ಮಸೀದಿಗಳಲ್ಲಿ ಪ್ರಾರ್ಥಿಸಲು ಅವಕಾಶವಿದೆ  ಎಂಬ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ: ಸಿಪಿಐ ರವಿ
ಮೈಸೂರು

ಮಸೀದಿಗಳಲ್ಲಿ ಪ್ರಾರ್ಥಿಸಲು ಅವಕಾಶವಿದೆ ಎಂಬ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ: ಸಿಪಿಐ ರವಿ

April 28, 2021

ಹುಣಸೂರು, ಏ.27(ಕೆಕೆ)-ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ವಾಟ್ಸಪ್ ಮೂಲಕ ಹರಡಿರುವ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಸಿಪಿಐ ಸಿ.ವಿ.ರವಿ ತಿಳಿಸಿದರು.

ನಗರದ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಡಿರುವ ಬಗ್ಗೆ ಬಹಳಷ್ಟು ಜನ ಸ್ಪಷ್ಟೀಕರಣ ಕೇಳುತ್ತಿದ್ದರು. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ನಿಷೇಧಿಸಲಾಗಿದೆ. ಸರ್ಕಾರದ ನಿಯಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಯಾರೂ ಕೂಡ ಗಾಳಿಸುದ್ದಿಗೆ ಕಿವಿಗೊಡಬೇಡಿ. ತಮ್ಮ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳಲು ಎಚ್ಚರಿಕೆ ವಹಿಸಬೇಕು ಎಂದರು.

ಮಸೀದಿಗಳಲ್ಲಿ ಹಿರಿಯ ಮೌಲ್ವಿಗಳು ಹಾಗೂ ಕಿರಿಯ ಮೌಲ್ವಿಗಳು ಮಾತ್ರ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಉಳಿದವರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕು ಮಸೀದಿಗಳಲ್ಲಿ 2-3 ಜನಕ್ಕೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ಇದೆ ಹಾಗೂ ಮಸೀದಿಯಲ್ಲಿ ಜನ ಸೇರುವುದು, ಗುಂಪು ಕಟ್ಟುವ ಹಾಗಿಲ್ಲ ಎಂದರು.
ನಗರದ ಪ್ರಮುಖ ವೃತ್ತದಲ್ಲಿ ವೀಕೆಂಡ್ ಕಫ್ರ್ಯೂ ವೇಳೆ ಅನಾವಶ್ಯಕವಾಗಿ ಸುತ್ತಾಡುವ ಬೈಕ್ ಸವಾರರನ್ನು ತಡೆ ಹಿಡಿದು ಬೈಕ್‍ಗಳನ್ನು ಪೊಲೀಸ್ ವಶಪಡಿಸಿಕೊಂಡಿ ದ್ದಾರೆ. ನಿಯಮ ಉಲ್ಲಂಘನೆ ಮಾಡಿರುವ ಬೈಕ್ ಸವಾರರು ಕೋರ್ಟ್‍ನಿಂದ ಆದೇಶ ಪಡೆದು ರೂ.500 ದಂಡ ಪಾವತಿಸಿದ ಬಳಿಕ ಬೈಕ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಎಸ್‍ಐ ಲತೇಶ್‍ಕುಮಾರ್, ಇರ್ಫಾನ್, ರಾಘು, ಮಸೀದಿ ಅಧ್ಯಕ್ಷ ಹೆಚ್.ಎಂ, ಫಜûಲುಲ್ಲಾ, ಅಮೀರ್ ಪಾಷ, ರೋಷನ್ ಖಾನ್, ಕಾರ್ಯದರ್ಶಿ ಶಹಜûಮಾ, ಶಂಶು ದ್ದೀನ್, ಸದಸ್ಯರಾದ ಬಶೀರ್ ಅಹಮದ್, ಅಫೆರ್Çೀeóï ಅಹಮದ್, ಮುನ್ನಾ ಅಜಿûೀeóï, ಫೈರೋeóï ಇನ್ನಿತರರು ಭಾಗವಹಿಸಿದ್ದರು.

Translate »