ಮೈಸೂರು, ಜೂ.15(ಎಂಟಿವೈ)- ರಾಜ್ಯ ಬಿಜೆಪಿ ಸರ್ಕಾರ ಸುಗ್ರ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ರೈತರ ಬೆನ್ನೆಲುಬು ಮುರಿಯಲು ಮುಂದಾಗಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಸಭಾಂಗಣ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಡವರು, ರೈತರು ಹಾಗೂ ಶ್ರಮಿಕ ವರ್ಗದ ಹಿತಾಸಕ್ತಿ ಬಲಿ ಕೊಟ್ಟಿದೆ. ಕೇವಲ ಕಾರ್ಪೋರೇಟ್ ಕಂಪನಿ ಹಾಗೂ ಉಳ್ಳ ವರ ಹಿತಕಾಯುವ ಯೋಜನೆಗಳಷ್ಟೇ ಜಾರಿಗೆ ತಂದು ಬಂಡವಾಳ ಶಾಹಿಗಳು ಆದಾಯ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ ಎಂದರು.
ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಅಧಿಕಾರಾ ವಾಧಿಯಲ್ಲಿ ಜಾರಿಗೆ ತಂದಿದ್ದ ಭೂ ಸುಧಾ ರಣೆ ಕಾಯಿದೆ 1961ರಲ್ಲಿ ರೈತರ ಹಿತ ಕಾಯುವ ಹಾಗೂ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಹಲವು ಅಂಶಗಳಿ ದ್ದವು. ಈ ಕಾಯ್ದೆಯ ಸೆಕ್ಷನ್ 79 `ಎ’ ಮತ್ತು `ಬಿ’ ಅನ್ವಯ ಕೃಷಿ ಭೂಮಿಯನ್ನು ಖರಿದಿಸುವವರು ಕೃಷಿಯೇತರ ವರ ಮಾನ 25 ಲಕ್ಷ ರೂ. ಮಿತಿಗೊಳಿಸಲಾಗಿತ್ತು. ಕೃಷಿಕರು ಹೊರತುಪಡಿಸಿ ಬೇರ್ಯಾರು ಕೃಷಿ ಭೂಮಿ ಖರೀದಿಗೆ ಅವಕಾಶ ನೀಡರ ಲ್ಲಿಲ್ಲ. ಸೆಕ್ಷನ್ 80ರ ಅಡಿಯಲ್ಲಿ ಕೃಷಿಕನಲ್ಲದ ವ್ಯಕ್ತಿ ಬೇಸಾಯ ಮಾಡುವ ಉದ್ದೇಶ ದಿಂದ ಸಂಬಂಧಪಟ್ಟ ಜಿಲ್ಲಾಧಿಕಾರಿ ಗಳಿಂದ ಅನುಮತಿ ಪಡೆದು ಕೃಷಿ ಭೂಮಿ ಯನ್ನು ಖರೀದಿಸಿ, ವರ್ಷದೊಳಗೆ ವ್ಯವ ಸಾಯ ಆರಂಭಿಸುವ ನಿರ್ಬಂಧ ಹೇರ ಲಾಗಿತ್ತು. ಈ ಕಟ್ಟುನಿಟ್ಟಿನ ನಿಯಮದಿಂದ ಕೃಷಿ ಭೂಮಿ ರಕ್ಷಣೆಗೆ ಸಾಧ್ಯವಾಗಿತ್ತು. ಆದರೆ ಇದೀಗ ಕಾಯಿದೆಗೆ ತಿದ್ದುಪಡಿ ಮಾಡಿ ರುವುದರಿಂದ ಕೃಷಿ ಭೂಮಿ ಕಳೆದು ಕೊಳ್ಳುವ ಆತಂಕ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾಯಿದೆಗೆ ತಿದ್ದುಪಡಿ ತರಬೇಕೆಂದರೆ ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕು. ಆದರೆ ವಿಪಕ್ಷಗಳನ್ನು ಎದುರಿಸಲಾಗದೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಪ್ರಜಾಪ್ರಭುತ್ವದ ಆಶಯ ಗಳನ್ನು ಗಾಳಿಗೆ ತೂರಿದ್ದಾರೆ. ಈ ಸಂಬಂಧ ಕೂಡಲೇ ತುರ್ತು ಅಧಿವೇಶನ ಕರೆದು ಕೂಲಂಕಷವಾಗಿ ಚರ್ಚಿಸಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ನಮ್ಮಲ್ಲಿ ಗುಂಪು ಕೃಷಿ ಚಟುವಟಿಕೆಗೆ ಉತ್ತೇ ಜನ ನೀಡಬೇಕು. ಚಾಮರಾಜನಗರದಲ್ಲಿ 15 ಮಂದಿ ರೈತರು ಸೇರಿಕೊಂಡು 5 ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಬಂದ ಲಾಭವನ್ನು ಸಮಾನವಾಗಿ ಹಂಚಿಕೊಳ್ಳುತ್ತಿ ದ್ದಾರೆ. ಇದೇ ಮಾದರಿಯನ್ನು ರಾಜ್ಯಾ ದ್ಯಂತ ವಿಸ್ತರಿಸಬೇಕು. ಕೆಎಂಎಫ್ ರೀತಿ ಯಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಕೃಷಿಗೆ ಉತ್ತೇಜನ ನೀಡಬೇಕು. ರೈತರಿಗೆ ಪೂರಕವಾಗಿದ್ದ ಎಪಿಎಂಸಿ, ಹಾಪ್‍ಕಾಮ್ಸ್ ಕಾಯಿದೆಗೂ ತಿದ್ದುಪಡಿ ತಂದು ಮರಣ ಶಾಸನ ಬರೆದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಹಿಂದಿನ ಹೋರಾಟಗಳನ್ನು ಮರೆಯಬಾರದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಹೆಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಪತ್ರಿಕಾ ಕಾರ್ಯದರ್ಶಿ ಮಹೇಶ್, ಡಿಸಿಸಿ ಕಾರ್ಯ ದರ್ಶಿ ರಘು ಮತ್ತಿತರರು ಇದ್ದರು.