ಮೈಸೂರಲ್ಲಿ 2 ಸಾವಿರದ ಗಡಿಯಲ್ಲಿ ಸಾವಿನ ಸಂಖ್ಯೆ
ಮೈಸೂರು

ಮೈಸೂರಲ್ಲಿ 2 ಸಾವಿರದ ಗಡಿಯಲ್ಲಿ ಸಾವಿನ ಸಂಖ್ಯೆ

June 20, 2021

ಮೈಸೂರು, ಜೂ.19(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಶನಿವಾರ 594 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 898 ಸೋಂಕಿ ತರು ಗುಣ ಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 1,61,538ಕ್ಕೆ ಏರಿಕೆಯಾಗಿದ್ದು, ಈವರೆಗೆ 1,51,517 ಸೋಂಕಿತರು ಗುಣಮುಖರಾಗಿದ್ದಾರೆ.

ಸಾಲಿಗ್ರಾಮದ 37 ವರ್ಷದ ವ್ಯಕ್ತಿ ಸೇರಿ 12 ಮಂದಿ ಪುರುಷರು, ಐವರು ಮಹಿಳೆಯರು ಸೇರಿ 17 ಮಂದಿ ಸೋಂಕಿ ತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2 ಸಾವಿರ ಗಡಿ(1,996) ತಲು ಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,025ಕ್ಕೆ ಇಳಿಕೆಯಾಗಿದ್ದು, ಇವರಲ್ಲಿ 4,574 ಸೋಂಕಿತರು ಹೋಂ ಐಸೊ ಲೇಷನ್‍ನಲ್ಲಿ, 892 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ 11, ಬಳ್ಳಾರಿ 128, ಬೆಳಗಾವಿ 222, ಬೆಂಗಳೂರು ಗ್ರಾಮಾಂತರ 161, ಬೆಂಗಳೂರು ನಗರ 1,263, ಬೀದರ್ 03, ಚಾಮರಾಜನಗರ 113, ಚಿಕ್ಕಬಳ್ಳಾ ಪುರ 105, ಚಿಕ್ಕಮಗಳೂರು 177, ಚಿತ್ರದುರ್ಗ 113, ದಕ್ಷಿಣಕನ್ನಡ 832, ದಾವಣಗೆರೆ 194, ಧಾರವಾಡ 83, ಗದಗ 28, ಹಾಸನ 391, ಹಾವೇರಿ 20, ಕಲಬುರಗಿ 28, ಕೊಡಗು 135, ಕೋಲಾರ 132, ಕೊಪ್ಪಳ 62, ಮಂಡ್ಯ 208, ಮೈಸೂರು 594, ರಾಯಚೂರು 16, ರಾಮನಗರ 24, ಶಿವಮೊಗ್ಗ 223, ತುಮಕೂರು 182, ಉಡುಪಿ 174, ಉತ್ತರಕನ್ನಡ 144, ವಿಜಯಪುರ 44 ಹಾಗೂ ಯಾದಗಿರಿ 05 ಸೇರಿದಂತೆ ರಾಜ್ಯದಲ್ಲಿಂದು 5,815 ಪಾಸಿಟಿವ್ ಪ್ರಕರಣ ವರದಿಯಾಗಿವೆ.

ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕು ಬಾಧಿತರ ಸಂಖ್ಯೆ 28,01,936ಕ್ಕೆ ಏರಿಕೆಯಾಗಿದೆ. ಇಂದು ಡಿಸ್ಚಾರ್ಜ್ ಆದ 11,832 ಮಂದಿ ಸೇರಿ ಈವರೆಗೆ 26,37,279 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 161 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 33,763ಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,30,872ಕ್ಕೆ ಇಳಿಕೆಯಾಗಿದೆ.

Translate »