣಾಮ ಆನಂದನಗರದ ಆಶ್ರಯ ಬಡಾವಣೆಗೆ ನೀರು ನುಗ್ಗಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ.

ಕಳೆದ ೩ ದಿನಗಳಿಂದ ಮಳೆ ಎಡೆಬಿಡದೇ ಸುರಿಯುತ್ತಿ ರುವುದರಿಂದ ವಿಜಯನಗರ ೩, ೪ನೇ ಹಂತ, ಹಿನಕಲ್ ಹಾಗೂ ಸುತ್ತಲಿನ ಪ್ರದೇಶಗಳಿಂದ ಭಾರೀ ನೀರು ಹರಿದು ಬೋಗಾದಿ ಕೆರೆ ತುಂಬಿ ಹೆಚ್ಚುವರಿ ನೀರು ಸಾಗರೋಪಾದಿಯಲ್ಲಿ ಹರಿದಿರುವುದರಿಂದ ಬೋಗಾದಿಯ ಅಮೃತಾನಂದಮಯಿ ಮಠದ ಹಿಂಭಾಗ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಪಕ್ಕ ದಲ್ಲಿದ್ದ ಸೇತುವೆ ಕೊಚ್ಚಿಹೋಗಿದೆ. ಇದರಿಂದ ರಸ್ತೆ ಸಂಪರ್ಕವೇ ಕಡಿತವಾಗಿದೆ. ಕೆರೆಯಿಂದ ಹೆಚ್ಚುವರಿ ನೀರು ಸಾಗರೋಪಾ ದಿಯಲ್ಲಿ ಹರಿದು, ಆ ನೀರಿನ ಒತ್ತಡಕ್ಕೆ ಅಲ್ಲಿನ ಪೈಪ್‌ಲೈನ್ ಕಲ್ವರ್ಟ್ ಸಹ ಕೊಚ್ಚಿ ಹೋಗಿದೆ. ಇಂದು ಮುಂಜಾನೆ ವೇಳೆಗೆ ಅಲ್ಲಿನ ಸಿಎಫ್‌ಟಿಆರ್‌ಐ, ಆನಂದನಗರದ ಆಶ್ರಯ ಬಡಾ ವಣೆ ಹಾಗೂ ಶಾರದಾದೇವಿನಗರದ
ಕೆಲ ತಗ್ಗು ಪ್ರದೇಶ ಜಲಾವೃತಗೊಂಡು, ನಿವಾಸಿಗಳು ಪರದಾಡುವಂತಾಗಿದೆ. ೨೫ ವರ್ಷಗಳ ನಂತರ ಕಳೆದ ೬ ತಿಂಗಳ ಹಿಂದೆ ಬೋಗಾದಿ ಕೆರೆ ತುಂಬಿ ಕೋಡಿ ಬಿದ್ದಿದೆ. ಈ ನೀರು ಬೋಗಾದಿ ರಸ್ತೆ, ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಸಾಗರೋಪಾದಿಯಲ್ಲಿ ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದೀಗ ಈ ಭಾರೀ ಮಳೆಗೆ ಪ್ರಸಕ್ತ ವರ್ಷವೇ ಎರಡನೇ ಬಾರಿ ಕೆರೆ ತುಂಬಿ ಕೊಡಿ ಬಿದ್ದು ಭಾರೀ ಅವಾಂತರ ವಾಗಿದೆ.

ಕೆರೆ ಭರ್ತಿಯಾದಾಗ ಹೆಚ್ಚುವರಿ ನೀರು ಲಿಂಗಾAಬುದಿ ಕೆರೆಗೆ ಹರಿದು ಹೋಗಲು ಇರುವ ೬ ಅಡಿ ಅಗಲದ ರಾಜ ಕಾಲುವೆ ಅಲ್ಲಲ್ಲಿ ಒತ್ತುವರಿಯಾಗಿರುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಸೇತುವೆ ಕೊಚ್ಚಿಹೋಗಿದ್ದು, ಸಂಪರ್ಕ ಕಡಿತವಾಗಿದೆ. ರಾಜ ಕಾಲುವೆ (ಸ್ಟಾರ್ಮ್ ವಾಟರ್ ಡ್ರೇನ್)ಯಲ್ಲಿ ಗಿಡ ಬೆಳೆದು ಹೂಳು ತುಂಬಿರುವುದು ನೀರು ಮುಂದೆ ಹರಿದು ಹೋಗಲಾರದೆ ಈ ಅವಾಂ ತರ ಸೃಷ್ಟಿಯಾಗಿದ್ದಲ್ಲದೇ ಕೆಲವರು ಒತ್ತು ವರಿ ಮಾಡಿ ನಿರ್ಮಾಣ ಮಾಡಿರುವುದು ಹಾನಿಗೆ ಪ್ರಮುಖ ಕಾರಣ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.

The bridge that washed away heavy rain in Mysore

ಕೆರೆಯಿಂದ ಹೆಚ್ಚುವರಿ ನೀರು ರಭಸ ದಿಂದ ಹರಿಯುತ್ತಿರುವುದನ್ನು ನೋಡಲು ಸುತ್ತಲಿನ ಸಾವಿರಾರು ಮಂದಿ ಜಮಾ ಯಿಸಿದ್ದರು. ಸ್ಥಳಕ್ಕಾಗಮಿಸಿದ ಪಾಲಿಕೆ ವಲ ಯಾಧಿಕಾರಿ ಸತ್ಯಮೂರ್ತಿ ಹಾಗೂ ಅಭಯ ತಂಡದ ಸಿಬ್ಬಂದಿ, ಬೋಗಾದಿ ಕೆರೆಯಿಂದ ಹೊರಬರುತ್ತಿದ್ದ ಹೆಚ್ಚುವರಿ ನೀರಿನ ರಭಸ ನಿಯಂತ್ರಿಸಿ, ರಾಜ ಕಾಲು ವೆಯ ಕಿರಿದಾದ ಸ್ಥಳವನ್ನು ತೆರವು ಗೊಳಿಸಿ ನೀರು ಸರಾಗವಾಗಿ ಮುಂದೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.
ಸಂಪರ್ಕ ಕಡಿತಗೊಂಡಿರುವ ರಸ್ತೆಗೆ ಪರ್ಯಾಯವಾಗಿ ಪಕ್ಕದಲ್ಲಿ ಮತ್ತೊಂದು ರಸ್ತೆ ಇರುವುದರಿಂದ ಸಂಚಾರಕ್ಕೆ ಅಡ್ಡಿಯಾಗ ಲಿಲ್ಲ. ಆದರೆ, ತಗ್ಗು ಪ್ರದೇಶದಲ್ಲಿರುವ ಸಿಎಫ್‌ಟಿಆರ್‌ಐ, ಆನಂದನಗರ, ಆಶ್ರಯ ಬಡಾವಣೆಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಯಿತು. ನಗರಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತರೆಡ್ಡಿ, ಸೂಪರಿಂಟೆAಡಿAಗ್ ಇಂಜಿನಿಯರ್ ಮಹೇಶ್, ಎಕ್ಸಿಕ್ಯುಟಿವ್ ಇಂಜಿನಿಯರ್ ಮಧುಸೂದನ ಸ್ಥಳಕ್ಕೆ ತೆರಳಿ ಪರಿಶೀಲಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಜೆಸಿಬಿಗಳ ಮೂಲಕ ರಾಜಕಾಲುವೆಯಲ್ಲಿ ಅಡ್ಡಿಯಾಗಿದ್ದ ಅಡೆತಡೆಗಳÀನ್ನು ತೆರವುಗೊಳಿಸಿದರು.

ಇದರಿಂದಾಗಿ ಮಧ್ಯಾಹ್ನದ ವೇಳೆಗೆ ಬಡಾವಣೆಗಳಿಗೆ ನುಗ್ಗುತ್ತಿದ್ದ ನೀರು ಕಡಿಮೆ ಯಾಯಿತು. ಆದರೆ ಅದಾಗಲೇ ಮಳೆ ನೀರನ್ನು ಹೊರ ಹಾಕಲು ಬಡಾವಣೆಗಳ ನಿವಾಸಿಗಳು ಹರಸಾಹಸ ಪಡುತ್ತಿದ್ದರು.

ಅಲ್ಲಲ್ಲಿ ಅವಾಂತರ: ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂ ದಾಗಿ ತಗ್ಗು ಪ್ರದೇಶಗಳು ಜಲಾವೃತ ಗೊಂಡು ಅಲ್ಲಲ್ಲಿ ಮರ, ವಿದ್ಯುತ್‌ಕಂಬ, ಟ್ರಾನ್ಸ್ಫಾರ್ಮರ್‌ಗಳು ಉರುಳಿಬಿದ್ದು, ಭಾರೀ ಅವಾಂತರವೇ ಸೃಷ್ಟಿಯಾಗಿತ್ತು. ಕುವೆಂಪುನಗರದ ಆರ್‌ಎಂಪಿ ಕ್ವಾರ್ಟರ್ಸ್ ಬಳಿ ಕೆಹೆಚ್‌ಬಿ ಕಾಲೋನಿಯಲ್ಲಿ ಟ್ರಾನ್ಸ್ ಫಾರ್ಮರ್‌ವೊಂದು ನೆಲಕ್ಕುರುಳಿದೆ.

ವಿದ್ಯಾರಣ್ಯಪುರಂ ೮ನೇ ಅಡ್ಡ ರಸ್ತೆಯಲ್ಲಿ ಮನೆ ಮುಂದೆ ನಿಂತಿದ್ದ ಕಾರಿನ ಮೇಲೆ ಮರದ ರೆಂಬೆ ಮುರಿದು ಬಿದ್ದು ಭಾರೀ ನಷ್ಟವಾಗಿದ್ದರೆ, ನಜರ್‌ಬಾದಿನ ಎಸ್ಪಿ ಕಚೇರಿ ಹಿಂಭಾಗ ಮರವೊಂದು ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದೆ. ಡಾ.ರಾಜ್‌ಕುಮಾರ್ ರಸ್ತೆಯ ತ್ರಿವೇಣ ಸರ್ಕಲ್ ಬಳಿಯೂ ಭಾರೀ ಗಾತ್ರದ ಮರದ ರೆಂಬೆ ಉರುಳಿ ಬಿದ್ದಿದೆ. ಅದೇ ರೀತಿ ನಾಯ್ಡುನಗರ, ಬನ್ನೂರು ರಸ್ತೆಯ ಹಾಲು ಒಕ್ಕೂಟದ ಹೊಸ ಕಟ್ಟಡದ ಸಮೀಪ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿ ಯಿಡೀ ಪರದಾಡುವಂತಾಯಿತು. ಭಾರತ್ ನಗರದ ಗುಡಿಸಲು ನಿವಾಸಿಗಳು ಕಾಮನ ಕೆರೆಹುಂಡಿ ಬಳಿಯ ಅಮೃತ ಬಡಾವಣೆ ನೆಲಮಹಡಿ ಮನೆಗಳಲ್ಲಿ ವಾಸಿಸುವವರು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

Translate »