ಬುಡಕಟ್ಟು, ಜಾನಪದ ದಿನದಲ್ಲಿ ಮೇಳೈಸಿತು ಜಾನಪದ ಗೀತೆಗಳ ವೈಭವ
ಮೈಸೂರು

ಬುಡಕಟ್ಟು, ಜಾನಪದ ದಿನದಲ್ಲಿ ಮೇಳೈಸಿತು ಜಾನಪದ ಗೀತೆಗಳ ವೈಭವ

September 13, 2020

ಮೈಸೂರು, ಸೆ.12(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ 6 ತಿಂಗಳಿಂದ ಸಾಂಸ್ಕøತಿಕ ಕಾರ್ಯಕ್ರಮವಿಲ್ಲದೆ ಜಡ್ಡು ಗಟ್ಟಿದ್ದ ವಾತಾವರಣವನ್ನು ಬದಲಿಸಿದ ವಿಶ್ವ ಬುಡಕಟ್ಟು ಹಾಗೂ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮೊಳಗಿದ ಜಾನಪದ ಗೀತೆ ನೆರೆದಿದ್ದವರನ್ನು ಪುಳಕಗೊಳಿಸಿತು.

ಮೈಸೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿ ನಿಯರ್ಸ್ ಸಭಾಂಗಣದಲ್ಲಿ ಕನ್ನಡ ಜಾನ ಪದ ಪರಿಷತ್ ಶನಿವಾರ ಆಯೋಜಿಸಿದ್ದ ವಿಶ್ವ ಬುಡಕಟ್ಟು ಮತ್ತು ಜಾನಪದ ದಿನಾ ಚರಣೆಯಲ್ಲಿ ಜಾನಪದ, ತತ್ವಗೀತೆ ಗಾಯನ ಮೇಳೈಸಿತು. ಜಾನಪದ ಗೀತೆಗಳ ಗಾಯಕ ರಾದ ಅಮ್ಮ ರಾಮಚಂದ್ರ, ಪನ್ನಗ ವಿಜಯ ಕುಮಾರ್, ಮರಿಸ್ವಾಮಿ ಸರ್ವಾಥ, ಮನುಶ್ರೀ, ಪಿ.ಸೋಮಶೇಖರ್, ಸುಮಂತ್ ವಶಿಷ್ಠ ಸಂಗಡಿಗರು ಮನೆಮಾತಾದ ಜಾನಪದ ಗೀತೆಗಳಾದ ಸೋಜುಗಾದ ಸೂಜು ಮಲ್ಲಿಗೆ, ಭಾಗ್ಯದ ಬಳೆಗಾರ, ತಿಂಗಳು ಮೊಳಗಿದವು, ಹಾಡಿರ ರಾಗಗಳ ನುಡಿಸಿರಿ ತಾಳಗಳ ಮತ್ತಿತರ ಜನಪದ ಗೀತೆಗಳ ಗಾಯನ ನಡೆಸಿಕೊಟ್ಟರು.

ಸೋಬಾನೆ ಪದ ಕಲಾವಿದೆ ಸಣ್ಣಮ್ಮ, ತತ್ವ್ತಪದ ಗಾಯಕ ಜೆ.ಜಟ್ಟಪ್ಪ ಹಾಗೂ ಕಲಾವಿದ ನಟರಾಜು ಸಿ.ಲಿಂಗಧೀರ್ ಹಾಗೂ ಬುಡಕಟ್ಟು ಕ್ಷೇತ್ರದಿಂದ ಪಿ.ಕೆ.ರಾಮು, ಚಿಕ್ಕ ಮೊಮ್ಮ, ಬೊಮ್ಮಿ ಮತ್ತು ಬುಡಕಟ್ಟು ಜನಾಂ ಗದ ಕುರಿತು ಸಂಶೋಧನೆ ನಡೆಸಿದ ನಾಗ ರತ್ನ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ರಜೆ ಘೋಷಿಸಲಿ: ಅಧÀ್ಯಕ್ಷತೆ ವಹಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಪರ ಆಯುಕ್ತ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ದೇಶದ ಮೂಲ ನಿವಾಸಿ ಗಳಾದ ಬುಡಕಟ್ಟು ಜನಾಂಗದ ಅಮೂಲ್ಯ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಿದೆ. ಭಾರತ ದಲ್ಲಿ ಶೇ.10ರಷ್ಟು ಬುಡಕಟ್ಟು ಜನಾಂಗ ಉಳಿದಿದೆ. ಅವರ ಭಾಷೆ ಮತ್ತು ಜನಾಂಗ ನಶಿಸುತ್ತಿದ್ದು, ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ವಿಶ್ವ ಬುಡಕಟ್ಟು ದಿನ ವನ್ನು ನೆಪ ಮಾತ್ರಕ್ಕೆ ಆಚರಿಸಬಾರದು. ವಿವಿಧ ಕಾರ್ಯಕ್ರಮ ರೂಪಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಬುಡಕಟ್ಟು ಸಂಸ್ಕøತಿ ರಕ್ಷಣೆಗೆ ಒತ್ತು ನೀಡ ಬೇಕಾಗಿದೆ. ಮೂಲ ನಿವಾಸಿಗಳನ್ನು ಸ್ಮರಿಸಿ ಗೌರವಿಸುವ ಕೆಲಸ ಆಗಬೇಕು. ವಿಶ್ವ ಬುಡ ಕಟ್ಟು ದಿನದಂದು ಬಿಹಾರ ಮತ್ತು ಒರಿಸ್ಸಾ ದಲ್ಲಿ ರಜೆ ನೀಡಲಾಗುತ್ತದೆ. ಅದೇ ರೀತಿ ಯಲ್ಲಿ ರಾಜ್ಯ ಮತ್ತು ದೇಶದಲ್ಲಿ ರಜೆ ಘೋಷಿಸಲಿ ಎಂದು ಒತ್ತಾಯಿಸಿದರು.

ಜಾನಪದ ಸಂಸ್ಕøತಿಯನ್ನು ಉಳಿಸಲು ಸರ್ಕಾರ ಮಾಡಬೇಕಿರುವ ಕಾರ್ಯಗಳನ್ನು ಕನ್ನಡ ಜಾನಪದ ಪರಿಷತ್ ನಡೆಸುತ್ತಿದೆ. ಈ ಮೂಲಕ ಜಾನಪದ ಸಂಸ್ಕøತಿಯನ್ನು ಜನಮಾನಸದಲ್ಲಿ ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾ ಟಿಸಿದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಧÀ್ಯಕ್ಷ ಹೆಚ್.ಕೆ.ರಾಮು ಮಾತನಾಡಿ, ನಮ್ಮ ಸಂಸ್ಕøತಿಯ ಮೂಲ ಬೇರು ಬುಡಕಟ್ಟು ಸಂಸ್ಕøತಿಯಾಗಿದೆ. ಜಾನಪದ ಸಂಸ್ಕøತಿ ಅತ್ಯುನ್ನತದ್ದಾಗಿದೆ. ಹಲವು ಮಂದಿ ಹಿರಿ ಯರು ಇಂದಿಗೂ ಜಾನಪದ ಮತ್ತು ಬುಡ ಕಟ್ಟು ಸಂಸ್ಕøತಿಯನ್ನು ಸಂರಕ್ಷಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧÀ್ಯಕ್ಷ ಹೆಚ್.ಕ್ಯಾತನಹಳ್ಳಿ ಪ್ರಕಾಶ್, ತೋಟಗಾರಿಕೆ ಇಲಾಖೆ ನಿವೃತ್ತ ಸಹಾ ಯಕ ನಿರ್ದೇಶಕ ಹೆಚ್.ಹನುಮಯ್ಯ, ವೇದವ್ಯಾಸ ಸೇವಾ ಟ್ರಸ್ಟ್ ಅಧÀ್ಯಕ್ಷ ಪನ್ನಗ ವಿಜಯಕುಮಾರ್, ಕಂಸಾಳೆ ಕಲಾವಿದ ಕಂಸಾಳೆ ಕುಮಾರಸ್ವಾಮಿ, ಪರಿಷತ್‍ನ ಚಾಮರಾಜ ಕ್ಷೇತ್ರದ ಅಧ್ಯಕ್ಷೆ ರಾಣಿಪ್ರಭಾ, ಕೆ.ಆರ್.ಕ್ಷೇತ್ರದ ಅಧÀ್ಯಕ್ಷೆ ಚಲುವಾಂಬಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »