ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬಲಿಷ್ಠ ಇಂಡೊನೇಷ್ಯಾ ಮಣ ಸಿದ ಭಾರತಕ್ಕೆ ಥಾಮಸ್ ಕಪ್
ಮೈಸೂರು

ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬಲಿಷ್ಠ ಇಂಡೊನೇಷ್ಯಾ ಮಣ ಸಿದ ಭಾರತಕ್ಕೆ ಥಾಮಸ್ ಕಪ್

May 16, 2022

ಬ್ಯಾಂಕಾಕ್, ಮೇ ೧೫- ಬಲಿಷ್ಠ ಹಾಗೂ ೧೪ ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಅಮೋಘ ಗೆಲುವು ದಾಖಲಿಸಿರುವ ಭಾರತ, ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಡೊನೇಷ್ಯಾ ತಂಡವನ್ನು ೩-೦ ಅಂತರದಲ್ಲಿ ಬಗ್ಗು ಬಡಿದ ಭಾರತ ಟ್ರೋಫಿ ಎತ್ತಿ ಹಿಡಿಯಿತು. ಅಲ್ಲದೇ ಮೊದಲ ಬಾರಿ ಚಿನ್ನದ ಪದಕ ಗಳಿಸಿ ಇತಿಹಾಸ ಸೃಷ್ಟಿಸಿತು.

ನಾಕ್‌ಔಟ್ ಹಂತದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಭಾರತ ತಂಡ ಫೈನಲ್‌ನಲ್ಲಿ ಅಧಿಕಾರಯುತ ಪ್ರದರ್ಶನ ನೀಡಿ ಎಲ್ಲರನ್ನು ಹುಬ್ಬೇರುವಂತೆ ಮಾಡಿತು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಪರ ಲಕ್ಷ÷್ಯ ಸೇನ್ ಅವರು ಇಂಡೋನೇಷ್ಯಾದ ಆಂಥೋನಿ ಗಿಂಟಿAಗ್ ಅವರನ್ನು ೨೧-೮, ೧೭-೨೧, ೧೬-೨೧ರಿಂದ ಸೋಲಿಸಿ ತಂಡಕ್ಕೆ ೧-೦ ಅಂತರದ ಮುನ್ನಡೆ ತಂದುಕೊಟ್ಟರು.

ನAತರ ನಡೆದ ಡಬಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವದ ೮ನೇ ಶ್ರೇಯಾಂಕ ಹೊಂದಿರುವ ಸಾತ್ವಿಕ್ ಸಾಯ್‌ರಾಜ್ ಮತ್ತು ಚಿರಾಗ್ ಶೆಟ್ಟಿ ಒತ್ತಡ ನಿಭಾ ಯಿಸುವ ಮೂಲಕ ಇಂಡೊನೇಷ್ಯಾದ ಚಾಂಪಿ ಯನ್ ಜೋಡಿ ಸವಾಲನ್ನು ಹತ್ತಿಕ್ಕಿದರು. ಚಿರಾಗ್-ಸಾತ್ವಿಕ್ ಜೋಡಿ, ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡುವೆಯೂ ನಿರಾಸೆ ಅನುಭವಿಸಿತ್ತು. ಆದರೆ, ಹೋರಾಟ ಬಿಡದ ಭಾರತೀಯ ಆಟಗಾರರು ೧೮-೨೧, ೨೩-೨೧, ೨೧-೧೯ ಅಂಕಗಳ ಅಂತರದ ಗೇಮ್ ಗಳಿಂದ ಮೊಹಮ್ಮದ್ ಅನ್ಹಾಸ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಎದುರು
ಮೇಲುಗೈ ಸಾಧಿಸಿತು. ಇದರೊಂದಿಗೆ ಭಾರತ ೨-೦ ಅಂತರದ ಮುನ್ನಡೆಯೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು. ಇದಾದ ಬಳಿಕ ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲೂ ಯಶಸ್ಸು ಭಾರತದ ಪಾಲಾಯಿತು. ವಿಶ್ವದ ಮಾಜಿ ನಂ.೧ ಆಟಗಾರ ಹೈದರಾಬಾದ್ ಮೂಲದ ಕಿಡಂಬಿ ಶ್ರೀಕಾಂತ್, ಏಷ್ಯನ್ ಚಾಂಪಿಯನ್ ಜೊನಾಥನ್ ಕ್ರಿಸ್ಟೀ ಅವರನ್ನು ಕೇವಲ ೪೮ ನಿಮಿಷಗಳ ಅಂತರದಲ್ಲಿ ೨೧-೧೫ ೨೩-೨೧ ಅಂತರದ ಗೇಮ್‌ಗಳಿಂದ ಬಗ್ಗುಬಡಿದರು. ಈ ಜಯದೊಂದಿಗೆ ಭಾರತ ತಂಡ ಬೆಸ್ಟ್ ಆಫ್ ೫ ಸ್ಪರ್ಧೆಯಲ್ಲಿ ೩-೦ ಅಂತರದಲ್ಲಿ ಗೆದ್ದು ಮೊತ್ತ ಮೊದಲ ಬಾರಿ ಚಾಂಪಿಯನ್ಸ್ ಎನಿಸಿಕೊಳ್ಳುವ ಮೂಲಕ ಇತಿಹಾಸ ಬರೆಯಿತು.

ಗಣ್ಯರಿಂದ ಅಭಿನಂದನೆ: ಇದೇ ಮೊದಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಗೌತಮ್ ಗಂಭೀರ್, ವಸೀಮ್ ಜಾಫರ್ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಕೋಟಿ ರೂ. ಬಹುಮಾನ: ಪ್ರಶಸ್ತಿ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯವು ೧ ಕೋಟಿ ರೂ ಬಹುಮಾನ ಘೋಷಿಸಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ೧ ಕೋಟಿ ನಗದು ಬಹುಮಾನ ಘೋಷಿಸಿ, `ಮಲೇಷ್ಯಾ, ಡೆನ್ಮಾರ್ಕ್ ಮತ್ತು ಇಂಡೊನೇಷ್ಯಾದAಥ ಬಲಿಷ್ಠ ತಂಡಗಳನ್ನು ಮಣ ಸಿದ ಭಾರತ ಬ್ಯಾಡ್ಮಿಂಟನ್ ತಂಡ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದೆ ಎಂದಿದ್ದಾರೆ.

ಬ್ಯಾಡ್ಮಿಂಟನ್ ಸಂಸ್ಥೆಯಿAದ ೧ ಕೋಟಿ: ತಂಡದ ಆಟಗಾರರಿಗೆ ಒಟ್ಟು ೧ ಕೋಟಿ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಿಮಾಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. ನೆರವು ಸಿಬ್ಬಂದಿಗೆ ಒಟ್ಟು ೨೦ ಲಕ್ಷ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಭಾರತಕ್ಕೆ ಮೊದಲ ಚಿನ್ನ: ಈ ಹಿಂದೆ ೧೯೭೯ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದ್ದೇ ಗರಿಷ್ಠ ಸಾಧನೆಯಾಗಿತ್ತು. ಇದೀಗ ಭಾರತ ಪಂದ್ಯಾವಳಿ ಗೆಲ್ಲುವ ಮೂಲಕ ಚೊಚ್ಚಲ ಚಿನ್ನ ಗೆದ್ದ ಸಾಧನೆ ಮಾಡಿದೆ.

Translate »