ಸಿದ್ದರಾಮಯ್ಯನವರಿಂದಲೇ ಸಮಸ್ಯೆ ಪರಿಹಾರವಾಯ್ತು ಇದರಲ್ಲಿ ನನ್ನ ಪ್ರಯತ್ನವೂ ಇದೆ: ಎಂಕೆಎಸ್
ಮೈಸೂರು

ಸಿದ್ದರಾಮಯ್ಯನವರಿಂದಲೇ ಸಮಸ್ಯೆ ಪರಿಹಾರವಾಯ್ತು ಇದರಲ್ಲಿ ನನ್ನ ಪ್ರಯತ್ನವೂ ಇದೆ: ಎಂಕೆಎಸ್

July 16, 2020

ಮೈಸೂರು, ಜು.15- ಕುರುಬಾರ ಹಳ್ಳಿ ಸರ್ವೇ ನಂ.4 ಮತ್ತು ಆಲನ ಹಳ್ಳಿ ಸರ್ವೇ ನಂ. 41ಕ್ಕೆ ಸೇರಿದ ಸಿದ್ದಾರ್ಥನಗರ, ಕೆಸಿ ಮತ್ತು ಜೆಸಿ ಬಡಾ ವಣೆ ನಿವಾಸಿಗಳ ಬಹುಕಾಲದ ಸಮಸ್ಯೆ ಯನ್ನು ಬಗೆಹರಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಕೆ.ಆರ್.ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ದಲ್ಲಿ ಕೈಗೊಂಡಂತಹ ತೀರ್ಮಾನ ದಿಂದಾಗಿ ಈ ಬಡಾವಣೆಗಳ ನಿವಾಸಿ ಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ನಾನು ಶಾಸಕನಾಗಿದ್ದಾಗ ಪಾದಯಾತ್ರೆ ನಡೆಸಿದಾಗ ಅಲ್ಲಿನ ನಾಗರಿಕರು ತಮ್ಮ ಸಮಸ್ಯೆಗಳನ್ನು ಹೇಳಿದ್ದರು. ಈ ವಿಚಾರ ವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನಾನು ಜಿಲ್ಲಾಧಿಕಾರಿಗಳನ್ನು ಜನರ ಬಳಿಗೆ ಕರೆಸಿ, ಜನಸಂಪರ್ಕ ಸಭೆ ನಡೆಸಿದ್ದೆ. ಮುಡಾ ಸಭೆಗಳಲ್ಲೂ ಈ ಸಂಬಂಧ ಚರ್ಚಿಸಿ ಜಿಲ್ಲಾಧಿಕಾರಿಗಳ ಮೂಲಕ ವಿಸ್ತøತ ವರದಿಯನ್ನು ನಗರಾಭಿವೃದ್ಧಿ ಇಲಾಖೆ ಮತ್ತು ಕಂದಾಯ ಇಲಾಖೆಗೆ ಕಳುಹಿಸಲಾಗಿತ್ತು. ಒಂದೂವರೆ ವರ್ಷ ಕಾಲ ಎಲ್ಲಾ ಕಚೇರಿಗಳಿಗೂ ಅಲೆದು, ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಜನರ ಸಮಸ್ಯೆಯನ್ನು ಮನ ದಟ್ಟು ಮಾಡಿದ ಹಿನ್ನೆಲೆಯಲ್ಲಿ ಅವರು ಈ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಟ್ಟು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದರು.

ಸಚಿವ ಸಂಪುಟದ ನಿರ್ಣಯವನ್ನು ಅಡ್ವೋಕೇಟ್ ಜನರಲ್ ಅಭಿಪ್ರಾಯಕ್ಕಾಗಿ ಕಳುಹಿಸಿ, ಹೈಕೋರ್ಟ್ ಮುಂದೆ ತಿಳಿಸಿ ಸರ್ಕಾರಿ ಆದೇಶ ಹೊರಡಿಸಬೇಕೆನ್ನುವಷ್ಟರಲ್ಲಿ ವಿಧಾನಸಭಾ ಚುನಾವಣೆ ಬಂದಿದ್ದರಿಂದ ಪ್ರಕ್ರಿಯೆಗೆ ತಡೆಯಾಯಿತು. ಅಂದು ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳದೇ ಹೋಗಿದ್ದರೆ ಈ ಸಮಸ್ಯೆ ಇನ್ನೂ ಬಗೆಹರಿಯುತ್ತಿರಲಿಲ್ಲ. ಜನರ ಸಂಕಷ್ಟ ನಿವಾರಣೆಯಾಗುತ್ತಿರಲಿಲ್ಲ ಎಂದಿರುವ ಸೋಮಶೇಖರ್, ತಾನು ಶಾಸಕನಾಗಿದ್ದಾಗ ಪಟ್ಟ ಪರಿಶ್ರಮಕ್ಕೆ ಫಲ ದೊರೆತಿದೆ ಎಂಬ ತೃಪ್ತಿ ನಮಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಸಮಸ್ಯೆ ಇತ್ಯರ್ಥಕ್ಕಾಗಿ ತಮ್ಮ ಜೊತೆ ಸಹಕರಿಸಿದ ಬಡಾವಣೆಯ ಹಿರಿಯ ಜೀವಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರಿಗೆ ಮಾತ್ರವಲ್ಲದೆ, ಇಂದು ಬಿ-ಖರಾಬಿನಿಂದ ಕೈಬಿಟ್ಟ ಆದೇಶವನ್ನು ಪ್ರದರ್ಶಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸೋಮಶೇಖರ್ ತಿಳಿಸಿದ್ದಾರೆ.

Translate »