ತಾಳ್ಮೆ ಕಳೆದುಕೊಂಡವರು ತೊಂದರೆಗೆ ಸಿಲುಕಲೇಬೇಕಾಗುತ್ತದೆ
ಮೈಸೂರು

ತಾಳ್ಮೆ ಕಳೆದುಕೊಂಡವರು ತೊಂದರೆಗೆ ಸಿಲುಕಲೇಬೇಕಾಗುತ್ತದೆ

January 12, 2021

ಮೈಸೂರು,ಜ.11(ಎಸ್‍ಪಿಎನ್)-ನಿತ್ಯ ಜೀವನದಲ್ಲಿ ತಾಳ್ಮೆ ಕಳೆದುಕೊಂಡ ವ್ಯಕ್ತಿಗಳು ಒಂದಿಲ್ಲೊಂದು ತೊಂದರೆ ಸಿಲುಕಬೇಕಾಗುತ್ತದೆ ಎಂದು ಹಿರಿಯ ಅಂಕಣ ಕಾರ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ದಲ್ಲಿ ನಡೆದ ‘ಜ್ಞಾನವಾರಿಧಿ-6’ ಡಿಜಿಟಲ್ ಸಾಪ್ತಾ ಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಮಹಾಭಾರತ ಸೂಕ್ಷ್ಮ ಅವಲೋಕನ’ ಕುರಿತು ಮಾತನಾಡಿದರು.

ಜೀವನದಲ್ಲಿ ಎಲ್ಲರೂ ತಾಳ್ಮೆ ಕಳೆದುಕೊಂಡರೆ ಒಂದಿ ಲ್ಲೊಂದು ತೊಂದರೆಗೆ ಸಿಲುಕಲೇಬೇಕಾಗುತ್ತದೆ. ಹಾಗೆಯೇ ಮಹಾಭಾರತದಲ್ಲಿ ಬರುವ ಪಾತ್ರದ ವ್ಯಕ್ತಿಗಳು ತಾಳ್ಮೆ ಕಳೆದುಕೊಂಡಿದ್ದರಿಂದ ಅವರು ಜೀವನ ದುರಂತ ದಲ್ಲಿ ಅಂತ್ಯವಾಯಿತು. ದ್ವೇಷದಿಂದ ಯಾರಿಗೂ ಒಳ್ಳೆಯ ದಾಗಲು ಸಾಧ್ಯವಿಲ್ಲ. ಪಾಂಡವರ ಮೇಲಿನ ದ್ವೇಷ ದಿಂದ ನೂರು ಜನ ಕೌರವರು, ಭೀಷ್ಮ, ಕರ್ಣ, ದ್ರೋಣ ಸೇರಿದಂತೆ ಮಹಾ ಮಹಿಮರು ಮಡಿದರು. ನಿಧಾನ ವಾದರೂ ಅಂತಿಮವಾಗಿ ಗೆಲ್ಲುವುದು ಧರ್ಮ, ಸತ್ಯ. ಇದು ಮಹಾಭಾರತ ಕಥೆಯಿಂದ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಂಶ ಎಂದರು.

ಸಂಕಲ್ಪ ಶಕ್ತಿಯ ಜೊತೆಗೆ ಕ್ರಿಯಾ ಶಕ್ತಿಯು ಸೇರಿದರೆ ಪ್ರತಿಯೊಬ್ಬರು ಯಶಸ್ಸು ಸಾಧಿಸಲು ಸಾಧ್ಯ ಎಂಬು ದಕ್ಕೆ ಕೃಷ್ಣಾರ್ಜುನರೇ ಉದಾಹರಣೆ. ಹಾಗಾಗಿ ಯಶಸ್ಸು ಮತ್ತು ವೈಫಲ್ಯ ನಮ್ಮ ನಿರ್ಧಾರದ ಮೇಲೆ ಅವಲಂಬಿತ ವಾಗಿರುತ್ತದೆ. ಸಜ್ಜನರ ಸಹವಾಸದಿಂದ ಯಶಸ್ಸು ದೊರೆ ತರೆ ದೃಷ್ಟರ ಸಹವಾಸ ನಮ್ಮ ವೈಫಲ್ಯಕ್ಕೆ ಕಾರಣವಾಗು ತ್ತದೆ. ಹಾಗಾಗಿ ಪ್ರತಿಯೊಬ್ಬರು ಜ್ಞಾನಮುಖಿಯಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದರು. ಮಹಾ ಭಾರತ ಎಂದೆಂದಿಗೂ ಪ್ರಸ್ತುತವಾದದು. ಅದು ಎಲ್ಲಾ ಕಾಲಕ್ಕೂ ಅನ್ವಯವಾಗುತ್ತದೆ. ಮಹಾಭಾರತ ಪಾತ್ರಗಳು ಇಂದಿಗೂ ನಮ್ಮ ಸುತ್ತಲೂ ಕಾಣಿಸುತ್ತವೆ. ಪ್ರಪಂಚದಾದ್ಯಂತ ಚಿಂತನೆ ಯನ್ನು ಕೆದಕಿದ್ದು, ಮಹಾಭಾರತ. ಅದರಷ್ಟು ಮೌಲ್ಯ ಕೃತಿ ಇನ್ನೊಂದಿಲ್ಲ. ಹಾಗಾಗಿ ಪ್ರತಿ ಯೊಬ್ಬರು ತಮ್ಮ ಜೀವನದಲ್ಲಿ ತಾಳ್ಮೆ, ಸಹನೆ, ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಮಹಾ ಭಾರತದ ಪಾತ್ರದ ವ್ಯಕ್ತಿಗಳು ತಾಳ್ಮೆ ಕಳೆದುಕೊಂಡಿ ದ್ದರಿಂದಲೇ ಅನೇಕ ಅನಾಹುತಗಳು ಸಂಭವಿಸಿವೆ ಎಂದು ಉದಾಹರಣೆ ಸಮೇತ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವ ಜನಿಕರು ಭಾಗವಹಿಸಿದ್ದರು. ಸುರೇಶ್ ಪ್ರಾರ್ಥಿಸಿದರೆ, ಮಹೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.

 

 

 

 

Translate »