ಎರಡನೇ ದಿನವೂ ಕಫ್ರ್ಯೂಗೆ ಉತ್ತಮ ಸ್ಪಂದನೆ
ಚಾಮರಾಜನಗರ

ಎರಡನೇ ದಿನವೂ ಕಫ್ರ್ಯೂಗೆ ಉತ್ತಮ ಸ್ಪಂದನೆ

April 26, 2021

ಚಾಮರಾಜನಗರ, ಏ.25(ಎಸ್‍ಎಸ್)- ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರುವ ವಾರಾಂತ್ಯದ ಕಫ್ರ್ಯೂಗೆ ಎರಡನೇ ದಿನವಾದ ಭಾನು ವಾರವೂ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ನಂತರ ದಿನವಿಡೀ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆ, ಕ್ಲಿನಿಕ್, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯವಹಾರಗಳು ಬಂದ್ ಆಗಿತ್ತು. ವಾರಾಂತ್ಯದ ಎರಡನೇ ದಿನದ ಕಫ್ರ್ಯೂ ಅಭೂತಪೂರ್ವ ಯಶ ಕಂಡಿತು. ಬೆಳಗ್ಗೆ 6ಗಂಟೆಯಿಂದ 10 ಗಂಟೆವರೆಗೆ ದಿನಸಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಅಂಗಡಿಗಳು ಬಾಗಿಲು ತೆರದಿದ್ದವು. ಜನರಿಲ್ಲದ ಕಾರಣ ಅಂಗಡಿ ಮಾಲೀಕರಿಗೆ ನಿರೀಕ್ಷಿತ ಪ್ರಮಾಣ ದಲ್ಲಿ ವ್ಯಾಪಾರವಾಗಲಿಲ್ಲ. 10 ಗಂಟೆ ನಂತರ ಅಂಗಡಿ-ಮುಂಗಟ್ಟು ಮುಚ್ಚುವ ಮೂಲಕ ಮಾಲೀಕರು ಕಫ್ರ್ಯೂ ಬೆಂಬಲಿಸಿದರು.

ಖಾಸಗಿ ಬಸ್‍ಗಳು ರಸ್ತೆಗೆ ಇಳಿಯಲಿಲ್ಲ. ಬೆರಳೆಣಿಕೆಯಷ್ಟು ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸಿದವು. ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರ ಸಹ ಇರಲಿಲ್ಲ. ದ್ವಿಚಕ್ರ ವಾಹನಗಳು ಸಂಚರಿಸಿದವು. ಅಲ್ಲಲ್ಲಿ ಪೊಲೀಸರು ವಾಹನ ಸವಾರರನ್ನು ತಡೆದು ಪ್ರಶ್ನಿಸುತ್ತಿದ್ದ ದೃಶ್ಯ ಕಂಡು ಬಂತು. ಕೆಲವರಿಗೆ ದಂಡವನ್ನೂ ವಿಧಿಸಲಾಯಿತು. ನಗರದ ಡಿವೈಎಸ್ಪಿ ಕಚೇರಿ ಮುಂಭಾಗ ಜೋಡಿರಸ್ತೆಗೆ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳು ನಗರ ಪ್ರವೇಶಿಸದಂತೆ ತಡೆಯೊಡ್ಡಲಾಗಿತ್ತು.

ಪೆಟ್ರೋಲ್‍ಬಂಕ್‍ಗಳು ತೆರೆದಿದ್ದರೂ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಕೆಲವು ಹೋಟೆಲ್, ಕ್ಯಾಂಟೀನ್‍ಗಳು ಬಾಗಿಲು ತೆರದಿದ್ದವು. ಪಾರ್ಸಲ್‍ಗೆ ಮಾತ್ರ ಅವ ಕಾಶವಿತ್ತು. ಇಂದಿರಾ ಕ್ಯಾಂಟಿನ್ ಸಹ ತೆರೆದಿ ದ್ದರೂ ಸ್ಥಳದಲ್ಲಿ ಊಟ, ತಿಂಡಿ ಮಾಡು ವಂತಿರಲಿಲ್ಲ. ಬರೀ ಪಾರ್ಸಲ್ ನೀಡಲಾಗುತ್ತಿತ್ತು. ಭಾನುವಾರವಾದ ಕಾರಣ ಸರ್ಕಾರಿ ಕಚೇರಿ ಗಳು ಬ್ಯಾಂಕ್‍ಗಳು ತೆರೆದಿರಲಿಲ್ಲ. ಸರ್ಕಾರದ ಆದೇಶದ ಮೇರೆಗೆ ಚಿತ್ರಮಂದಿರಗಳು ಸಂಪೂರ್ಣವಾಗಿ ಮುಚ್ಚಲ್ಪಟಿವೆ.

Translate »