ಸಂಪುಟ ಉಪ ಸಮಿತಿ ಸಭೆ ನಂತರ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ
ನೈಸ್ ಸಂಸ್ಥೆಯಿAದ ಯೋಜನೆ ಜಾರಿ ವಿಷಯದಲ್ಲಿ ವ್ಯಾಪಕ ಕಾನೂನು ಉಲ್ಲಂಘನೆ
ಬೆAಗಳೂರು, ಏ.೨೫ (ಕೆಎಂಶಿ)- ಮೈಸೂರು ಎಕ್ಸ್ಪ್ರೆಸ್ ಹೈವೇ ನಿರ್ಮಾಣಕ್ಕಾಗಿ ನೈಸ್ ಸಂಸ್ಥೆಗೆ ನೀಡ ಲಾಗಿದ್ದ ಹೆಚ್ಚುವರಿ ೫೪೩ ಎಕರೆ ಭೂಮಿಯನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸೋಮವಾರ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಕಂದಾಯ ಸಚಿವ ಆರ್.ಅಶೋಕ್, ಲೋಕೋಪ ಯೋಗಿ ಸಚಿವ ಸಿ.ಸಿ.ಪಾಟೀಲ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಲ್ಲದೆ, ಮುಂದಿನ ೧೫ ದಿನದಲ್ಲಿ ಮತ್ತೊಂದು ಸಭೆ ನಡೆಸಿ, ಕೆಲವು ಕಠಿಣ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಹಿಂದೆ ಇದ್ದ ಕಾಂಗ್ರೆಸ್ ಮತ್ತು ಜನತಾ ಸರ್ಕಾರಗಳು ನೈಸ್ ಸಂಸ್ಥೆಗೆ ಅಗತ್ಯವಾದ ಕಾನೂನಿಗೆ ಅನುವು ಮಾಡಿ ಭೂಮಿಯನ್ನು ನೀಡಿದೆ. ಆದರೆ ಅವರು ಪೂರ್ಣ ಪ್ರಮಾಣ ದಲ್ಲಿ ಹಾಗೂ ಕಾನೂನು ಬದ್ಧವಾಗಿ ರಸ್ತೆಯನ್ನು ಮಾಡಿಲ್ಲ.
ಅಷ್ಟೇ ಅಲ್ಲ ಹೆಚ್ಚುವರಿ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಭೂಮಿ ಕಳೆದು ಕೊಂಡ ರೈತರಿಗೆ ಭಾರೀ ಅನ್ಯಾಯವಾಗಿದೆ ಎಂದರು.
ಸೋಮಶೇಖರ್ ಮುಂದುವರೆದು ಮಾತ ನಾಡಿ, ನೈಸ್ ಸಂಸ್ಥೆಗೆ ಹೆಚ್ಚುವರಿ ಭೂಮಿ ನೀಡಲಾಗಿ ರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಂಸ್ಥೆ ೧೯೦೦ ಎಕರೆ ಹೆಚ್ಚುವರಿ ಜಮೀನನ್ನು ವಶಪಡಿಸಿಕೊಂಡು ಟೌನ್ ಶಿಪ್ ನಿರ್ಮಿಸುತ್ತಿದೆ. ಇದು ಕಾನೂನು ಬಾಹಿರ ಎಂದರು. ಟೌನ್‌ಶಿಪ್‌ಗೆ ವಶಪಡಿಸಿ ಕೊಂಡಿರುವ ಭೂಮಿಗೆ ಎಕರೆಯೊಂದಕ್ಕೆ ಒಂದು ಕೋಟಿ ೬೦ ಲಕ್ಷ ರೂ. ನೀಡಬೇಕು ಮತ್ತು ೬೦x೪೦ ಅಳತೆಯ ನಿವೇ ಶನವನ್ನು ರೈತರಿಗೆ ಪರಿಹಾರವಾಗಿ ನೀಡಬೇಕಿತ್ತು ಎಂದರು.
ಈ ವಿಷಯದಲ್ಲಿ ರೈತರಿಗೆ ಅನ್ಯಾಯವಾಗಿದೆ. ಈ ಹಿಂದೆ ನಿಗದಿಯಾಗಿದ್ದ ನಲವತ್ತು ಲಕ್ಷ ರೂಪಾಯಿ ಪರಿಹಾರವನ್ನು ರೈತರು ಒಪ್ಪಿಲ್ಲ ಎಂದ ಅವರು,
ಭೂಮಿಯನ್ನು ರೈತರಿಂದ ವಶಪಡಿಸಿಕೊಂಡು ಇಪ್ಪತ್ತು ವರ್ಷಗಳು ಕಳೆದಿವೆ. ಈಗ ಸದರಿ ಪರಿಹಾರವನ್ನು ನೀಡದಿದ್ದರೆ ಭೂಮಿಯನ್ನು ಮರಳಿ ಸ್ವಾಧೀನಪಡಿಸಿ ಕೊಂಡು ರೈತರಿಗೆ ನೀಡಲಾಗುವುದು ಎಂದರು. ಬೆಂಗಳೂರು ಜನತೆಗೆ ಈಗ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದ ಕಂದಾಯ ಸಚಿವರು, ಯೋಜನೆ ಯಡಿ ಕಾಂಕ್ರೀಟ್ ರೋಡ್ ಆಗಬೇಕಿತ್ತು.ಆದರೆ ಆಗಿಲ್ಲ. ಕ್ರಾಸ್ ರೋಡ್ ಅಗಲ ಮಾಡಬೇಕಾಗಿತ್ತು.ಆದರೆ ಅದರಲ್ಲೂ ನಿಯಮ ಉಲ್ಲಂಘನೆಯಾಗಿದೆ ಎಂದರು.
ಕೆಲವೆಡೆ ೨೦,೩೦,೪೦ ಅಡಿಗಳಷ್ಟು ಉಲ್ಲಂಘನೆಯಾಗಿದೆ ಎಂದ ಅವರು, ಇಷ್ಟೆಲ್ಲದರ ನಡುವೆ ಈ ಹಿಂದೆ ನೈಸ್ ಯೋಜನೆಗೆ ಹೆಚ್ಚುವರಿ ೫೪೩ ಎಕರೆ ಭೂಮಿಯನ್ನು ಕೊಡಲಾಗಿತ್ತು. ಇದನ್ನು ವಾಪಸ್ ಪಡೆಯಲು ಇಂದು ನಡೆದ ಸಂಪುಟ ಉಪಸಮಿತಿ ಸಭೆ ನಿರ್ಣಯಿಸಿದೆ ಎಂದರು. ಅಕ್ಟೋಬರ್, ನವೆಂಬರ್ ತಿಂಗಳ ಒಳಗಾಗಿ ನೈಸ್ ಸಂಸ್ಥೆಗೆ ನೀಡಲಾಗಿದ್ದ ಹೆಚ್ಚುವರಿ ೫೪೩ ಎಕರೆ ಭೂಮಿಯನ್ನು ಹಿಂಪಡೆಯಲು ಸಂಪುಟ ಉಪಸಮಿತಿ ಸಭೆ ತೀರ್ಮಾನಿಸಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.