ನಾಳೆ ಚುಟುಕು ಕವಿಗೋಷ್ಠಿ
ಮೈಸೂರು

ನಾಳೆ ಚುಟುಕು ಕವಿಗೋಷ್ಠಿ

November 18, 2019

ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತವಾಗಿ ನ.19ರಂದು ಬೆಳಿಗ್ಗೆ 10 ಗಂಟೆಗೆ ವಿಜಯ ನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಚುಟುಕು ಕವಿಗೋಷ್ಠಿ ಮತ್ತು ಈಶ್ವರ ಮಮದಾಪುರ ಹನಿಗವಿತೆಗಳು ಕೃತಿ ಲೋಕಾರ್ಪಣೆ ಸಮಾರಂಭ ಏರ್ಪಡಿಸ ಲಾಗಿದೆ. ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಶಾಸಕ ತೋಂಟದಾರ್ಯ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ಸಿಪಿಕೆ ಅವರು ಗೋಕಾಕ್ ತಾಲೂಕಿನ ಕವಿ ಈಶ್ವರ ಮಮದಾಪುರ ಅವರ ವಿರಚಿತ ಮಮದಾಪುರ ಹನಿಗವಿತೆಗಳು ಕೃತಿಯನ್ನು ಲೋಕಾರ್ಪಣೆ ಮಾಡುವರು. ಕೃತಿಯ ಪ್ರಕಾಶಕ ಡಾ. ಎಂ.ಜಿ.ಆರ್.ಅರಸ್ ಕೃತಿ ಕುರಿತು ಮಾತನಾಡುವರು. ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಅಧ್ಯಕ್ಷ ರತ್ನಹಾಲಪ್ಪಗೌಡ, ಗೋಕಾಕ್‍ನ ಕವಿ ಈಶ್ವರ ಮಮದಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Translate »