ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ
News

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ

December 28, 2021

ಬೆಂಗಳೂರು, ಡಿ.27(ಕೆಎಂಶಿ)-ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂಬ ರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲೇ ಎದು ರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿ ದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾಧ್ಯಮಗಳ ಸೃಷ್ಟಿ, ಅವರೇ ಸೃಷ್ಟಿ ಮಾಡಿ, ಪ್ರಶ್ನೆ ಕೇಳುವ ಚಾಳಿ ಮಾಡಿಕೊಂಡಿ ದ್ದೀರಿ ಎಂದು ವರದಿಗಾರರ ಮೇಲೆ ಕಿಡಿಕಾರಿದರು.

ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಏನು ಮಾಡ ಬೇಕೆಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಅವರ ಆಣತಿಯಂತೆ ಪಕ್ಷ ಮತ್ತು ಸರ್ಕಾರ ಕೆಲಸ ಮಾಡಲಿದೆ. ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇದೆ. ಈ ಸಮನ್ವಯತೆಯಿಂದಲೇ ನಾವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಜನತೆ ಮತ್ತು ರೈತರಿಗೆ ಅನುಕೂಲವಾಗು ವಂತೆ ಹಾಗೂ ಬಡವರ ಏಳ್ಗೆಗೆ ಸಹಕಾರಿಯಾಗು ವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಉತ್ತಮ ಆಡಳಿತ ನೀಡುವುದು ಮತ್ತು ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿ ಸುವುದಷ್ಟೇ ನಮ್ಮ ಗುರಿ. ಪಕ್ಷ ಸಂಘಟನೆ ಉದ್ದೇಶದಿಂದ ಎರಡು ತಿಂಗಳಿಗೊಮ್ಮೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಸೇರುತ್ತದೆ. ಅದೇ ರೀತಿ ನಾಳೆಯಿಂದ ಹುಬ್ಬಳ್ಳಿ ಯಲ್ಲಿ ಕಾರ್ಯಕಾರಿಣಿ ನಡೆಯಲಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಸರ್ಕಾರ ರಚನೆ, ಸಂಪುಟ ಪುನರ್ ರಚನೆ ಸೇರಿದಂತೆ ರಾಜಕೀಯ ವಿಷಯಗಳ ಬಗ್ಗೆ ನಿಮ್ಮ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ. ಏನೇ ವಿಷಯಗಳಿದ್ದರೂ, ನಾವು ಆಂತರಿಕ ವಾಗಿ ಚರ್ಚೆ ಮಾಡಿ, ತೀರ್ಮಾನಗಳನ್ನು ಕೈಗೊಳ್ಳು ತ್ತೇವೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿ ಷತ್ತಿಗೆ 25 ಸ್ಥಾನಗಳಿಗೆ ನಡೆದ ಚುನಾವಣೆಯ ಬಗ್ಗೆಯು ಚರ್ಚೆಯಾಗಬಹುದು ಎಂದರು. ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಚರ್ಚೆ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಅವರು, ಎಲ್ಲವನ್ನೂ ಮಾಧ್ಯಮಗಳಿಗೆ ತಿಳಿಸಬೇಕೆಂಬ ನಿಯಮ ವಿದೆಯೇ ಎಂದು ಸಿಟ್ಟಾದರು. ನಾವು ಏನು ಮಾಡುತ್ತೇವೆ ಎಂಬುದನ್ನು ನಿಮಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಯಾವ ಸಂದರ್ಭದಲ್ಲಿ ಏನು ಚರ್ಚೆ ಮಾಡಬೇಕೋ ಅದನ್ನು ಮಾಡುತ್ತೇವೆ. ಇದು ಪಕ್ಷದ ಆಂತರಿಕ ವಿಷಯ ಎಂದು ಗರಮ್ಮಾಗಿಯೇ ಉತ್ತರಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಪ್ರತಿ ಯೊಂದು ವಿಷಯವೂ ಹೈಕಮಾಂಡ್ ಗಮನದಲ್ಲಿದೆ ಎಂದರು.

Translate »