ಜೂನ್ ಮೊದಲ ವಾರ ಎಸ್ಸೆಸ್ಸೆಲ್ಸಿ, ಮೇ 2ನೇ ವಾರ ದ್ವಿತೀಯ ಪಿಯು ಪರೀಕ್ಷೆ
ಮೈಸೂರು

ಜೂನ್ ಮೊದಲ ವಾರ ಎಸ್ಸೆಸ್ಸೆಲ್ಸಿ, ಮೇ 2ನೇ ವಾರ ದ್ವಿತೀಯ ಪಿಯು ಪರೀಕ್ಷೆ

January 25, 2021

ಬಾಗಲಕೋಟೆ, ಜ.24- ಜೂನ್ ಮೊದಲ ವಾರ ಎಸ್ಸೆಸ್ಸೆಲ್ಸಿ ಹಾಗೂ ಮೇ ಎರಡನೇ ವಾರ ದ್ವಿತೀಯ ಪಿಯು ಪರೀಕ್ಷೆ ನಡೆಸಲು ಎಂದು ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಜೂನ್ ಮೊದಲ ವಾರ ಎಸ್‍ಎಸ್ ಎಲ್‍ಸಿ ಪರೀಕ್ಷೆ ಹಾಗೂ ಮೇ 2ನೇ ವಾರ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು. ಮಕ್ಕಳಿಗೆ ಹೊರೆ ಆಗುವುದನ್ನು ತಡೆಯಲು ಈ ವರ್ಷ ಶೇ.30ರಷ್ಟು ಪಠ್ಯಕ್ರಮ ಕಡಿಮೆ ಮಾಡ ಲಾಗಿದೆ ಎಂದರು. ಪರೀಕ್ಷೆಗೆ ಕುಳಿತುಕೊಳ್ಳಲು ಕನಿಷ್ಠ ಹಾಜರಾತಿ ನಿಯಮದಿಂದ ವಿನಾಯ್ತಿ ನೀಡಲಾಗಿದೆ ಎಂದರು. 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿ ಸುವಂತೆ ಪೆÇೀಷಕರಿಂದ ಒತ್ತಾಯ ಬಂದಿದ್ದು, ಅದರಲ್ಲೂ ಗ್ರಾಮೀಣ ಭಾಗದ ಪೆÇೀಷಕರಿಂದ ಹೆಚ್ಚಿನ ಬೇಡಿಕೆ ಇದ್ದು, ಪರಿಶೀಲಿಸಲಾಗುತ್ತಿದೆ. ಆರೋಗ್ಯ ಇಲಾಖೆ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದು ಶೀಘ್ರ ತೀರ್ಮಾನ ಕೈಗೊಳ್ಳ ಲಾಗುವುದು ಎಂದರು. `ಪರೀಕ್ಷೆಗೆ ಯಾವ ಪಠ್ಯ ಅನಗತ್ಯ, ಪಿಯುಸಿಯಲ್ಲಿ ಯಾವುದು ಬಹಳ ಅಗತ್ಯ ಎಂಬ ಬಗ್ಗೆ ಪಠ್ಯ ಪುಸ್ತಕ ರಚಿಸಿದ ತಜ್ಞರು ಎರಡು ಸುತ್ತು ಸಭೆ ನಡೆಸಿದ್ದಾರೆ. ಆಯುಕ್ತರೂ ಮೂರು ಸುತ್ತಿನ ಸಭೆ ನಡೆಸಿ ಪಠ್ಯಗಳನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷ ವನ್ನು (2021-22) ಜುಲೈ 1ರಿಂದಲೇ ಆರಂಭಿಸಲು ಉದ್ದೇಶಿ ಸಲಾಗಿದೆ’ ಎಂದು ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.

 

 

Translate »