ಹನಗೂಡು ಸುತ್ತಮುತ್ತ ಹುಲಿ ಉಪಟಳ
ಮೈಸೂರು

ಹನಗೂಡು ಸುತ್ತಮುತ್ತ ಹುಲಿ ಉಪಟಳ

May 6, 2021

ಹುಣಸೂರು, ಮೇ 5 (ಕೆಕೆ)-ತಾಲೂಕಿನ ಹನಗೂಡು ಸುತ್ತಮುತ್ತ ಸಂಚರಿಸುತ್ತಿರುವ ಹುಲಿಯೊಂದು ಕಳೆದ ಐದಾರು ದಿನಗಳಿಂದ ಐದು ಹಸುಗಳನ್ನು ಬಲಿ ಪಡೆದುಕೊಂಡಿದ್ದು, ಹುಲಿಯ ಸೆರೆಗೆ ಸುತ್ತ ಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಸೋಮವಾರ ರಾತ್ರಿ ನಾಗರಹೊಳೆ ಉದ್ಯಾ ನವನದ ಅಂಚಿನಲ್ಲಿ ದೊಡ್ದಹೆಜ್ಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನ ಪುರ ಗ್ರಾಮದ ಪುಟ್ಟೇಗೌಡರ ಮಗ ದೇವ ರಾಜ್ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವನ್ನು ಕೊಂದು, ಸುಮಾರು 150 ಅಡಿ ದೂರ ಎಳೆದೊಯ್ದು ಭಾಗಶಃ ತಿಂದು ಹಾಕಿದೆ.

ಹುಲಿ ದಾಳಿ ಇಡುತ್ತಿದ್ದಂತೆ ಹಸು ಚೀರಿ ಕೊಂಡಿದೆ. ಶಬ್ದ ಕೇಳಿ ಮನೆಯ ವರು ಒಳಗಿ ನಿಂದಲೇ ಹುಲಿಯನ್ನು ಬೆದರಿಸಿದ್ದಾರೆ. ಹೆದರಿ ಹೋದ ಹುಲಿ ಮತ್ತೆ ಕೆಲ ಸಮಯದ ನಂತರ ಕೊಟ್ಟಿಗೆಗೆ ಬಂದು ಹಸುವನ್ನು ಎಳೆದೊಯ್ದಿದೆ.

ಜಾನುವಾರುಗಳ ಬಲಿ: ಕಳೆದ ಮಾರ್ಚ್ ನಲ್ಲಿ ಕಚುವಿನಳ್ಳಿಯ ವಸಂತಕುಮಾರ್ ಅವರ ಹಸು ಐದಾರು ದಿನಗಳ ಹಿಂದೆ ನೇಗತ್ತೂರಿನ ಚಂದ್ರೇಗೌಡರ ಹಸು, ಎರಡು ದಿನಗಳ ಹಿಂದೆಷ್ಟೆ ಕಚುವಿನ ಹಳ್ಳಿಯ ಸಿದ್ದೇಗೌಡರ ಹಸುವನ್ನು ತರಗನ್ ತೋಟದ ಬಳಿ ಕೊಂದು ಹಾಕಿದೆ. ಘಟನಾ ಸ್ಥಳಕ್ಕೆ ವೀರನಹೊಸಳ್ಳಿ ವಲಯದ ಆರ್‍ಎಫ್‍ಓ ನಮನ ನಾರಾ ಯಣ್ ನಾಯಕ್, ಡಿಆರ್ ಎಫ್‍ಓ ದ್ವಾರಕ ನಾಥ್, ಅರಣ್ಯರಕ್ಷಕ ಹನು ಮಂತಪ್ಪ ಭೇಟಿ ನೀಡಿ, ಸ್ಥಳ ಪರಿ ಶೀಲಿಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಹನಗೂಡು ಪಶುವೈದ್ಯ ಡಾ.ದರ್ಶನ್ ಮರಣೋತ್ತರ ಪರೀಕ್ಷೆ ನಡೆಸಿದರು.

ಹುಲಿ ಹಿಡಿಯಲು ಗ್ರಾಮಸ್ಥರ ಆಗ್ರಹ: ಹನ ಗೂಡು ಭಾಗದಲ್ಲಿ ಹಲವಾರು ಗಿರಿಜನರ ಹಾಡಿಗಳಿದ್ದು, ಹುಲಿಯ ಉಪಟಳದಿಂದ ಕಾಡಂಚಿನ ಗ್ರಾಮಸ್ಥರು ಭಯಭೀತರಾಗಿ ದ್ದಾರೆ. ಜಮೀನುಗಳಿಗೆ ತೆರಳಲು ಹೆದರು ತ್ತಿದ್ದಾರೆ. ಬೋನು ಇಟ್ಟು ಹುಲಿ ಸೆರೆ ಹಿಡಿದು, ಈ ಭಾಗದ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Translate »