ಮೈಸೂರು, ಅ.18(ಆರ್‍ಕೆಬಿ)- ಮೈಸೂರಿನ ಕೆಎಸ್‍ಆರ್‍ಟಿಸಿ ಗ್ರಾಮಾಂತರ ಕೇಂದ್ರ ಬಸ್ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಮ್ಯಾನ್ ಹೋಲ್ ಬಾಯ್ತೆರೆದುಕೊಂಡಿದ್ದು, ಯಾವುದೇ ಕ್ಷಣ ಪ್ರಯಾಣಿಕರ ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆ ಇದೆ.
ಬೆಂಗಳೂರು-ಮೈಸೂರು ಪ್ಲಾಟ್‍ಫಾರಂ ಬಳಿ ನಿರ್ಗಮನ ದ್ವಾರಕ್ಕೆ ಹೊಂದಿಕೊಂಡಂತಿರುವ ಈ ಮ್ಯಾನ್ ಹೋಲ್‍ನ ಮಲೀನÀ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಚರಂಡಿಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್ ಸಂಪೂರ್ಣ ಹಾಳಾಗಿದ್ದು, ನಿಲ್ದಾಣಕ್ಕೆ ಓಡಾಡುವ ಪ್ರಯಾಣಿ ಕರು ಅದನ್ನು ದಾಟಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಮಳೆ ಬಂದಾ ಗಲಂತೂ ಉಕ್ಕಿ ಹರಿಯುವ ಈ ಮ್ಯಾನ್ ಹೋಲ್ ಕಾಣದೆ ಅನೇಕರು ಬಿದ್ದು ಸಣ್ಣ ಪುಟ್ಟ ಗಾಯಗಳಾಗಿರುವ ನಿದರ್ಶನಗಳಿವೆ.
ಬೆಂಗಳೂರಿಗೆ ತೆರಳುವ ಹೆಚ್ಚಿನ ಬಸ್‍ಗಳು ಈ ಮ್ಯಾನ್‍ಹೋಲ್ ಪಕ್ಕದಲ್ಲೇ ಹಾದು ಹೋಗುವುದರಿಂದ ಪ್ರಯಾಣಿಕರು ಇದನ್ನು ದಾಟಿಯೇ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಅವಘಡ ಸಂಭವಿಸುವ ಮುನ್ನ ಈ ಮ್ಯಾನ್ ಹೋಲ್ ದುರಸ್ತಿಗೊಳಿಸುವಂತೆ ತಿಂಗಳ ಹಿಂದೆಯೇ ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಮುಖೇನ ಗಮನ ಸೆಳೆದಿದ್ದರೂ ಇದುವರೆಗೆ ಇದರ ದುರಸ್ತಿ ಆಗಿಲ್ಲ ಎಂದು ಗ್ರಾಮಾಂತರ ಬಸ್ ನಿಲ್ದಾಣದ ಅಧಿಕಾರಿಗಳು `ಮೈಸೂರು ಮಿತ್ರ’ನಲ್ಲಿ ದೂರಿದರು.