ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವರಿಷ್ಠರ ಬುಲಾವ್
News

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವರಿಷ್ಠರ ಬುಲಾವ್

January 20, 2022

ಬೆಂಗಳೂರು, ಜ.19(ಕೆಎಂಶಿ)-ಕೋವಿಡ್ ಸೋಂಕಿ ನಿಂದ ಗುಣಮುಖರಾಗಿರುವ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರಿಗೆ ದೆಹಲಿಗೆ ಬರುವಂತೆ ವರಿಷ್ಠರು ಬುಲಾವ್ ಮಾಡಿದ್ದಾರೆ.

ವರಿಷ್ಠರ ಸಂದೇಶ ಬರುತ್ತಿದ್ದಂತೆ sಸಿಎಂ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ, ಸುಮಾರು 30 ನಿಮಿಷಗಳ ಕಾಲ ಮುಖಾಮುಖಿ ಚರ್ಚೆ ಮಾಡಿದರು.

ಇದಾದ ನಂತರ ಸಂಪುಟದ ಹಿರಿಯ ಸಹೋದ್ಯೋಗಿ ಹಾಗೂ ಆತ್ಮೀಯ ಸ್ನೇಹಿತ ಆರ್.ಅಶೋಕ್ ಅವರನ್ನು ತಮ್ಮ ಗೃಹ ಕಚೇರಿಗೆ ಕರೆಸಿಕೊಂಡು ಸುದೀರ್ಘ ಚರ್ಚೆ ಮಾಡಿದರು. ಈ ಭೇಟಿಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಚರ್ಚೆ ಮಾಡಿದ್ದಾರೆ. ಆದರೆ ಚರ್ಚೆಯ ಮಾಹಿತಿ ಲಭ್ಯವಾಗಿಲ್ಲ.

ಯಡಿಯೂರಪ್ಪನವರು ಮಂತ್ರಿಮಂಡಲವನ್ನು ಪುನ ರ್ರಚಿಸಿ, ಕೆಲವರನ್ನು ಕೈಬಿಟ್ಟು ಹೊಸಬರನ್ನು ತೆಗೆದುಕೊಳ್ಳಿ, ಪುನರ್ ರಚನೆ ಸಂದರ್ಭದಲ್ಲಿ ತಮ್ಮ ಪುತ್ರ ವಿಜಯೇಂದ್ರ ನಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕೆಂದು ಹೇಳಿ ದ್ದಾರೆ ಎನ್ನಲಾಗಿದೆ. ಯಡಿಯೂರಪ್ಪನವರ ಭೇಟಿ ಸಂದರ್ಭ ದಲ್ಲೇ ರಾಜ್ಯ ರಾಜಕೀಯದ ಬಗ್ಗೆ ಏನು ತೀರ್ಮಾನ ಕೈಗೊಳ್ಳ ಬಹುದು ಎಂಬ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಆರೋಗ್ಯ ಸಮಸ್ಯೆ ಮತ್ತು ಬಿಟ್ ಕಾಯಿನ್ ಆರೋಪದ ಹಿನ್ನೆಲೆಯಲ್ಲಿ ನಾಯಕತ್ವದ ಬದಲಾವಣೆ ಮಾತುಗಳು ಕೇಳಿ ಬಂದವು. ಈ ಸಂದರ್ಭದಲ್ಲಿ ಬೊಮ್ಮಾಯಿ ಅವರು, ದೆಹಲಿಗೆ ಹೋಗಿ ಬಂದಿದ್ದರು.

ಈಗ ಮತ್ತೆ ವರಿಷ್ಠರು ಬುಲಾವ್ ಮಾಡಿರುವುದು ಆಡಳಿತ ರೂಢ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಮುಖ್ಯಮಂತ್ರಿಯವರು ಇಂದು ಎಡೆ ಬಿಡದೆ ಪಕ್ಷದ ಮುಖಂಡರೊಟ್ಟಿಗೆ ಚರ್ಚೆ ನಡೆಸುತ್ತಿ ರುವುದು ಈ ಎಲ್ಲಾ ಬೆಳವಣಿಗೆಗೆ ಇಂಬು ಕೊಡುತ್ತಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದರೆ ದೊಡ್ಡ ಪ್ರಮಾಣದಲ್ಲಿ ಸಂಪುಟ ಪುನರ್ರಚನೆ ಮಾಡಲು ಮುಖ್ಯಮಂತ್ರಿಯವರಿಗೆ ಅವಕಾಶ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಹಿರಿಯ ಸಚಿವರನ್ನು ಮಂತ್ರಿ ಮಂಡಲದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳ ಬಹುದು. ಎಲ್ಲವೂ 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬದಲಾವಣೆ ತರಲು ವರಿಷ್ಠರು ಮುಂದಾಗಿದ್ದಾರೆ.

Translate »