ಪೋಷಣ್ ಅಭಿಯಾನದ ಸಮಾರೋಪ
ಮೈಸೂರು

ಪೋಷಣ್ ಅಭಿಯಾನದ ಸಮಾರೋಪ

October 5, 2021

ಮೈಸೂರು,ಅ.4-ದೇವರಾಜ ಮೊಹಲ್ಲಾದ ದೇವರಾಜ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಪೆÇೀಷಣ್ ಅಭಿಯಾನದ ಸಮಾ ರೋಪ ಸಮಾರಂಭವನ್ನು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥಗಳಲ್ಲೇ ಸಾಕಷ್ಟು ಪ್ರಮಾಣದಲ್ಲಿ ಪೆÇ್ರೀಟಿನ್, ವಿಟಮಿನ್ ಇತರ ಪೆÇೀಷಕಾಂಶಗಳು ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಸೇವಿಸಬೇಕು ಎಂದು ಮಕ್ಕಳಿಗೆ ಸಲಹೆ ಮಾಡಿದರು.

ಸ್ಥಳೀಯವಾಗಿ ಸಿಗುವ ದೊಡ್ಡಪತ್ರೆ, ಕುಂಬಳಕಾಯಿ, ಪಪ್ಪಾಯ, ಹಾಗಲಕಾಯಿ, ಸೀತಾಫಲ, ಇನ್ನಿತರ ಹಣ್ಣು, ತರಕಾರಿಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ದೇಹ ಸದೃಢವಾಗಿದ್ದರೆ ಮನಸ್ಸು ಅಷ್ಟೇ ಸದೃಢವಾಗಿರುತ್ತದೆ. ಆರೋಗ್ಯವಂತ ಮಕ್ಕಳಿಂದ ಉತ್ತಮ ಸಮಾಜ ಕಟ್ಟಬಹುದು ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವೇಗೌಡ, ಶಾಲೆಯ ಮುಖ್ಯೋಪಾಧ್ಯಾಯ ಮಹಾದೇವ್, ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ರಾಜಗೋಪಾಲ್, ವಿಘ್ನೇಶ್ವರ ಭಟ್, ಚರಣ್, ಸನತ್, ಗೌರಿ, ವಿನೂತ್, ಶಾಲಾ-ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Translate »