ರಷ್ಯಾದಿಂದ ಭಾರತಕ್ಕೆ ಮೂರು ಮಿಲಿಯನ್ ಬ್ಯಾರಲ್ ಕಚ್ಚಾ ತೈಲ
ಮೈಸೂರು

ರಷ್ಯಾದಿಂದ ಭಾರತಕ್ಕೆ ಮೂರು ಮಿಲಿಯನ್ ಬ್ಯಾರಲ್ ಕಚ್ಚಾ ತೈಲ

March 20, 2022

ಅಮೆರಿಕದಿಂದ ಕಚ್ಚಾ ತೈಲ ಖರೀದಿಯಲ್ಲಿ ಭಾರತದ ಪಾಲು ಶೇ.೧೧ರಷ್ಟು ಹೆಚ್ಚಳ
ನವದೆಹಲಿ: ಭಾರತಕ್ಕೆ ೩ ಮಿಲಿ ಯನ್ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿ ಟೆಡ್ (ಐಒಸಿಎಲ್) ರಷ್ಯಾದ ತೈಲ ಕಂಪನಿಯೊAದಿಗೆ ಒಪ್ಪಂದ ಮಾಡಿ ಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದು ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಲ್ಲ, ತೈಲ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಪ್ಪಂದ ಆಗಿದೆ ಎಂದು ಹೇಳಲಾಗಿದೆ. ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ಪಾಶ್ಚಿ ಮಾತ್ಯ ರಾಷ್ಟçಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರೂ, ರಷ್ಯಾದ ತೈಲ ಕಂಪನಿಗಳಿAದ ಕಚ್ಚಾ ತೈಲ ಖರೀದಿಸಲು ಭಾರತೀಯ ತೈಲ ಕಂಪನಿಗಳಿಗೆ ಯಾವುದೇ ನಿರ್ಬಂಧ ಗಳಿಲ್ಲ. ಆದ್ದರಿಂದ ಎರಡೂ ಕಂಪನಿ ಗಳ ನಡುವೆ ಈ ಒಪ್ಪಂದವನ್ನು ಮಾಡಿ ಕೊಳ್ಳಲಾಗಿದೆ. ಭಾರತದ ಬಹುತೇಕ ಕಂಪನಿಗಳು ಸಹ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಸಹ ಮತ ವ್ಯಕ್ತಪಡಿಸಿವೆ ಎಂದು ಐಇಸಿಎಲ್ ಮೂಲಗಳು ತಿಳಿಸಿವೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಒಂದು ಬ್ಯಾರಲ್‌ಗೆ ಗರಿಷ್ಠ ೧೦೦ ಡಾಲರ್ (ಸುಮಾರು ೭,೫೯೪.೬೭ ರೂ.) ಇರುತ್ತಿತ್ತು. ಆದರೆ ಉಕ್ರೇನ್ ಆಕ್ರಮಣದ ನಂತರ ಕಚ್ಚಾ ತೈಲವು ಬ್ಯಾರಲ್‌ಗೆ ೧೪೦ ಡಾಲರ್ (ಸುಮಾರು ೧೦,೬೩೨.೫೩ ರೂ.) ತಲುಪಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಕಂಪನಿಗಳು ಅಂದಾಜಿಸಿವೆ.
ಅಮೆರಿಕದ ಆಮದು ಶೇ.೧೧ ಹೆಚ್ಚಳ: ರಷ್ಯಾದ ಮೇಲಿನ ನಿರ್ಬಂಧವನ್ನು ತಿರಸ್ಕರಿಸಿರುವ ಭಾರತವು ಪ್ರಸಕ್ತ ವರ್ಷದಲ್ಲಿ ಅಮೆರಿಕದಿಂದಲೂ ಶೇ.೧೧ ರಷ್ಟು ಕಚ್ಚಾ ತೈಲ ಆಮದು ಮಾಡಿಕೊಂಡಿರುವುದು ಕಂಡುಬAದಿದೆ. ಈಗಾಗಲೇ ಭಾರತವು ಇರಾಕ್‌ನಿಂದÀ ಶೇ.೨೩, ಸೌದಿ ಅರೇಬಿಯಾದಿಂದ ಶೇ.೧೮ರಷ್ಟು ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಶೇ.೧೧ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ನಡುವೆ ಭಾರತೀಯ ಮಾರುಕಟ್ಟೆಯ ಯುಎಸ್ ಪಾಲು ಶೇ.೮ಕ್ಕೆ ಏರಲಿದೆ ಎಂದು ಹೇಳಲಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಶೇ.೧೧ ರಷ್ಟು ಆಮದು ಮಾಡಿಕೊಂಡಿರುವುದು ಗಮನಾರ್ಹ ಅಂಶವಾಗಿದೆ.

Translate »