ನಿರಂಜನ ಮಠ ರಾಮಕೃಷ್ಣ ಆಶ್ರಮದ ಭಾಗವಾಗಲು ಕಾನೂನಿನಲ್ಲಿ ಅವಕಾಶವಿಲ್ಲ
ಮೈಸೂರು

ನಿರಂಜನ ಮಠ ರಾಮಕೃಷ್ಣ ಆಶ್ರಮದ ಭಾಗವಾಗಲು ಕಾನೂನಿನಲ್ಲಿ ಅವಕಾಶವಿಲ್ಲ

September 20, 2021

`ನಿರಂಜನ ಮಠ – ಒಂದು ಅವಲೋಕನ’ದಲ್ಲಿ ವಿಷಯ ಮಂಡನೆ
ಮೈಸೂರು,ಸೆ.೧೯(ಆರ್‌ಕೆಬಿ)-ನಿರಂಜನ ಮಠ ಎಂದಿಗೂ ರಾಮಕೃಷ್ಣ ಆಶ್ರಮದ ಭಾಗವಾಗಲು ಸಾಧ್ಯವಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ ಎಂದು ಹಿರಿಯ ನ್ಯಾಯವಾದಿ ಗಂಗಾಧರ ಗುರುಮಠ ಅಭಿಪ್ರಾಯಪಟ್ಟರು.

ಮೈಸೂರಿನ ನಿರಂಜನ ಮಠದಲ್ಲಿ ಭಾನುವಾರ `ನಿರಂ ಜನ ಮಠ- ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ಇನ್ನೂ ಒಂದು ವರ್ಷ ಇಲ್ಲಿ ಕುಳಿತರೂ ಯಾರೂ ನಮ್ಮನ್ನು ಕೇಳುವುದಿಲ್ಲ. ಸರ್ಕಾರ ಮತ್ತು ರಾಮಕೃಷ್ಣ ಆಶ್ರಮದ ಮೇಲೆ ಒತ್ತಡ ತರುವಂತಾಗಬೇಕು. ಸರ್ಕಾರಕ್ಕೆ ನಮ್ಮ ನಿಶ್ಚಯ, ನಿಲುವು ದೃಢವಾಗಬೇಕು. ಮುಖ್ಯಮಂತ್ರಿ ಬೊಮ್ಮಾಯಿಯವರ ನೈತಿಕ ಕರ್ತವ್ಯ, ಸಮಾಜದ ಋಣ ಭಾರದ ಬಗ್ಗೆ ತಿಳಿಸಬೇಕು ಎಂದು ಅಭಿಪ್ರಾಯಪಟ್ಟರು.
೨೦೧೩ರ ಜನವರಿ ೧ರ ಸರ್ಕಾರಿ ಆಜ್ಞೆ ಇಂದು ನಾವೆ ಲ್ಲರೂ ಒಂದೆಡೆ ಸೇರಲು ಅವಕಾಶ ಕಲ್ಪಿಸಿದೆ. ಅದು ಕಾನೂ ನಲ್ಲ. ಕಾರ್ಯಾಂಗದ ನಿರ್ದೇಶನವಷ್ಟೇ. ಅಂದು ನಡೆದ ಸರ್ಕಾರಿ ಆಜ್ಞೆ ಸಂವಿಧಾನ ಬಾಹಿರವಾದದ್ದು ಎಂದರು.

ಖಾತೆ ಇದ್ದಾಕ್ಷಣ ಮಾಲೀಕತ್ವ ಬರುವುದಿಲ್ಲ. ಕೇವಲ ಖಾತೆ ಬದಲಾವಣೆ ಮಾಡಿಸಿಕೊಂಡಾಕ್ಷಣ ನಿರಂಜನ ಮಠ ರಾಮಕೃಷ್ಣ ಆಶ್ರಮಕ್ಕೆ ಸೇರಿ ಬಿಡುವುದಿಲ್ಲ. ಇದನ್ನು ರಾಮಕೃಷ್ಣ ಆಶ್ರಮದವರು ಅರಿತುಕೊಳ್ಳಬೇಕು ಎಂದರು.

ನಿರAಜನ ಮಠ ಉಳಿಸಿ ಹೋರಾಟ ಒಗ್ಗಟ್ಟಿನಿಂದ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಮೈಸೂರಿನ ಈ ನಡೆ ರಾಜ್ಯಾದ್ಯಂತ ವಿಸ್ತಾರ ಗೊಳ್ಳಬೇಕು ಎಂದು ಆಶಿಸಿದರು.
ರಾಜ್ಯದ ವೀರಶೈವ ಮಂತ್ರಿಗಳು, ನಾಯಕರು ಕರ್ತವ್ಯ ದಲ್ಲಿ ವಿಮುಖರಾಗಿರುವುದರಿಂದ ಇಂದು ಇಷ್ಟೆಲ್ಲ ನಡೆಯುತ್ತಿದೆ. ಮಹಾಸಭಾದ ನಾಯಕರ ಅನುಪಸ್ಥಿತಿ, ಮಠಾಧಿಪತಿಗಳು ಬೆಂಬಲ ಸೂಚಿಸದಿರುವುದು ಹಾಗೂ ಲಿಂಗಾಯಿತ ಮುಖ್ಯಮಂತ್ರಿ ಇದ್ದರೂ ಲಿಂಗಾಯಿತ ಮಠ ಉಳಿಸಿ ಎಂದು ಮನವಿ ಮಾಡಬೇಕಾದ ಸ್ಥಿತಿಗೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಎನ್‌ಟಿಎಂ ಶಾಲೆ ಹಾಗೆಯೇ ಇರಲಿ. ವಿವೇಕ ಸ್ಮಾರಕವೂ ಇರಲಿ, ನಿರಂಜನ ಮಠವೂ ಉಳಿಯಲಿ. ಇದು ನಮ್ಮೆಲ್ಲರ ಸಂಕಲ್ಪವಾಗಬೇಕು. `ಏಳಿ, ಎದ್ದೇಳಿ.. ಗುರಿ ಮುಟ್ಟುವ ತನಕ ನಿಲ್ಲದಿರಿ…’ ಎಂಬ ಸ್ವಾಮಿ ವಿವೇಕಾ ನಂದರ ವಾಣ ಯಂತೆ ನಾವೆಲ್ಲರೂ ಗುರಿ ಮುಟ್ಟುವ ತನಕ ಹೋರಾಡಬೇಕು. ನಿರಂಜನ ಮಠ ಉಳಿಯು ವವರೆಗೂ ಹೋರಾಟ ನಡೆಯಬೇಕು. ನಿರಂಜನ ಮಠ ಸಂರಕ್ಷಣಾ ಸಮಿತಿಯಲ್ಲಿ ಬಿಜೆಪಿಯವರೂ ಇದ್ದಾರೆ. ಎಂಎಲ್‌ಎ, ಎಂಪಿಗಳಿಗೆ ಇದರ ಉಳಿವಿಗೆ ಮನವಿ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟಿçÃಯ ಯುವ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ್, ಒಂದು ಪರಂಪರೆಯ ಸಂರಕ್ಷಣೆಗೆ ಸರ್ಕಾರ, ಸಮಾಜ ಸಹಕಾರ ನೀಡಬೇಕಾದದ್ದು ಅವರ ನೈತಿಕ ಕರ್ತವ್ಯ. ಸ್ವಾಮಿ ವಿವೇಕಾನಂದರ ಮೇಲೆ ನಮಗೂ ಅಪಾರ ಗೌರವ ವಿದೆ. ನಾವೇ ಸ್ಮಾರಕಕ್ಕೆ ಸ್ಪಂದಿಸುತ್ತೇವೆ ಎಂದು ಹೋರಾಟ ಗಾರರು ಹೇಳುತ್ತಿದ್ದಾರೆ. ನಮ್ಮ ಮಠ ಉಳಿಯಬೇಕು. ವೀರಶೈವ ಸಂಪ್ರದಾಯ ಉಳಿಯಬೇಕು ಎಂದರು.
ನಮ್ಮಲ್ಲಿರುವ `ಹೋಗಲಿ ಬಿಡಿ’ ಎಂಬ ಅಸಡ್ಡೆಯಿಂ ದಾಗಿ ಇಂದು ಇವೆಲ್ಲವೂ ನಡೆಯುತ್ತಿವೆ. ನಿರಂಜನ ಮಠ ನಮ್ಮದು, ಉಳಿಸಬೇಕು, ತಾಳ್ಮೆಯಿಂದ ಹೋರಾಡಿ, ವದಂತಿಗಳಿಗೆ ಕಿವಿಗೊಡಬೇಡಿ, ಹೋರಾಟದಲ್ಲಿ ಗೆಲ್ಲುವ ಭರವಸೆ ಇದೆ ಎಂದು ಹೋರಾಟಗಾರರಿಗೆ ಧೈರ್ಯ ತುಂಬಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯ ಕಾರ್ಯಕಾರಿ ಸದಸ್ಯ ರಾದ ಟಿ.ಎಸ್.ಲೋಕೇಶ್, ಹಿನಕಲ್ ಬಸವರಾಜು, ನಟರಾಜು, ರಾಜ್ಯ ಕೋಶಾಧ್ಯಕ್ಷ ವರುಣಾ ಮಹೇಶ್, ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಶರಣ ಮಹದೇವಪ್ಪ ಇನ್ನಿತರರು ಉಪಸ್ಥಿತರಿದ್ದರು.

ರಾಷ್ಟಿçÃಯ ನಾಯಕರ ಗೈರು: ಅಸಮಾಧಾನ
ಇಂದಿನ ನಿರಂಜನ ಮಠ-ಒಂದು ಅವಲೋಕನ ಕಾರ್ಯಕ್ರಮಕ್ಕೆ ಅಖಿಲ ಭಾರತ ವೀರಶೈವ ಮಹಾ ಸಭಾ ರಾಷ್ಟಿçÃಯ ಅಧ್ಯಕ್ಷ ಶಾಮನೂರು ಶಿವಶಂಕ ರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ್‌ಖಂಡ್ರೆ, ಉಪಾಧ್ಯಕ್ಷ ಶಂಕರ ಬಿದರಿ ಇನ್ನಿತರ ನಾಯಕರು ಬರುತ್ತಾರೆಂದು ಪ್ರಚಾರ ಮಾಡಲಾಗಿತ್ತು. ಆದರೆ ಅವರು ಗೈರು ಹಾಜರಾಗಿದ್ದ ಬಗ್ಗೆ ನಿರಂಜನ ಮಠ ಸಂರಕ್ಷಣಾ ಸಮಿತಿ ಮುಖಂಡರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬAತು.

Translate »