ಮಾಜಿ ಮುಖ್ಯಮಂತ್ರಿಗಳ ಅನುಭವ ಇತರರಿಗೆ ಮಾದರಿಯಂತಿರಬೇಕು
ಮೈಸೂರು

ಮಾಜಿ ಮುಖ್ಯಮಂತ್ರಿಗಳ ಅನುಭವ ಇತರರಿಗೆ ಮಾದರಿಯಂತಿರಬೇಕು

October 21, 2021

ಮೈಸೂರು,ಅ.20(ಆರ್‍ಕೆಬಿ)-ಮಾಜಿ ಮುಖ್ಯ ಮಂತ್ರಿಗಳಾದವರು ಹಿರಿತನವಾಗುತ್ತ ಹೆಚ್ಚು ಗೌರವಕ್ಕೆ ಪಾತ್ರರಾಗಬೇಕು. ನಿಮ್ಮ ಅನುಭವ ಇತರರಿಗೆ ಮಾದರಿ ಯಾಗಬೇಕು. ನೀವು ನಿಮ್ಮ ಬಾಯಿಯಿಂದ ಏಕವಚನ ದಲ್ಲಿ ಮಾತನಾಡಿದರೆ ಜನರು ಅದನ್ನು ಗಂಭೀರವಾಗಿ ಗಮನಿಸುತ್ತಾರೆ ಎಂಬ ಅರಿವು ನಿಮ್ಮಲ್ಲಿರಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ ಮಾಜಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ವಾಕ್ ಸಮರ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿ ಸಿದ ಅವರು, ರಾಜಕಾರಣದಲ್ಲಿ ಮಂಥರೆಯಂತ ವರು ಜಾಸ್ತಿ ಜನ ಇದ್ದಾರೆ. ಮನೆ ಮನೆಗಳಲ್ಲೂ ಮಂಥರೆ ಪಾತ್ರ ಮಾಡುವವರು ಇದ್ದಾರೆ. ಇದರ ಬಗ್ಗೆ ಯಾರಿಗೂ ಅರಿವಿಲ್ಲ. ಮಂಥರೆ ಯಂತವರು ಇಲ್ಲದೆ ಇದ್ದಿದ್ದರೆ ಇಷ್ಟೊಂದು ಕೆಟ್ಟ ಟೀಕೆ ಮಾತುಗಳು ಬರುವುದಿಲ್ಲ. ಜನ ಬಹಳ ಬುದ್ಧಿವಂತರಿದ್ದಾರೆ. ಪರಸ್ಪರ ಟೀಕೆ ಮಾಡುವುದನ್ನು ರಾಜ್ಯದ ಜನತೆ ಗಮನಿಸುತ್ತಿ ದ್ದಾರೆ ಎಂದರು. ಉತ್ತಮ ಆಡಳಿತ ಯಾರು ನೀಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ತತ್ವ ಸಿದ್ಧಾಂತ ಉಳಿದಿಲ್ಲ. ಮಾತನಾಡುವಾಗ, ಇನ್ನೊ ಬ್ಬರನ್ನು ಟೀಕಿಸುವಾಗ ಹಲವು ಬಾರಿ ಯೋಚಿಸಿ ಮಾತನಾಡ ಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

Translate »